Advertisment

ನವರಾತ್ರಿ ಉಪವಾಸ ಮತ್ತು ಗರ್ಭಿಣಿಯರು.. ಪಾಲಿಸಲೇಬೇಕಾದ ಸೂತ್ರಗಳು..!

author-image
Ganesh
Updated On
ನವರಾತ್ರಿ ಉಪವಾಸ ಮತ್ತು ಗರ್ಭಿಣಿಯರು.. ಪಾಲಿಸಲೇಬೇಕಾದ ಸೂತ್ರಗಳು..!
Advertisment
  • ಇಂದಿನಿಂದ ನಾಡಿನೆಲ್ಲಡೆ ನವರಾತ್ರಿ ಸಂಭ್ರಮ ಜೋರಾಗಿದೆ
  • ಗರ್ಭಿಣಿಯರು ನವರಾತ್ರಿಯಲ್ಲಿ ಉಪವಾಸ ಮಾಡಬೇಕಾ?
  • ಉಪವಾಸ ಸಂದರ್ಭದಲ್ಲಿ ಗರ್ಭಿಣಿ ಹೇಗೆ ಕೇರ್ ಮಾಡಬೇಕು?

ಇಂದಿನಿಂದ ನವರಾತ್ರಿ ಸಡಗರ. ಈ ಸಂಭ್ರಮದಲ್ಲಿ ಅನೇಕರು ಉಪವಾಸ ಮಾಡುತ್ತಾರೆ. ಉಪವಾಸವು ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ಕಲ್ಮಶಗಳನ್ನು ದೇಹದಿಂದ ತೆಗೆದುಹಾಕುತ್ತದೆ. ಆದರೆ ಉಪವಾಸವು ಗರ್ಭಿಣಿಯರಿಗೆ ಸವಾಲಾಗಬಹುದು. ಗರ್ಭಿಣಿಯರು ಈ ಅವಧಿಯಲ್ಲಿ ವಿಶೇಷ ಕಾಳಜಿ ವಹಿಸಬೇಕು ಎನ್ನುತ್ತಾರೆ ತಜ್ಞರು.

Advertisment

ಗರ್ಭಿಣಿಯರು ಏನು ಮಾಡಬೇಕು?
ಗರ್ಭಿಣಿಯರು ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು. ನವರಾತ್ರಿ ಸಮಯದಲ್ಲಿ ನಿಮ್ಮ ದೇಹಕ್ಕೆ ಎಷ್ಟು ಪೋಷಕಾಂಶ ಸಿಗುತ್ತಿದೆ ಅನ್ನೋದ್ರ ಬಗ್ಗೆ ಅರಿವು ಇರಬೇಕು. ದಿನವಿಡೀ ಉಪವಾಸ ಮಾಡುವ ಬದಲು ಆರೋಗ್ಯಕರ ಆಹಾರ, ಪೋಷಕಾಂಶ-ಭರಿತ ಆಹಾರವನ್ನು ಸೇವಿಸಬೇಕು.

ಇದನ್ನೂ ಓದಿ:ಇದು ವಿಶ್ವದ ಅತ್ಯಂತ ದುಬಾರಿ ಕಾಂಡೋಮ್..! 10, 20 ಸಾವಿರ ಅಲ್ಲವೇ ಅಲ್ಲ..!

ಇಂಟರ್​ ನ್ಯಾಷನಲ್ ಜರ್ನಲ್ ಆಫ್ ಹೆಲ್ತ್ ಪಾಲಿಸಿ ಅಂಡ್ ಮ್ಯಾನೇಜ್ಮೆಂಟ್ ಪ್ರಕಾರ.. ಗರ್ಭಾವಸ್ಥೆಯಲ್ಲಿ ತಾಯಿಗೆ ವೇಗವಾಗಿ ಹಸಿವು ಆಗುತ್ತದೆ. ಹಸಿವಿನ ತೀವ್ರತೆ ಹೆಚ್ಚಾಗಿರೋದ್ರಿಂದ ಉಪವಾಸ ಮಾಡೋದು ಒಳ್ಳೆಯದಲ್ಲ. ಇದರಿಂದ ಭ್ರೂಣಕ್ಕೆ ಹಾನಿಯಾಗಬಹುದು. ಅಷ್ಟೇ ಅಲ್ಲ, ಮಗು ಮತ್ತು ತಾಯಿಗೆ ಮೂತ್ರಪಿಂಡದ ಕಾಯಿಲೆಗಳು, ಟೈಪ್ 2 ಡಯಾಬಿಟಿಸ್ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದಿದೆ.

Advertisment

ಗರ್ಭಿಣಿಯರು ದಿನವಿಡೀ ತಿನ್ನಬೇಕು, ಕುಡಿಯಬೇಕು
ನವರಾತ್ರಿಯಲ್ಲಿ ಗರ್ಭಿಣಿಯರು ಆಹಾರವನ್ನು ಸಂಪೂರ್ಣವಾಗಿ ತ್ಯಜಿಸಬಾರದು. ಹಣ್ಣುಗಳು, ಮೊಳಕೆಕಾಳುಗಳು, ಬೀಜಗಳು ಮತ್ತು ಮೊಸರು ಸೇರಿದಂತೆ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿರುವ ಆಹಾರವನ್ನೇ ತೆಗೆದುಕೊಳ್ಳಬೇಕು.

ಉಪವಾಸದ ಸಮಯದಲ್ಲಿ ಏನೆಲ್ಲ ತಿನ್ನಬೇಕು?
ಬಾಳೆಹಣ್ಣು, ಸೇಬು ಮತ್ತು ದಾಳಿಂಬೆ, ಬಾದಾಮಿ ಮತ್ತು ಇತರೆ ಬೀಜಗಳು, ಮೊಸರು, ಚೀಸ್ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು. ಜೊತೆಗೆ ದ್ರವ ರೂಪದ ಆಹಾರ ಪದಾರ್ಥಗಳನ್ನು ಸೇವಿಸಬೇಕು. 2023ರ ಅಧ್ಯಯನದ ಪ್ರಕಾರ.. ಪೋಷಕಾಂಶಗಳು ಚಯಾಪಚಯ ಕ್ರಿಯೆಯಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಇದು ಪೋಷಕಾಂಶಗಳ ಜೀರ್ಣಕ್ರಿಯೆ, ಹೀರಿಕೊಳ್ಳುವಿಕೆ, ಪರಿಚಲನೆ ಮತ್ತು ವಿಸರ್ಜನೆಗೆ ಮುಖ್ಯವಾಗಿದೆ. ಗರ್ಭಾವಸ್ಥೆಯಲ್ಲಿ ದೇಹದ ಆಹಾರ ಮತ್ತು ಶಕ್ತಿಯ ಅಗತ್ಯವು ಹೆಚ್ಚಾಗಿ ಬೇಕಾಗುತ್ತದೆ. ಇದೇ ಕಾರಣಕ್ಕೆ ನೀರು ಚೆನ್ನಾಗಿ ಕುಡಿಯುವ ಅಗತ್ಯ ಇರುತ್ತದೆ.

ಇದನ್ನೂ ಓದಿ:ಅಂದದ ಬೆರಳಿಗೆ ಚಂದದ ಉಗುರು! ಕಚ್ಚುವ ರೂಢಿ ಇದೆಯೇ.. ಹಾಗಿದ್ದರೆ ನಿಮ್ಮ ಆರೋಗ್ಯ ಅಪಾಯದಲ್ಲಿದೆ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment