newsfirstkannada.com

ಕೇವಲ 250 ರೂ. ಲಾಟರಿ ಟಿಕೆಟ್​​ನಿಂದ ₹10 ಕೋಟಿ ಗೆದ್ದ ಆಟೋ ಡ್ರೈವರ್​​.. ನೀವು ಗೆಲ್ಲಬಹುದು!

Share :

Published March 28, 2024 at 6:11am

  ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿ ಮಾಡಿದ್ದ ಚಾಲಕ

  ನೀನು ಗೆದ್ದಿದಿಯಾ ಎಂದು ಹೇಳಿದರೆ ಆತ ನಂಬಲೇ ಇಲ್ಲ

  ಆಟೋ ಟ್ರೈವರ್​ನ ಬಾಗಿಲು ಬಡಿದ ಅದೃಷ್ಟದ ಧನಲಕ್ಷ್ಮಿ

ಈಗಿನ ಕಾಲದಲ್ಲಿ ಅದೃಷ್ಟ ಹೇಗೆ ಒಲಿದು ಬರುತ್ತದೆ ಎಂದು ಊಹಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಕೆಲವೊಬ್ಬರು ರಾತ್ರೋ ರಾತ್ರಿ ಕೋಟ್ಯಧಿಪತಿ ಆಗಿಬಿಡುತ್ತಾರೆ. ಕೆಲವೊಬ್ಬರು ಕ್ರಿಕೆಟ್​ನಿಂದ ಶ್ರೀಮಂತರಾದರೆ, ಇನ್ನು ಕೆಲವೊಬ್ಬರು ಲಾಟರಿ ಮೂಲಕ ಕೋಟ್ಯಧಿಪತಿ ಆಗಿಬಿಡುತ್ತಾರೆ. ಇದೀಗ ಕೇರಳದ ಆಟೋ ಡ್ರೈವರ್​​ರೊಬ್ಬರಿಗೆ ಬಂಪರ್ ಲಾಟರಿ ಹೊಡೆದಿದ್ದು 10 ಕೋಟಿ ರೂಪಾಯಿ ಗೆಲ್ಲುವ ಮೂಲಕ ಲಕ್ಷ್ಮಿಪುತ್ರ ಎನಿಸಿಕೊಂಡಿದ್ದಾರೆ.

ಬೇಸಿಗೆಯ ಬಂಪರ್​ ಲಾಟರಿ ಪಡೆದುಕೊಂಡವರು ಕೇರಳದ ಕಣ್ಣೂರಿನ ಆಳಕೋಡ್​ ಪ್ರದೇಶದ ನಿವಾಸಿ ನಾಸರ್ ಅವರು 10 ಕೋಟಿ ರೂಪಾಯಿ ಗೆದ್ದಂತಹ ಅದೃಷ್ಟಶಾಲಿಯಾಗಿದ್ದಾರೆ. ಇವರು ಕಾರ್ತಿಕಪುರಂನಲ್ಲಿ ಆಟೋವನ್ನು ಓಡಿಸುತ್ತಿದ್ದಾರೆ. ಸಾಮಾನ್ಯ ವ್ಯಕ್ತಿಯಾಗಿರುವ ನಾಸರ್ ಜೀವನಕ್ಕಾಗಿ ಆಟೋ ಓಡಿಸುತ್ತಿದ್ದಾರೆ. ಯಾವತ್ತೂ ಖರೀದಿ ಮಾಡುವಂತೆ ರಾತ್ರಿಯಷ್ಟೇ ಲಾಟರಿ ಟಿಕೆಟ್​ ತೆಗೆದುಕೊಂಡಿದ್ದರು. ಆದರೆ ಮಧ್ಯಾಹ್ನ ಅನ್ನುವಷ್ಟರಲ್ಲಿ ಅವರಿಗೆ ಧನಲಕ್ಷ್ಮಿ ಬಾಗಿಲು ಬಡಿದಿದ್ದಾಳೆ.

ಇದನ್ನೂ ಓದಿ: RCB ದಾಖಲೆ ಮುರಿದ ಹೈದರಾಬಾದ್​​.. ಮುಂಬೈಗೆ ಬರೋಬ್ಬರಿ 278 ರನ್​ ಟಾರ್ಗೆಟ್​​

ಸದ್ಯ 10 ಕೋಟಿ ಲಾಟರಿ ಬಂದಿರುವುದು ಕೇಳೆ ಆಘಾತ ವ್ಯಕ್ತಪಡಿಸಿದ್ದ ನಾಸರ್ ನನಗೆ ಲಾಟರಿ ಬಂದಿರುವುದು ನಂಬುವುದಕ್ಕೆ ಆಗುತಿಲ್ಲ. ನಿನ್ನೆಯಷ್ಟೇ SC 308797 ನಂಬರಿನ ಲಾಟರಿ ತೆಗೆದುಕೊಂಡಿದ್ದೆ. ಆಗಲೇ ರಿಸಲ್ಟ್ ಬಂದಿದ್ದು ನಾನು ಗೆದ್ದಿರುವುದು ಹೆಚ್ಚು ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.

ನಾಸರ್ ಇದೀಗ ಬಂಪರ್ ಲಾಟರಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಇವರು ಪ್ರಥಮ ಸ್ಥಾನ ಪಡೆದುಕೊಂಡಿದ್ದರೇ ಎಸ್‌ಎ 177547 ನಂಬರಿನ ಟಿಕೆಟ್‌ಗೆ 2ನೇ ಬಹುಮಾನವಾಗಿ 50 ಲಕ್ಷ ರೂಪಾಯಿಗಳು ಬಂದಿವೆ. ಒಟ್ಟು 36 ಲಕ್ಷ ಟಿಕೆಟ್‌ಗಳಲ್ಲಿ 33.5 ಲಕ್ಷ ಟಿಕೆಟ್‌ಗಳು ಮಾರಾಟವಾಗಿವೆ. ಕಳೆದ ವರ್ಷಕ್ಕಿಂತ ಈ ಬಾರಿ 3.5 ಲಕ್ಷಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿದೆ. ಒಂದು ಟಿಕೆಟ್ ಬೆಲೆ 250 ರೂಪಾಯಿ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇವಲ 250 ರೂ. ಲಾಟರಿ ಟಿಕೆಟ್​​ನಿಂದ ₹10 ಕೋಟಿ ಗೆದ್ದ ಆಟೋ ಡ್ರೈವರ್​​.. ನೀವು ಗೆಲ್ಲಬಹುದು!

https://newsfirstlive.com/wp-content/uploads/2024/03/NAZAR.jpg

Load More