Advertisment

ಮಳೆ, ಮಳೆ.. ಐತಿಹಾಸಿಕ ಪ್ರಸಿದ್ಧ ಕಮಲಶಿಲೆ ದೇಗುಲದಲ್ಲಿ ನೈಸರ್ಗಿಕ ಪುಣ್ಯಸ್ನಾನ.. ಏನಿದರ ವಿಶೇಷತೆ..?

author-image
Ganesh
Updated On
ಮಳೆ, ಮಳೆ.. ಐತಿಹಾಸಿಕ ಪ್ರಸಿದ್ಧ ಕಮಲಶಿಲೆ ದೇಗುಲದಲ್ಲಿ ನೈಸರ್ಗಿಕ ಪುಣ್ಯಸ್ನಾನ.. ಏನಿದರ ವಿಶೇಷತೆ..?
Advertisment
  • ಭಾರೀ ಮಳೆಯಿಂದಾಗಿ ದೇಗುಲಕ್ಕೆ ನುಗ್ಗಿದ ಕುಬ್ಜ ನದಿ ನೀರು
  • ಬೆಳಗಿನ ಜಾವ ದುರ್ಗಾಪರಮೇಶ್ವರಿ ಪಾದ ಸ್ಪರ್ಶಿಸಿದ ನೀರು
  • ಅರ್ಚಕರಿಂದ ಮಹಾ ಮಂಗಳಾರತಿ ಬೆಳಗಿ ಪೂಜೆ

ಉಡುಪಿ: ಐತಿಹಾಸಿಕ ಪ್ರಸಿದ್ಧ ಕಮಲಶಿಲೆ ದೇವಾಲಯದಲ್ಲಿ ನೈಸರ್ಗಿಕ ಪುಣ್ಯ ಸ್ನಾನವಾಗಿದೆ. ಕುಂದಾಪುರ ತಾಲೂಕಿನ ಕಮಲಶಿಲೆ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಾಲಯದೊಳಗೆ ಕುಬ್ಜ ನದಿ ನೀರು ನುಗ್ಗಿದೆ.

Advertisment

ಬೆಳಗಿನ ಜಾವ ಮೂರುವರೆ ಸುಮಾರಿಗೆ ಕುಬ್ಜಾ ನದಿ ನೀರು ದೇವಿಯ ಚರಣ ಸ್ಪರ್ಶ ಮಾಡಿದೆ. ಗರ್ಭಗುಡಿಗೆ ನೀರು ಬರುತ್ತಿದ್ದಂತೆಯೇ ಅರ್ಚಕರು ಮಂಗಳಾರತಿ ಮಾಡಿದ್ದಾರೆ. ವರ್ಷಕ್ಕೆ ಒಮ್ಮೆ ಗರ್ಭಗುಡಿಗೆ ಕುಬ್ಜಾ ನದಿ ನೀರು ಉಕ್ಕಿ ಬರುತ್ತದೆ. ಆಷಾಢ ಅಥವಾ ಶ್ರಾವಣ ಮಾಸದ ಮಳೆಯಲ್ಲಿ ದುರ್ಗಾಪರಮೇಶ್ವರಿಗೆ ನೈಸರ್ಗಿಕ ಪುಣ್ಯಸ್ನಾನ ಆಗುವುದು ವಾಡಿಕೆ. ಈ ದೇವಾಲಯದ ಪಕ್ಕದಲ್ಲೇ ಹರಿಯುವ ಕುಬ್ಜಾ ನದಿನೀರು ದೇವಾಲಯದ ಗರ್ಭಗುಡಿಯೊಳಗೆ ಪ್ರವೇಶಿಸಿ, ತಾಯಿಗೆ ಅಭಿಷೇಕ ಮಾಡಿ ಮತ್ತೆ ಇಳಿಮುಖವಾಗುತ್ತದೆ.

ಇದನ್ನೂ ಓದಿ:ಬುಲೆಟ್​​ನಲ್ಲಿ ಬಂದು ಆಟೋ ಚಾಲಕನ ತಲೆ ಒಡೆದ ಕಿರಿಕ್ ಲೇಡಿ..! ವಿಡಿಯೋ

ಈ ನೈಸರ್ಗಿಕ ಈ ಪುಣ್ಯ ಸ್ನಾನಕ್ಕಾಗಿ ಭಕ್ತರು ಕಾತುರದಿಂದ ಕಾಯುತ್ತಾರೆ. ಸದ್ಯ ನದಿ ನೀರಿನಲ್ಲಿ ಇಳಿಮುಖವಾಗಿದ್ದು, ದೇವಾಲಯದಿಂದ ನೀರು ತೆರವುಗೊಂಡಿದೆ. ಕಳೆದ ಒಂದು ವಾರದಿಂದ ಉಡುಪಿ, ಮಂಗಳೂರು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ನದಿ, ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ.

ಇದನ್ನೂ ಓದಿ:ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?

Advertisment

ಇದನ್ನೂ ಓದಿ:ಕೊಹ್ಲಿ, ರೋಹಿತ್​, ಜಡೇಜಾ ಆಯ್ತು.. ಮತ್ತೆ ನಾಲ್ವರು ಆಟಗಾರರು ಗುಡ್​ಬೈ ಹೇಳಲು ತಯಾರಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment