/newsfirstlive-kannada/media/media_files/2025/08/10/murrel-fish-2025-08-10-17-55-43.jpg)
ಕೇರಳದ ಅಲಪ್ಪುಳ (Alappuzha) ಜಿಲ್ಲೆಯ ಚಾರುಮ್ಮೂಡ್ ಮೂಲದ ಸನೋಜ್ಗೆ ಮೀನುಗಾರಿಕೆ ಎಂದರೆ ಬಾಲ್ಯದಿಂದಲೂ ತುಂಬಾನೇ ಇಷ್ಟ. ಮದ್ವೆಯಾದ ನಂತರವೂ ಅವರು ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ.
ಹೊಟ್ಟೆಯಲ್ಲಿ ಏನಿತ್ತು..?
ಅಂತೆಯೇ ಈಗ ಮಳೆಗಾಲ ಬೇರೆ! ಕೆರೆ, ಹೊಳೆಗಳಿಗೆ ಹೋಗಿ ಮೀನು ಹಿಡಿಯುತ್ತಿದ್ದರು. ನಿನ್ನೆ ಸಂಜೆ ಮನೆಯ ಕೆಲಸಗಳನ್ನು ಮುಗಿಸಿ ಕೊಳದಲ್ಲಿ ಮೀನು ಹಿಡಿಯಲು ಹೋಗಿದ್ದರು. ಗಾಳ ಹಾಕಿ ಕೂತಾಗ ಮೀನೊಂದು ಕಚ್ಚಿತ್ತು. ಗಾಳಕ್ಕೆ ಸಿಲುಕಿರೋದು ಪಕ್ಕಾ ಆಗ್ತಿದ್ದಂತೆಯೇ ಎಳೆದಾಗ ಬರೋಬ್ಬರಿ 900 ಗ್ರಾಂ ತೂಕ ಇರುವ ಮುರ್ರೆ ಮೀನು ಬಲೆಗೆ ಬಿದ್ದಿತ್ತು. ಇವತ್ತು ಮೀನು ಊಟ ಮಾಡಬಹುದು ಅಂತಾ ಸನೋಜ್ ಖುಷಿಯಿಂದ ಮನೆಗೆ ತಂದಿದ್ದರು.
ಅಂತೆಯೇ ಸನೋಜ್ ಪತ್ನಿ ಸಂಜೆ ಊಟಕ್ಕೆ ಮೀನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದಳು. ಚಾಕುವಿನಿಂದ ಕತ್ತರಿಸುತ್ತಿದ್ದಾಗ ಹೊಟ್ಟೆಯಲ್ಲಿ ಹಾವಿನ ಚರ್ಮದಂಥ ವಸ್ತು ಕಂಡಿದೆ. ಅದು ಏನೆಂದು ನೋಡಲು ಇಡೀ ಹೊಟ್ಟೆ ಬಗೆದಾಗ ಎರಡು ಅಡಿ ಉದ್ದದ ನಾಗರಹಾವು ಸಿಕ್ಕಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಭಾರೀ ಮಳೆ.. ಸಂಡೆ ಮಜಾದಲ್ಲಿದ್ದ ಮಂದಿಗೆ ಮಳೆರಾಯ ಕಿರಿಕಿರಿ..!
ಅದನ್ನು ಹೊರತೆಗೆದು ಎಚ್ಚರಿಕೆಯಿಂದ ನೋಡಿದಾಗ.. ಹಾವಿನ ಚರ್ಮ ಈಗಾಗಲೇ ಕೊಳೆಯುತ್ತಿತ್ತು. ಹಾವಿನ ತಲೆ ಬಹುತೇಕ ಹಾಗೆಯೇ ಇತ್ತು. ತಲೆಯ ಮೇಲಿನ ವಿಶಿಷ್ಟ ಪಟ್ಟೆಗಳನ್ನು ನೋಡಿ.. ಕುಟುಂಬದ ಸದಸ್ಯರು ಅದು ನಾಗರಹಾವು ಎಂದು ಗುರುತಿಸಿದರು. ಈ ದೃಶ್ಯವನ್ನು ನೋಡಿದ ಎಲ್ಲರೂ ಆಘಾತಕ್ಕೊಳಗಾದರು. ಕೊನೆಗೆ ಹೊಲದ ಪಕ್ಕ ಗುಂಡಿ ಅಗೆದು ಹಾವನ್ನು ಹೂಳಿದ್ದಾರೆ. ಮೀನುಗಾರರು ಹೇಳುವಂತೆ, ಮುರ್ರೆ ಮೀನು ಸಣ್ಣ ಹಾವುಗಳನ್ನು ನುಂಗುತ್ತವೆ. ಆದರೆ ನಾಗರಹಾವನ್ನು ತಿಂದಿದ್ದನ್ನು ಇದೇ ಮೊದಲ ಬಾರಿಗೆ ನೋಡಿರೋದು ಎಂದಿದ್ದಾರೆ.
ಇದನ್ನೂ ಓದಿ: ‘ನಾನು ಆ ಕ್ಲಾಸ್ನಲ್ಲಿ ನಿದ್ದೆ ಮಾಡ್ತಿದ್ದೆ’.. ಮೆಟ್ರೋದಲ್ಲಿ ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಸ್ವಾರಸ್ಯಕರ ಮಾತು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ