PSL ಬ್ಯಾನ್, ಆರ್ಥಿಕ ನಿರ್ಬಂಧ! ಭಾರತ ಮೇಲೆ ಆಡದಿದ್ರೆ ಪಾಕ್​​ಗೆ ಐಸಿಸಿಯಿಂದ 5 ಕಠಿಣ ಶಿಕ್ಷೆ..!

2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಫೆಬ್ರವರಿ 15ರಂದು ನಡೆಯಬೇಕಿದ್ದ ಹೈವೋಲ್ಟೇಜ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿರುವ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಈಗ ಸಿಂಹಸ್ವಪ್ನವಾಗಿ ಪರಿಣಮಿಸಿದೆ.

author-image
Ganesh Kerekuli
Sahibzada Farhan
Advertisment

2026ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಫೆಬ್ರವರಿ 15ರಂದು ನಡೆಯಬೇಕಿದ್ದ ಹೈವೋಲ್ಟೇಜ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿರುವ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಈಗ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಈ ನಡೆಯಿಂದ ಆಕ್ರೋಶಗೊಂಡಿರುವ ಐಸಿಸಿ, ಪಾಕಿಸ್ತಾನವನ್ನು ಕ್ರಿಕೆಟ್ ಲೋಕದಿಂದಲೇ ಮೂಲೆಗುಂಪು ಮಾಡಲು ಐದು ಕಠಿಣ ಶಿಕ್ಷೆಗಳನ್ನು ವಿಧಿಸಲು ಸಜ್ಜಾಗಿದೆ.

ಟಿ20 ವಿಶ್ವಕಪ್‌ನಿಂದಲೇ ಕಿತ್ತೆಸೆಯುವ ಸಾಧ್ಯತೆ

ಒಪ್ಪಂದದ ಪ್ರಕಾರ ಪಾಕಿಸ್ತಾನವು ಭಾರತದ ವಿರುದ್ಧ ಪಂದ್ಯವಾಡಲೇಬೇಕು. ಒಂದು ವೇಳೆ ಹಠ ಹಿಡಿದರೆ, ಪಾಕಿಸ್ತಾನವನ್ನು ಟೂರ್ನಿಯಿಂದಲೇ ಸಂಪೂರ್ಣವಾಗಿ ನಿಷೇಧಿಸಲು (Ban) ಐಸಿಸಿ ಚಿಂತಿಸುತ್ತಿದೆ. ಪಾಕಿಸ್ತಾನದ ಬದಲು ಉಗಾಂಡಾ (Uganda) ತಂಡವನ್ನು ವಿಶ್ವಕಪ್‌ಗೆ ಸೇರಿಸಿಕೊಳ್ಳುವ ಬಗ್ಗೆ ಇವತ್ತು ಅಂತಿಮ ನಿರ್ಧಾರ ಹೊರಬೀಳಲಿದೆ.

ವಾರ್ಷಿಕ ಅನುದಾನ ಸ್ಥಗಿತ (Financial Hit)

ಐಸಿಸಿಯಿಂದ ಪ್ರತಿ ವರ್ಷ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಿಗುವ ಕೋಟ್ಯಂತರ ರೂಪಾಯಿಗಳ ವಾರ್ಷಿಕ ಆದಾಯವನ್ನು (Annual Revenue) ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇದು ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಕ್ರಿಕೆಟ್‌ಗೆ ಚರಮಗೀತೆ ಹಾಡಿದಂತಾಗಲಿದೆ.

ಇದನ್ನೂ ಓದಿ: ಟಿ-20 ವಿಶ್ವಕಪ್ ಮುನ್ನವೇ ಪಾಕ್ ವಿವಾದ.. ಹಠಮಾರಿ ಧೋರಣೆಗೆ ICC ಎಚ್ಚರಿಕೆ..!

ಜಿಯೋ-ಸ್ಟಾರ್ ನಷ್ಟಕ್ಕೆ ದಂಡ ಪಾವತಿ

ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಜಾಹೀರಾತುಗಳ ಮೂಲಕ ಬರುವ ಆದಾಯವೇ ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ. ಪಂದ್ಯ ರದ್ದಾದರೆ ಪ್ರಸಾರಕ ಸಂಸ್ಥೆಯಾದ ಜಿಯೋ-ಸ್ಟಾರ್‌ಗೆ (Jio-Star) ಆಗುವ ನಷ್ಟವನ್ನು ಪಿಸಿಬಿಯೇ ಭರಿಸಬೇಕು ಎಂದು ಐಸಿಸಿ ಪಟ್ಟು ಹಿಡಿದಿದೆ. ಜಾಹೀರಾತು ದರ 10 ಸೆಕೆಂಡ್‌ಗೆ 25 ರಿಂದ 40 ಲಕ್ಷ ಇರುವುದರಿಂದ ನಷ್ಟದ ಮೊತ್ತ ಭಾರಿ ದೊಡ್ಡದಾಗಿರಲಿದೆ.

ಪಿಎಸ್ಎಲ್ (PSL) ಗೆ ವಿದೇಶಿ ಆಟಗಾರರ ನಿಷೇಧ

'ಪಾಕಿಸ್ತಾನ ಸೂಪರ್ ಲೀಗ್' (PSL) ಮೇಲೆ ಐಸಿಸಿ ದೊಡ್ಡ ಸರ್ಜರಿ ಮಾಡಲಿದೆ. ನಿವೃತ್ತರಾದ ಆಟಗಾರರನ್ನು ಹೊರತುಪಡಿಸಿ, ವಿಶ್ವದ ಯಾವುದೇ ಸ್ಟಾರ್ ವಿದೇಶಿ ಆಟಗಾರರು ಪಿಎಸ್ಎಲ್‌ನಲ್ಲಿ ಆಡದಂತೆ ಐಸಿಸಿ ತಡೆ ನೀಡಬಹುದು. ಇದು ಪಿಎಸ್ಎಲ್ ಟೂರ್ನಿಯನ್ನು ಅಕ್ಷರಶಃ ನೆಲಸಮ ಮಾಡಲಿದೆ.

ಐಸಿಸಿ ಶ್ರೇಯಾಂಕ ಮತ್ತು ಡಬ್ಲ್ಯೂಟಿಸಿ ಪಾಯಿಂಟ್ಸ್ ಮೇಲೆ ಹೊಡೆತ

ಪಾಕಿಸ್ತಾನದ ಜೊತೆ ಯಾವುದೇ ದ್ವಿಪಕ್ಷೀಯ ಸರಣಿ (Bilateral Series) ಆಡದಂತೆ ಸದಸ್ಯ ರಾಷ್ಟ್ರಗಳಿಗೆ ಐಸಿಸಿ ಸೂಚಿಸಬಹುದು. ಪಾಕಿಸ್ತಾನ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಅಂಕಗಳನ್ನು ನೀಡದಿರುವ ಮತ್ತು ಐಸಿಸಿ ಶ್ರೇಯಾಂಕದಲ್ಲಿ ಕೆಳಕ್ಕೆ ತಳ್ಳುವ ಶಿಕ್ಷೆಯೂ ಲಭಿಸುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ ಒಂದು ಪಂದ್ಯವನ್ನು ಆಡಲ್ಲ ಎಂದಿದ್ದಕ್ಕೆ ಪಾಕಿಸ್ತಾನಕ್ಕೆ ಈಗ ಇಡೀ ಕ್ರಿಕೆಟ್ ಬದುಕೇ ಮುಗಿದುಹೋಗುವ ಭೀತಿ ಎದುರಾಗಿದೆ. ಸೋಮವಾರದ ಐಸಿಸಿ ಸಭೆಯ ಮೇಲೆ ಇಡೀ ಕ್ರಿಕೆಟ್ ಲೋಕದ ಕಣ್ಣು ನೆಟ್ಟಿದೆ.

ಇದನ್ನೂ ಓದಿ: ಭಾರತದ ಮೇಲಿನ ಪಂದ್ಯ ಬಹಿಷ್ಕರಿಸಿದ ಪಾಕ್​​ಗೆ ಕಾದಿದೆ ಸಂಕಷ್ಟ.. ಆಡದಿದ್ರೆ ಏನೆಲ್ಲ ಆಗುತ್ತದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

india vs pakistan pakistan Pakistan boycott
Advertisment