/newsfirstlive-kannada/media/media_files/2025/11/25/hublu-gold-2025-11-25-12-19-43.jpg)
ಬೆಂಗಳೂರಲ್ಲಿ ನಡೆದ ದರೋಡೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ದರೋಡೆ ಪ್ರಕರಣ ನಡೆದಿದೆ. ಚಿನ್ನಾಭರಣ ವ್ಯಾಪಾರಿಗೆ ಇಡಿ ಹೆಸರು ಹೇಳಿಕೊಂಡು ಆತನನ್ನು ಕರೆದುಕೊಂಡು ಹೋದ ಕಿರಾತಕರು, ಆತನ ಬಳಿಯಿದ್ದ ಮೂರು ಕೋಟಿಗೂ ಹೆಚ್ಚು ಬೆಲೆಬಾಳೋ ಚಿನ್ನಾಭರಣ ಹಾಗೂ ಮೊಬೈಲ್, ಸಿಮ್ ಕಾರ್ಡ್ ದೋಚಿಕೊಂಡು ಹೋಗಿರೋ ಘಟನೆ ನಡೆದಿದೆ.
3 ಕೋಟಿಗೂ ಅಧಿಕ ಬೆಲೆಬಾಳೋ ಚಿನ್ನಾಭರಣ ದೋಚಿ ಪರಾರಿ
ಇಡಿ, ಸಿಬಿಐ ಸೇರಿ ಕೇಂದ್ರ ತನಿಖಾ ಸಂಸ್ಥೆಗಳ ಹೆಸರಲ್ಲಿ ವಂಚನೆ ಮಾಡೋ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದೆ. ಹುಬ್ಬಳ್ಳಿಯ ಚಿನ್ನದ ವ್ಯಾಪಾರಿಯನ್ನ ಇಡಿ ಅಧಿಕಾರಿಗಳ ಹೆಸರಲ್ಲಿ ಅಡ್ಡಗಟ್ಟಿ ಕೋಟ್ಯಾಂತರ ರೂಪಾಯಿ ಚಿನ್ನಾಭರಣ ಲೂಟಿ ಮಾಡಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ದರೋಡೆಗೆ ಒಳಗಾದ ವ್ಯಕ್ತಿ ಸುದಿನ್​ ಕೇರಳ ಮೂಲದವನು. ಚಿನ್ನಾಭರಣಗಳನ್ನ ಸಿದ್ಧಮಾಡಿ, ಅವುಗಳನ್ನು ಅಂಗಡಿಗಳಿಗೆ ಪೂರೈಸುವ ಕೆಲಸ ಮಾಡ್ತಿದ್ದ. ನವೆಂಬರ್​ 16ರಂದು ಮಂಗಳೂರಿನಿಂದ ಬೆಳಗಾವಿಗೆ ಬಂದಿದ್ದ ಸುದಿನ್​, ಚಿನ್ನಾಭರಣ ಮಾಲೀಕರಿಗೆ ಡಿಸೈನ್​ ತೋರಿಸಿ ಆರ್ಡರ್​ ಪಡೆದಿದ್ದ. ಬಳಿಕ ನವೆಂಬರ್​ 17 ರಂದು ಹುಬ್ಬಳ್ಳಿಗೆ ಬಂದು ಲಾಡ್ಜ್​ನಲ್ಲಿ ರೂಮ್ ಮಾಡಿದ್ರು.. ನಂತರ ನವೆಂಬರ್​ 19ರಂದು ಧಾರವಾಡಕ್ಕೆ ತೆರಳಿ ಚಿನ್ನಾಭರಣ ವ್ಯಾಪರಸ್ಥರನ್ನು ಭೇಟಿ ಆಗಿ, ಅದೇ ದಿನ ಮಧ್ಯಾಹ್ನ 3 ಗಂಟೆಗೆ ಹುಬ್ಬಳ್ಳಿ ನಗರಕ್ಕೆ ಬಸ್​ನಲ್ಲಿ ಸುದಿನ್​ ಮತ್ತು ಆತನ ಆಪ್ತ ವಿವೇಕ್​ ವಾಪಸ್​​ ಆಗಿದ್ದರು. ಬಸ್​​ ಇಳಿದು ನಿಲಿಜನ್ ರಸ್ತೆಯ ಮೂಲಕ ಲಾಡ್ಜ್​ಗೆ ತೆರಳುತ್ತಿದ್ದ ಸುದಿನ್ ಮತ್ತು ವಿವೇಕ್​ನನ್ನು ಕಾರಿನಲ್ಲಿ ಬಂದ ಐವರು ತಡೆದಿದ್ದಾರೆ. ಬಳಿಕ ನಾವು ಇ.ಡಿ ಅಧಿಕಾರಿಗಳು.. ನೀವಿಬ್ಬರೂ ಗೋಲ್ಡ್ ಸ್ಮಗ್ಲಿಂಗ್ ಮಾಡ್ತಿದ್ದೀರಿ, ನಿಮ್ಮನ್ನು ತನಿಖೆ ಮಾಡಬೇಕು ಬನ್ನಿ ಎಂದು ಸುದಿನ್​ ಮತ್ತು ವಿವೇಕ್​ನನ್ನು ತಮ್ಮ ಕಾರಿಗೆ ಹತ್ತಿಸಿಕೊಂಡಿದ್ದಾರೆ. ಬಳಿಕ ಬೆಳಗಾವಿ ಬಳಿ ಕರೆದೊಯ್ದು ನಕಲಿ ಇಡಿ ಅಧಿಕಾರಿಗಳು ಸುದಿನ್​ ಬಳಿ ಇದ್ದ 2 ಕೆಜಿ 942 ಗ್ರಾಂ ಚಿನ್ನಾಭರಣ, ನಗದು, ಮೊಬೈಲ್​​ ಕಸಿದುಕೊಂಡು. ಇಬ್ಬರನ್ನೂ ಎಂ.ಕೆ. ಹುಬ್ಬಳ್ಳಿ ಎಂಬಲ್ಲಿ ಕಾರ್​ನಿಂದ ಇಳಿಸಿ ಪರಾರಿ ಆಗಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಈ ಘಟನೆಯಿಂದ ಕಂಗಾಲಾಗಿದ್ದ ಸುದಿನ್​.. ನವೆಂಬರ್​ 22 ರಂದು ಹುಬ್ಬಳ್ಳಿ ನಗರದ ಉಪನಗರ ಠಾಣೆಗೆ ಆಗಮಿಸಿ ದೂರು ನೀಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ಪರಿಚಯಸ್ಥರೇ ಈ ಕೃತ್ಯವೆಸಗಿರುವ ಸಂಶಯ ಕೂಡ ಇದ್ದು, ಈ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.
ಒಟ್ಟಾರೆ. ಹುಬ್ಬಳ್ಳಿ ಪೊಲೀಸರು ಸೂಕ್ತ ರೀತಿ ತನಿಖೆ ನಡೆಸಿ, ಆರೋಪಿಗಳು ಯಾರು.. ನಿಜವಾಗಿಯೂ ಸುದಿನ್ ಹೇಳಿರೋದು ಸತ್ಯಾನಾ ಅನ್ನೋದನ್ನು ಅನ್ನೊದು ತನಿಖೆಯಿಂದ ಬಹಿರಂಗವಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us