/newsfirstlive-kannada/media/post_attachments/wp-content/uploads/2025/05/RAIN-26.jpg)
ಬೆಂಗಳೂರು: ಸಿಲಿಕಾನ್​​ ಸಿಟಿ ವರುಣನ ಅಬ್ಬರ ಜೋರಾಗಿದೆ. ನಗರದ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮೆಜೆಸ್ಟಿಕ್​​, ಕಾರ್ಪೊರೇಷನ್, ಕೆಆರ್​ ಮಾರುಕಟ್ಟೆ ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ.
ಇದನ್ನೂ ಓದಿ: ಹಳದಿ ಮಾರ್ಗದ ಮೆಟ್ರೋ ಟ್ರೈನ್​ ದರ ಹೇಗಿದೆ.. ಎಲ್ಲಿಂದ ಎಲ್ಲಿವರೆಗೆ ಎಷ್ಟು ರೂಪಾಯಿ ಕೊಡಬೇಕು?
/filters:format(webp)/newsfirstlive-kannada/media/media_files/2025/08/05/karnataka-rain222-2025-08-05-13-52-14.jpg)
ಮಳೆ ಅಬ್ಬರಕ್ಕೆ ರಸ್ತೆಗಳ ತುಂಬೆಲ್ಲಾ ನೀರು ಹರಿದು ಹೋಗುತ್ತಿವೆ. ಅಲ್ಲದೇ ಜೋರು ಮಳೆಯಿಂದ ವಾಹನ ಸವಾರರು, ಬೀದಿ ಬದಿ ವ್ಯಾಪಾರಿಗಳು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಅಷ್ಟೇ ಅಲ್ಲದೇ ವೀಕೆಂಡ್ ಅಂತ ಕುಟುಂಬಸ್ಥರ ಜೊತೆಗೆ ಮನೆಯಿಂದ ಆಚೆ ಬಂದವರು ಪರಾದಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ಇನ್ನೂ, ವಂದೇ ಭಾರತ್ ರೈಲು ಹಾಗೂ ನಮ್ಮ ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ ಮಾಡಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮನಿಸಿದ್ದರು. ಲೋಕಾರ್ಪಣೆ ಮುಕ್ತಾಯಗೊಳ್ಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಗೂ ಮಳೆರಾಯ ಕಾಟ ಕೊಟ್ಟಿದ್ದಾನೆ. ಭಾರಿ ಮಳೆಯಿಂದ ರಸ್ತೆ ಮಾರ್ಗವಾಗಿ HAL ಏರ್​ಪೋರ್ಟ್​ಗೆ ಹೆಲಿಕಾಪ್ಟರ್​ ಬದಲು ಕಾರಿನಲ್ಲಿ ಮೋದಿ ಪ್ರಯಾಣ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us