/newsfirstlive-kannada/media/media_files/2026/02/02/bla-attacker-2026-02-02-10-44-44.jpg)
ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯ ಬಲೂಚಿಸ್ತಾನ್ ರಣರಂಗವಾಗಿ ಮಾರ್ಪಟ್ಟಿದೆ. ಬಲೂಚ್ ಲಿಬರೇಷನ್ ಆರ್ಮಿ (BLA) ನಡೆಸಿದ ಸರಣಿ ದಾಳಿಗಳಿಂದ ಪಾಕಿಸ್ತಾನ ನಲುಗಿ ಹೋಗಿದೆ. ‘ಆಪರೇಷನ್ ಹೇರೋಫ್ ಫೇಸ್-2’ (Operation Herof Phase II) ಹೆಸರಿನಲ್ಲಿ ಕಳೆದ 40 ಗಂಟೆಗಳಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಸುಮಾರು 200ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನ ಹತ್ಯೆ ಮಾಡಿರುವುದಾಗಿ ಬಿಎಲ್‌ಎ ( Balochistan Liberation Army) ಹೇಳಿಕೊಂಡಿದೆ.
ಮಹಿಳಾ ಬಾಂ*ಬರ್‌ಗಳ ಎಂಟ್ರಿ!
ಈ ಬಾರಿಯ ದಾಳಿಯಲ್ಲಿ ಮಹಿಳಾ 'ಫಿದಾಯಿ'ಗಳ (Suicide Bombers) ಬಳಕೆ ಮಾಡಲಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ನ ನೋಷ್ಕಿ ಕಚೇರಿಯ ಮೇಲೆ 24 ವರ್ಷದ ಆಸಿಫಾ ಮೆಂಗಲ್ ಎಂಬ ಮಹಿಳಾ ಬಾಂಬರ್ ದಾಳಿ ನಡೆಸಿದ್ದಾಳೆ. ಈ ದಾಳಿಯಲ್ಲಿ 17 ಪಾಕ್ ಯೋಧರು ಸೇರಿ ಒಟ್ಟು 57 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದಾಳಿ ಮಾಡಿದ ಇಬ್ಬರು ಮಹಿಳೆಯರ ಫೋಟೋವನ್ನು ಬಿಎಲ್​ಎ ರಿಲೀಸ್ ಮಾಡಿದೆ.
ಖಾರನ್, ಮಸ್ತುಂಗ್, ತುಂಪ್ ಮತ್ತು ಪಸ್ನಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಾಕಿಸ್ತಾನಿ ಸೇನೆ ಮೇಲೆ ಅಟ್ಯಾಕ್ ಮಾಡಲಾಗಿದೆ. ಈ ದಾಳಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಪಾಕ್ ಸೈನಿಕರು, ಪೊಲೀಸರು ಮತ್ತು ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಕೆಲವು ಪಾಕಿಸ್ತಾನಿ ಸೈನಿಕರನ್ನು ಬಿಎಲ್‌ಎ ಸೆರೆಹಿಡಿದಿದೆ. ನೋಷ್ಕಿಯ ಡೆಪ್ಯುಟಿ ಕಮಿಷನರ್ ಮತ್ತು ಅಸಿಸ್ಟೆಂಟ್ ಕಮಿಷನರ್ ಅವರನ್ನು ಅಪಹರಿಸಿ ನಂತರ ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಬಿಎಲ್​ಎ ಹೇಳಿಕೊಂಡಿದೆ.
ಪಾಕಿಸ್ತಾನ ಸೇನೆಯ ಹೇಳಿದ್ದೇನು..?
ಇತ್ತ ಪಾಕಿಸ್ತಾನ ಸೇನೆಯು ಬಿಎಲ್‌ಎ ಹೇಳಿಕೆಯನ್ನು ತಳ್ಳಿಹಾಕಿದ್ದು, ಕಳೆದ ಎರಡು ದಿನಗಳಲ್ಲಿ ನಡೆಸಿದ ಪ್ರತಿದಾಳಿಯಲ್ಲಿ 133ಕ್ಕೂ ಹೆಚ್ಚು ಬಲೂಚ್ ಬಂಡುಕೋರರನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ತನ್ನ ಸೈನಿಕರ ಸಾವಿನ ನಿಖರ ಸಂಖ್ಯೆಯನ್ನು ಬಹಿರಂಗಪಡಿಸಲು ಪಾಕ್ ಸರ್ಕಾರ ಹಿಂದೇಟು ಹಾಕುತ್ತಿದೆ.
ಯಾರಿದು ಬಿಎಲ್‌ಎ? ಹೋರಾಟವೇಕೆ?
ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ಎಂಬುದು ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಒಂದು ಸಂಘಟನೆ. ಪಾಕಿಸ್ತಾನ ಸರ್ಕಾರವು ಬಲೂಚಿಸ್ತಾನದ ನೈಸರ್ಗಿಕ ಸಂಪನ್ಮೂಲಗಳನ್ನು ಲೂಟಿ ಮಾಡುತ್ತಿದೆ ಮತ್ತು ಅಲ್ಲಿನ ಜನರನ್ನು ರಾಜಕೀಯವಾಗಿ ಹತ್ತಿಕ್ಕುತ್ತಿದೆ ಎಂಬುದು ಇವರ ಆರೋಪ. ಈ ಗುಂಪನ್ನು ಪಾಕಿಸ್ತಾನ ಸೇರಿದಂತೆ ಹಲವು ದೇಶಗಳು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿವೆ. ಪ್ರಸ್ತುತ ಬಲೂಚಿಸ್ತಾನದ ಹಲವು ನಗರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪಾಕ್ ಸೇನೆಯ ಭಾರಿ ನಷ್ಟದ ಹಿನ್ನೆಲೆಯಲ್ಲಿ ಇಡೀ ಪಾಕಿಸ್ತಾನ ಸರ್ಕಾರ ಅಕ್ಷರಶಃ ಮೌನಕ್ಕೆ ಶರಣಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗಾಳಿಪಟದ ದಾರಕ್ಕೆ ಕಾಲು ಕಟ್.. ಸಹಾಯ ಮಾಡಲು ಹೋಗಿ ಆಸ್ಪತ್ರೆ ಸೇರಿದ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us