Advertisment

ನೇಹಾ ಹಿರೇಮಠ ಹತ್ಯೆ ಖಂಡಿಸಿ ಧಾರವಾಡ ಬಂದ್; ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಬಂದ್​ಗೆ ಕರೆ

author-image
Ganesh
Updated On
ಶಿಕ್ಷಕರ ಮಗ ಫಯಾಜ್; ನೇಹಾ ಹಿರೇಮಠ್​​ರನ್ನು​​ ಕೊಂದ ಆರೋಪಿ ಯಾರು?
Advertisment
  • ನೇಹಾ ಹತ್ಯೆ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ
  • ರಾಜಕೀಯ ನಾಯಕರಿಂದ ಆರೋಪ-ಪ್ರತ್ಯಾರೋಪಗಳು ಜೋರು
  • ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಭೇಟಿ, ನೇಹಾ ಕುಟುಂಬಕ್ಕೆ ಸಾಂತ್ವನ

ನೇಹಾ ಹತ್ಯೆ ಪ್ರಕರಣ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೀತಿದೆ. ಆಕ್ರೋಶ ವ್ಯಕ್ತವಾಗ್ತಿದೆ. ಈ ನಡುವೆ ಸಾವಿನ ಮನೆಯಲ್ಲಿ ರಾಜಕೀಯ ಮೇಲಾಟವೂ ಜೋರಾಗಿದ್ದು, ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಬಂದ್​ಗೆ ಕೂಡ ಧಾರವಾಡ ಸಾಕ್ಷಿಯಾಗ್ತಿದೆ.

Advertisment

ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕಾಲೇಜಿಗೆ ಹೋದ ಮಗಳು ಹೆಣವಾಗಿ ಮನೆಗೆ ಬಂದಿದ್ದು ಇಡೀ ಕರುನಾಡಿನ ಜನರ ಮನಸ್ಸು ಒಡೆಯುವಂತೆ ಮಾಡಿದೆ. ಹಂತಕ ಫಯಾಜ್ ವಿರುದ್ಧ ಎಲ್ಲೆಡೆ ಆಕ್ರೋಶದ ಜ್ವಾಲೆ ಧಗಧಗಿಸಿದೆ.

ಅಂಜುಮನ್ ಇಸ್ಲಾಂ ಸಂಸ್ಥೆಯಿಂದ ಧಾರವಾಡ ಬಂದ್​ಗೆ ಕರೆ

ಅತ್ಯಂತ ಭೀಕರವಾಗಿ ನೇಹಾ ಕೊಲೆ ನಡೆದಿದ್ದು, ಇಡೀ ಕರುನಾಡೇ ಖಂಡಿಸುತ್ತಿದೆ. ಇದೀಗ ಮುಸ್ಲಿಂ ಬಾಂಧವರು ಕೂಡ ನೇಹಾ ಪರವಾಗಿ ನ್ಯಾಯಕ್ಕಾಗಿ ಆಗ್ರಹಿಸ್ತಿದ್ದಾರೆ. ಅಂಜುಮನ್ ಇಸ್ಲಾಂ ಸಂಸ್ಥೆ, ಧಾರವಾಡ ಬಂದ್​ಗೆ ಕರೆ ಕೊಟ್ಟಿದೆ. ಅದರಂತೆ ಇಂದು ಅರ್ಧ ದಿನ ಧಾರವಾಡ ಬಂದ್ ಮಾಡಲಾಗ್ತಿದೆ. ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಕ್ಲೋಸ್ ಆಗಿರಲಿದೆ.

ಇದನ್ನೂ ಓದಿ: ಪಂದ್ಯ ಮುಗಿದ ಮೇಲೂ ಸುಮ್ಮನಾಗದ ಕೊಹ್ಲಿ, ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್​ ಜೊತೆ ಮತ್ತೆ ಟಾಕ್ ಫೈಟ್..!

Advertisment

publive-image

ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ತನ್ನದೇ ಪಕ್ಷದ ನಾಯಕರ ಕುಟುಂಬಕ್ಕೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ ಮುಂದೆ ಬಂದಿಲ್ಲ ಅಂತಾ ಯಡಿಯೂರಪ್ಪ ಕಿಡಿಕಾರಿದ್ದರು. ಇದಕ್ಕೆ ಸಚಿವ ಶರಣಬಸಪ್ಪ ದರ್ಶನಾಪೂರ ಕೌಂಟರ್ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮರ್ಡರ್​ಗಳೇ ಆಗಿಲ್ವಾ? ಯಡಿಯೂರಪ್ಪ ಸಿಎಂ ಇದ್ದಾಗ ಎಷ್ಟು ಜನ ಹಿಂದೂಗಳು ಸತ್ತಿದ್ದಾರೆ, ಬೇಕಾದ್ರೇ ಅಂಕಿ ಅಂಶ ಕೊಡುತ್ತೇವೆ ಅಂತಾ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಬೆಂಕಿಯ ಕೆನ್ನಾಲಿಗೆಗೆ 14 ವರ್ಷದ ಬಾಲಕಿ ದಾರುಣ ಸಾವು

ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೂಡ ನೇಹಾ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನೇಹಾ ಕುಟುಂಬಸ್ಥರ ಭೇಟಿಯ ಬಳಿಕ ಮಾತನಾಡಿದ ಜೆ.ಪಿ ನಡ್ಡಾ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ತುಷ್ಠೀಕರಣ ನೀತಿ ನಡೆಸ್ತಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Advertisment

ಇದನ್ನೂ ಓದಿ:ಸೇಡು ತೀರಿಸಿಕೊಂಡ ಗುಜರಾತ್ ಟೈಟಾನ್ಸ್; ಹೀರೋ ಆದ ಸಾಯಿ ಕಿಶೋರ್

ಒಟ್ನಲ್ಲಿ, ನೇಹಾ ಹತ್ಯೆ ಖಂಡಿಸಿ, ಎಲ್ಲಾ ಜಾತಿ, ಎಲ್ಲಾ ಸಮುದಾಯದವರು ನ್ಯಾಯಕ್ಕೆ ಆಗ್ರಹಿಸ್ತಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದರಲ್ಲೂ ರಾಜಕೀಯ ನಡೀತಿರೋದು ಮಾತ್ರ ಅತಿದೊಡ್ಡ ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment