ಹೆಗಲಿಗೆ ಹೆಗಲು ಕೊಟ್ಟ ನೇಹಾ-ಚಂದು ದಾಂಪತ್ಯ ಜೀವನಕ್ಕೆ 30 ವರ್ಷದ ಸಂಭ್ರಮ!

author-image
Veena Gangani
Updated On
ಹೆಗಲಿಗೆ ಹೆಗಲು ಕೊಟ್ಟ ನೇಹಾ-ಚಂದು ದಾಂಪತ್ಯ ಜೀವನಕ್ಕೆ 30 ವರ್ಷದ ಸಂಭ್ರಮ!
Advertisment
  • ರಾಜಾ ರಾಣಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡ ಜೋಡಿ
  • ಮಕ್ಕಳಿದ್ದಾಗ ಶುರುವಾದ ಸ್ನೇಹ ಹಾಗೂ ಪ್ರೀತಿಗೆ ಇದೀಗ 30 ವರ್ಷ
  • ಲಕ್ಷ ಲಕ್ಷ ಸಂಬಳದ ಕೆಲಸ ಬಿಟ್ಟು ಭಾರತದಲ್ಲೇ ಸೆಟ್ಲ್​ ಆಗಿದ್ದೇಕೆ?

ಕಿರುತೆರೆಯ ಮುದ್ದಾದ ಜೋಡಿ ಅಂದ್ರೆ ಚಂದು-ನೇಹಾ. ಈ ಇಬ್ಬರ ಪ್ರೇಮ್​ ಕಹಾನಿನೇ ವಿಭಿನ್ನ. ಮಕ್ಕಳಿದ್ದಾಗ ಶುರುವಾದ ಸ್ನೇಹ ಪ್ರೀತಿಯಾಗಿ ಆ ಪ್ರೀತಿ, ವಿಶ್ವಾಸ ದಾಂಪತ್ಯಕ್ಕೆ ಮುನ್ನುಡಿ ಬರೆಯಿತು. ಪ್ರೇಮ ಬರಹ ಅಂತಾ ಮತ್ತೊಂದು ಆವೃತ್ತಿ ಏನಾದ್ರೂ ಬಂದ್ರೆ ಈ ಇಬ್ಬರ ಸ್ಟೋರಿ ಹಾಕಬಹುದು ಅಷ್ಟು ಇಂಟ್ರಸ್ಟಿಂಗ್​ ಆಗಿದೆ.

publive-image

ಇದನ್ನು ಓದಿ:ತಂಗಿ ನಿಶ್ಚಿತಾರ್ಥಕ್ಕೆ ಬರಲಿಲ್ಲ ಎಂದು ಹೆಂಡತಿಗೆ ಚಾಕುವಿನಿಂದ ಇರಿದ ಗಂಡ.. ಆಮೇಲೇನಾಯ್ತು?

ಚಂದು-ನೇಹಾ ಲವ್​ ಸ್ಟೋರಿ ಈಗ ಹೇಳೋಕೆ ಕಾರಣ 30 ವರ್ಷದ ಪ್ರೀತಿಯ ಕತೆ. ನೇಹಾಗೆ 33 ವರ್ಷ ಇವರ ಲವ್​ ಸ್ಟೋರಿಗೆ 30 ವರ್ಷನಾ ಅಂತಾ ಗಾಬರಿ ಆಗಬೇಡಿ. ಅಕ್ಕಪಕ್ಕದ ಮನೆಯಲ್ಲಿ ಅರಳಿದ ಪ್ರೀತಿ ಇದು. ಚಂದು-ನೇಹಾ ಬಾಲ್ಯ ಸ್ನೇಹಿತರು. ನರ್ಸರಿಯಿಂದಾನೂ ಒಟ್ಟಿಗೆ ಓದಿ ಆಡಿ ಬೆಳದ ಜೋಡಿ. ಇವರ ಲವ್​ ಸ್ಟೋರಿಗೆ ಈಗ 30ರ ಸಂಭ್ರಮ. ನೇಹಾ ಕಲಾವಿದೆ ಆಗಿದ್ದರಿಂದ ಫಾರಿನ್​ನಲ್ಲಿ ಲಕ್ಷ ಲಕ್ಷ ಸಂಬಳ ಇದ್ದ ಕೆಲಸವನ್ನ ಬಿಟ್ಟು ಪ್ರೀತಿಯ ಪತ್ನಿಗಾಗಿ ಭಾರತದಲ್ಲೇ ಸೆಟ್ಲ್​ ಆಗಿದ್ದು ಚಂದು. ನೇಹಾ ಒತ್ತಾಯಕ್ಕೆ ರಾಜಾ ರಾಣಿ ಶೋ ಮಾಡಿದ್ರು. ಈ ಶೋ ಮೂಲಕ ಜನಪ್ರಿಯತೆ ಪಡೆದ ಜೋಡಿಗೆ ಟೈಟಲ್​ ಗೆಲ್ಲೋ ಅವಕಾಶ ಕೂಡ ಸಿಕ್ತು. ಇಲ್ಲಿಂದ ಚಂದನ್​ ಹೊಸ ಜರ್ನಿ ಶುರುವಾಯ್ತು.


publive-image

ಸದ್ಯ ಅಂತರಪಟ ಧಾರಾವಾಹಿಯಲ್ಲಿ ಚಂದು ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ನೇಹಾ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ. ಅಭಿನಯದ ಬಗ್ಗೆ ಆಸಕ್ತಿಯಿಲ್ಲದ ಚಂದನ್​ ನೇಹಾ ಪ್ರೀತಿಗಾಗಿ ಕಷ್ಟನ ಇಷ್ಟಪಟ್ಟು ಸದ್ಯ ಕರ್ನಾಟಕದ ಕ್ರಶ್​ ಆಗಿದ್ದಾರೆ. ತಮ್ಮ ಲವ್​ ಆ್ಯನಿವರ್ಸರಿ ಸೆಲೆಬ್ರೇಷನ್​ಗೆ ಪಂಜಾಬ್​ನ ಅಮೃತಸರ ಗೋಲ್ಡನ್​ ಟೆಂಪಲ್​ಗೆ ಹೋಗಿದ್ದು, ಗುರುನಾನಕ್​ರ ದರ್ಶನ ಪಡೆದಿದ್ದಾರೆ. ಒಟ್ಟಿನಲ್ಲಿ 30 ವರ್ಷದಿಂದ ಪ್ರೀತಿನ ಜೋಪಾನ ಮಾಡಿಕೊಂಡು ಹೆಗಲಿಗೆ ಹೆಗಲು ಕೊಟ್ಟು ನಿಂತಿರೋ ಈ ಮುದ್ದಾದ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ​

Advertisment