/newsfirstlive-kannada/media/post_attachments/wp-content/uploads/2024/04/HBL-FAIAZ.jpg)
ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ್ ಹತ್ಯೆ ಪ್ರಕರಣದಿಂದ ಇಡೀ ರಾಜ್ಯವೇ ಬಿದ್ದಿದೆ. ಆರೋಪಿ ಫಯಾಜ್​​ಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ಬೆನ್ನಲ್ಲೇ, ಆರೋಪಿ ಫಯಾಜ್ ತಾಯಿ ಮಮ್ತಾಜ್ ರಾಜ್ಯದ ಕ್ಷಮೆ ಕೇಳಿದ್ದಾರೆ.
ಮೊದಲು ಅವನು (ಫಯಾಜ್) ಓದಿನಲ್ಲಿ ಬಹಳ ಜಾಣನಿದ್ದ. ಅವಳೇ ಇವನಿಗೆ ಪ್ರಪೋಸ್ ಮಾಡಿದ್ದು. ನನ್ನ ಬಳಿ ಅವನು ಹೇಳಿದಾಗ ನಾನು ಲವ್ ಬೇಡ ಎಂದಿದ್ದೆ. ಈ ಘಟನೆಯಿಂದ ಅವನಿಗೆ ತಕ್ಕ ಶಿಕ್ಷೆ ಆಗಬೇಕು. ಮಗ ಕೆಎಎಸ್ ಆಫೀಸರ್ ಆಗಬೇಕು, ನಟನಾಗುವ ಕನಸು ಕಂಡಿದ್ದೆ. ಆದರೆ ಈ ರೀತಿ ಆಗಿದ್ದು ಬಹಳ ಸಂಕಟ ಆಗುತ್ತಿದೆ.
ಇದನ್ನೂ ಓದಿ:ನೇಹಾ ಹಿರೇಮಠ್ ಹತ್ಯೆಗೆ ಭಾರೀ ಆಕ್ರೋಶ, ನ್ಯಾಯಕ್ಕಾಗಿ ಆಗ್ರಹಿಸಿದ ನಟ ಧ್ರುವ ಸರ್ಜಾ
ನೇಹಾ ಹಿರೇಮಠ್ ಸಹ ತುಂಬಾ ಒಳ್ಳೆಯ ಹುಡುಗಿ ಆಗಿದ್ದಳು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು. ನೂರಾರು ಮಕ್ಕಳಿಗೆ ನಾನು ಶಿಕ್ಷಣ ಕೊಡ್ತೀನಿ. ಆದ್ರೆ ಇವನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಬೇಸರಿದಂದ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us