newsfirstkannada.com

VIDEO: ಪ್ರೀತಿಯಲ್ಲಿದ್ರಾ ನೇಹಾ, ಫಯಾಜ್​​? ಈ ಬಗ್ಗೆ ಮಗಳನ್ನು ಕಳೆದುಕೊಂಡ ಕಾರ್ಪೊರೇಟರ್​​ ಹೇಳಿದ್ದೇನು?

Share :

Published April 19, 2024 at 8:56pm

  ಮನೆ ಮಹಾಲಕ್ಷ್ಮೀ ನೇಹಾಳನ್ನು ಕಳೆದುಕೊಂಡು ಕುಟುಂಬಸ್ಥರ ಕಣ್ಣೀರು

  ಪೊಲೀಸ್‌ ಕಸ್ಟಡಿಯಲ್ಲಿರುವ ಫಯಾಜ್ ನೇಹಾಳ ಪ್ರೀತಿಯ ಬಗ್ಗೆ ಹೇಳಿಕೆ

  ನೇಹಾಳ ದುರಂತ ಅಂತ್ಯಕ್ಕೆ ಮಮ್ಮಲ ಮರುಗಿ ಬಿಟ್ಟ ಇಡೀ ಹುಬ್ಬಳ್ಳಿ ಜನತೆ

ಕಾಲೇಜಿನ ಕ್ಯಾಂಪಸ್‌ನಲ್ಲಿಯೇ ವಿದ್ಯಾರ್ಥಿನಿಯ ಕೊಲೆಯಾಗುತ್ತೆ ಅಂದ್ರೆ ನಿಜಕ್ಕೂ ಖೇದಕರ. ಮಕ್ಕಳು ಕಾಲೇಜಿನ ಕ್ಲಾಸ್‌ರೂಮ್‌ನಲ್ಲಿ ಪಾಠ ಕೇಳ್ತಿದ್ದಾರೆ ಅನ್ನೋ ನಿರಾಳತೆಯಿಂದ ಪೋಷಕರು ಇರ್ತಾರೆ. ಆದ್ರೆ, ಆ ಜಾಗದಲ್ಲೂ ರಕ್ಷಣೆಯಿಲ್ಲ ಅಂದ್ರೆ, ಪೋಷಕರ ಮನಸ್ಥಿತಿ ಏನಾಗಬೇಡ. ಆ ವಿದ್ಯಾರ್ಥಿನಿ ಕೊಲೆಯ ನಂತರ ಸಾಕಷ್ಟು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಉತ್ತರ ಬೇಕು ಅಂತಾನೇ ಜನರು ರೊಚ್ಚಿಗೆದ್ದಿದ್ದಾರೆ. ಇದೆಲ್ಲಾದರ ನಡುವೆ, ಹಳೇ ಖಯಾಲಿಯಂತೆ ಕೊಲೆಗೆ ರಾಜಕೀಯ ಬಣ್ಣ ಬೆರೆತು ಬಿಟ್ಟಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಸಾಲು, ಸಾಲು ಮರ್ಡರ್‌; ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದ ಯುವಕನ ಬರ್ಬರ ಹತ್ಯೆ

ಅಮ್ಮಾ ನಾನು ಕಾಲೇಜಿಗೆ ಹೋಗಿ ಬರ್ತೀನೆಂದು ಮನೆ ಬಿಟ್ಟ ನೇಹಾ ವಾಪಸ್ ಹೆಣವಾಗಿ ಮನೆ ಸೇರಿದ್ದಾಳೆ. ಕ್ರೌರ್ಯದ ಕೇಕೆಗೆ, ಹತಾಶೆಯ ಅತಿರೇಕಕ್ಕೆ, ಕಟುಕನೊಬ್ಬನ ಕೈಯಲ್ಲಿ ಸಿಕ್ಕಿ ನರಳಿ ನರಳಿ ಅಮಾಯಕ ಹುಡುಗಿ ಜೀವ ಬಿಟ್ಟಿದ್ದಾಳೆ. ರಕ್ಕಸನ ಹೇಯ ಕೃತ್ಯಕ್ಕೆ ಬದುಕಿನ ಬಗ್ಗೆ ನೂರಾರು ಕನಸು ಕಂಡಿದ್ದ ಸ್ನಿಗ್ಧ ಸುಂದರಿಯ ಜೀವನದ ಪುಟಕ್ಕೆ ಪೂರ್ಣ ವಿರಾಮ ಬಿದ್ದಿದೆ. ಅಪ್ಪುಗೆ ಕೊಟ್ಟು ಮನೆ ಬಿಟ್ಟಿದ್ದ ಮಗಳು ಮಣ್ಣಲ್ಲಿ ಮಣ್ಣಾಗಿದ್ದಾಳೆ. ನಿನ್ನೆ ಕೊಟ್ಟ ಅಪ್ಪುಗೆ ಕೊನೆ ಅಪ್ಪುಗೆ ಅನ್ನೋದು ಹೆತ್ ಒಡಲಿಗೂ ಗೊತ್ತಿರಲಿಲ್ಲ. ಇದೊಬ್ಬ ಮಗಳು ಕಿರಾತಕ ಫಯಾಜ್​ ಎಸಗಿದ ದುಷ್ಕೃತ್ಯಕ್ಕೆ ಬಲಿಯಾಗಿರೋದು ಕಂಡು ನೇಹಾ ಕುಟುಂಬಕ್ಕೆ ಅಕ್ಷರಶಃ ದಿಗಿಲು ಬಡಿದಿದೆ.

ಪ್ರೀತಿ ಹೆಸರಲ್ಲಿ ನೇಹಾ ಹಿಂದೆ ಬಿದ್ದಿದ್ದ ಪಾಪಿ ಪಯಾಜ್​ ಪ್ರಾಣ ಬಲಿಗಾಗಿ ಸಿದ್ದಾನಾಗಿಯೇ ಬಂದಿದ್ದ. ನೇಹಾ ಕ್ಲಾಸ್ ಮುಗಿಸಿ ಕಾಲೇಜಿನ ಹೊರ ಬರುತ್ತಿದ್ದಂತೆಯೇ ಎದುರಾದ ಫಯಾಜ್ ಕೈಯಲ್ಲಿದ್ದ ಚಾಕುವನ್ನು ನೇಹಾ ದೇಹಕ್ಕೆ ಇರಿದೇ ಬಿಟ್ಟಿದ್ದ. ಏನಾಗ್ತಿದೆ ಅನ್ನೋಷ್ಟರಲ್ಲಿ ಫಯಾಜ್ ಚುಚ್ಚಿದ ಚಾಕು 11 ಬಾರಿ ನೇಹಾ ದೇಹ ಹೊಕ್ಕಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಮರಣವೇದನೆಯಲ್ಲೇ ಒದ್ದಾಡಿ ಒದ್ದಾಡಿ ನೇಹಾ ಉಸಿರು ನಿಂತು ಹೋಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ನೇಹಾ ಮೃತದೇಹ ನಿವಾಸಕ್ಕೆ ಬರ್ತಿದ್ದಂತೆ ಪೋಷಕರ ರೋಧನದ ಕಟ್ಟೆಯೊಡೆದಿತ್ತು. ಮುದ್ದಿನ ಮಗಳು ಹೆಣವಾಗಿರೋದನ್ನ ಕಂಡು ನೇಹಾ ತಾಯಿ ಬಿಕ್ಕಿ ಬಿಕ್ಕಿ ಕಣ್ಣೀರಾದ್ರು. ಇನ್ನು ನೇಹಾಳ ಈ ದುರಂತ ಅಂತ್ಯಕ್ಕೆ ಇಡೀ ಹುಬ್ಬಳ್ಳಿ ಜನತೆ ಮಮ್ಮಲ ಮರುಗಿಬಿಟ್ಟಿದೆ.

ಇದನ್ನೂ ಓದಿ: 11 ಬಾರಿ ಚಾಕು ಇರಿದು ನೇಹಾ ಹಿರೇಮಠ್ ಕೊಲೆ; ಲವ್ ಜಿಹಾದ್ ಅನುಮಾನ, ತನಿಖೆಗೆ ಆಗ್ರಹ

ಬೆಳಗ್ಗೆ 8 ಗಂಟೆಗೆ ಕಾಲೇಜಿಗೆ ಹೋಗಿದ್ದಳು. ಕಾಲ್​ ಮಾಡಿ ನಾನು ಬಂದಿದ್ದೀನಿ ಬಾ ಹೊರಗಡೆ ಅಂತಾ ಹೇಳಿದ್ದೆ. ಕಾಲ್​ ಕಟ್​ ಮಾಡಿ ಐದು ನಿಮಿಷ ಕೂಡ ಆಗಿಲ್ಲ. ಕಾಲೇಜಿನಿಂದ ಎಲ್ಲಾ ವಿದ್ಯಾರ್ಥಿಗಳು ಓಡಿ ಬರುತ್ತಿದ್ದರು. ಆಗ ಮಗನಿಗೆ ಹೇಳಿದೆ. ಆದರೆ ನನ್ನ ಮಗಳು ಆಗ ಕಾಲ್​ ಪಿಕ್​ ಮಾಡುತ್ತಿರಲಿಲ್ಲ. ಬಳಿಕ ಸರ್​ ಫೋನ್​ ಮಾಡಿ ಈ ವಿಚಾರ ತಿಳಿಸಿದರು.  

– ಗೀತಾ ಹಿರೇಮಠ್, ನೇತಾ ತಾಯಿ.

ಒಡೆಯಿತು ಜನರ ಆಕ್ರೋಶದ ಕಿಚ್ಚು.. ನ್ಯಾಯಕ್ಕಾಗಿ ಪ್ರತಿಭಟನೆ

ನೇಹಾ ಕಗ್ಗೊಲೆ ವಾಣಿಜ್ಯ ನಗರಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹಾಡ ಹಗಲೇ ರಕ್ತ ಹರಿಸಿದ್ದು ಕಂಡು ಇಡೀ ಹುಬ್ಬಳಿಯಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತವರಣ ನಿರ್ಮಾಣವಾಗಿದೆ. ಪರಿಣಾಮ ಜನರ ಆಕ್ರೋಶದ ಕಟ್ಟೆಯೊಡೆದಿದ್ದು, ಪ್ರತಿಭಟನೆಯ ಕಾವು ಜೋರಾಗಿದೆ. ನೇಹಾ ಹೀರೇಮಠ, ಹತ್ಯೆ ಖಂಡಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆಯ ರಣಕಹಳೆ ಮೊಳಗಿಸಿದ್ರೆ, ಹಿಂದೂಪರ ಸಂಘಟನೆಯ ಕಾರ್ಯಕರ್ತರು ಬೃಹತ್ ಧರಣಿ ನಡೆಸಿದ್ದಾರೆ. ನೇಹಾ ಹತ್ಯೆಯಿಂದಾಗಿ ಹುಬ್ಬಳ್ಳಿ ಧಗದಗಿಸ್ತಿದ್ದು, ‘ಜಸ್ಟೀಸ್ ಫಾರ್ ನೇಹಾ’ ಅಂತ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ನೇಹಾ ಹತ್ಯೆ ಮಾಡಿರುವ ಫಯಾಜ್‌‌ನನ್ನ ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಎಬಿವಿಪಿ ಆಕ್ರೋಶ ಹೊರ ಹಾಕಿದೆ. ನೇಹಾ ಕೊಲೆ ಖಂಡಿಸಿ ರಸ್ತೆಗಿಳಿದಿರುವ ಪ್ರತಿಭಟನಾ ವಿದ್ಯಾರ್ಥಿಗಳು ಹುಬ್ಬಳ್ಳಿ ಧಾರವಾಡ ರಸ್ತೆ ಬಂದ್​ ಮಾಡಿ ಧರಣಿ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳ ಮನವೊಲಿಸಲು ಪೊಲೀಸರು ಹರಸಾಹಸವನ್ನೇ ಪಡಬೇಕಾಯ್ತು. ಇನ್ನೊಂದೆಡೆ ದಲಿತ ವಿಮೋಚನಾ ಸಮಿತಿ ರಸ್ತೆಯುದ್ದಕ್ಕೂ ತಮಟೆ ಬಾರಿಸುತ್ತಾ ನೇಹಾಗೆ ನ್ಯಾಯ ಸಿಗಬೇಕು ಅಂತ ಕೂಗು ಹಾಕಿದೆ.

ನೇಹಾ ಕೊಲೆ ಖಂಡಿಸಿ 3 ದಿನಗಳ ಕಾಲ ಮುನವಳ್ಳಿ ಬಂದ್

ಇನ್ನೊಂದೆಡೆ ನೇಹಾ ಕೊಲೆ ಆರೋಪಿ ಫಯಾಜ್ ಹುಟ್ಟೂರಿನಲ್ಲೂ ಆಕ್ರೋಶ ಬುಗಿಲೆದಿತ್ತು. ಪರಿಣಾಮ ನೇಹಾ ಹತ್ಯೆ ಖಂಡಿಸಿ ಫಯಾಜ್ ಹುಟ್ಟೂರಾದ ಸವದತ್ತಿ ತಾಲೂಕಿನ ಮನವಳ್ಳಿಯನ್ನ ಮೂರು ದಿನಗಳ ಕಾಲ ಬಂದ್​ಗೆ ಕರೆ ನೀಡಲಾಗಿದೆ. ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ವಿಶ್ವಾಸ್ ವೈದ್ಯ ಹೆಣ್ಣು ಮಗಳನ್ನು ಕೊಂದ ಈ ಘಟನೆ ನಿಜಕ್ಕೂ ಖಂಡನೀಯ ಎಂದಿದ್ದಾರೆ.

ಹುಬ್ಬಳ್ಳಿ ನೇಹಾ ಕೊಲೆಗೆ ಲವ್ ಜಿಹಾದ್ ಕಾರಣನಾ?

ವಾಣಿಜ್ಯ ನಗರಿ ಹುಬ್ಬಳಿಯಲ್ಲಿ ನಡೆದಿರೋ ನೇಹಾ ಹತ್ಯೆ ಪ್ರಕರಣ ಈಗ ಹೊಸ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣ ರಾಜಕೀಯ ವಲಯದಲ್ಲೂ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಕೇಸರಿ ಕಲಿಗಳು ಸರ್ಕಾರದ ವಿರುದ್ಧ ಕೆಂಡವಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದೆಗಟ್ಟಿದೆ ಎಂದು ಕಿಡಿಕಾರಿದ್ದಾರೆ. ಇನ್ನೊಂದೆಡೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇಹಾ ಹತ್ಯೆಗೆ ಲವ್ ಜಿಹಾದ್ ಕಿಚ್ಚು ಹೊತ್ತಿಸಿದ್ದಾರೆ.

ಕೊಲೆ ಎನ್ನುವುದು ಇಸ್ಲಾಂನಲ್ಲಿ ಸಹಜ ಪ್ರಕ್ರಿಯೆಯಾಗಿದೆ. ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲ ಎನ್ನುವಂತಾಗಿದೆ. ಐಸಿಸ್ ಮಾದರಿಯಲ್ಲಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಚಾಕು ಹಾಕಲು ಎಲ್ಲಿಯೋ ತರಬೇತಿ ಪಡೆದಿದ್ದಾನೆ. ಕಾಂಗ್ರೆಸ್ ಬೆಳೆಸಿದ ವಿಷ ಬೀಜವಿದು.

– ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್

ಪ್ರೀತಿಯನ್ನ ನಿರಕಾರಿಸಿದ್ದ ಕಾರಣಕ್ಕೆ ಜಿಹಾದ್ ಮಾಡಿದ್ದಾರೆ ಅಂತ ಕೆಂಡಮಂಡಲವಾಗಿದ್ರು. ನಿಜಕ್ಕೂ ಭಯದ ವಾತವರಣ ಸೃಷ್ಟಿಯಾಗಿದೆ. ಆರೋಪಿಯನ್ನು ಎನ್​ಕೌಂಟರ್​ಗೆ ಆದೇಶ ನೀಡಿ ಅಂತ ಆಗ್ರಹಿಸಿದ್ದಾರೆ. ಮಾಜಿ ಸಿಎಂ ಬೊಮ್ಮಾಯಿ ಕೂಡ ಘಟನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. ನಿಜಕ್ಕೂ ತುಂಬಾ ಆಘಾತವಾಗಿದೆ ಅಂತ ಹೇಳಿದ್ರು. ಹುಬ್ಬಳಿಯಲ್ಲಿ ಇದೇ ಮೊದಲು ಇಂಥಾ ಘಟನೆ ನಡೆದಿರೋದು ಎಂದಿದ್ದಾರೆ.

ನಿಜಕ್ಕೂ ತುಂಬಾ ಆಘಾತವಾಗಿದೆ. ಹುಬ್ಬಳಿಯಲ್ಲಿ ಇದೇ ಮೊದಲು ಇಂಥಾ ಘಟನೆ ನಡೆದಿರೋದು. ಮುಖ್ಯಮಂತ್ರಿಗಳು ಒಂದು ಟ್ವೀಟ್ ಮಾಡಿದರೆ ಜವಾಬ್ದಾರಿ ಮುಗಿಯಲ್ಲ. ನೇಹಾ ಕೊಲೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಆದರೆ, ಇಲ್ಲಿಯ ಪೊಲೀಸರಿಂದ ಸರಿಯಾಗಿ ತನಿಖೆ ಆಗುವುದಿಲ್ಲ. ಏಕೆಂದರೆ ಪೊಲೀಸರು ನಿಷ್ಕ್ರಿಯರಾಗಿದ್ದಾರೆ. ಹೀಗಾಗಿ ಎಸ್​ಐಟಿ ರಚಿಸಬೇಕು.

– ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ

ಕಮಲ ನಾಯಕರು ನೇಹಾ ರಣ ಭೀಕರ ಹತ್ಯೆಗೆ ಲವ್ ಜಿಹಾದ್ ಹಣೆ ಪಟ್ಟೆ ಕಟ್ತಿದ್ದಂತೆ ಸಚಿವ ಸಂತೋಷ್ ಲಾಡ್ ಕಮಲ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಇಂತಾದಕ್ಕೆಲ್ಲ ಸರ್ಕಾರ ಕುಮ್ಮಕ್ಕು ನೀಡುತ್ತಾ ಅಂತ ಮಾತಿನಲ್ಲೇ ತಿವಿದಿದ್ದಾರೆ. ಸಾವಿನ ಮನೆಯಲ್ಲೂ ರಾಜಕೀಯ ಮಾಡೋದು ಎಷ್ಟು ಸರಿ ಅಂತ ಕಿಡಿ ಕಾರಿದ್ರು.

ಇಂಥ ಘಟನೆಗಳು ಯಾವುದೇ ರಾಜ್ಯ, ದೇಶ ಮತ್ತು ಸಮುದಾಯಗಳನ್ನು ತಲೆತಗ್ಗಿಸುವಂತೆ ಮಾಡುತ್ತವೆ. ಕೃತ್ಯ ಅತ್ಯಂತ ಹೀನ ಮತ್ತು ಖಂಡನೀಯ. ಇಂಥ ಪ್ರಕರಣಗಳ ಬಗ್ಗೆ ಯಾರೇ ಆಗಲಿ ಸಂವೇದನೆಹೀನರಾಗಿ ಮಾತಾಡಬಾರದು. ಇದು ರಾಜಕೀಯ ವಿಷಯವಲ್ಲ, ಹೆಣ್ಣು ಮಗುವನ್ನು ಕಳೆದುಕೊಂಡಿರುವ ಕುಟುಂಬದ ಬಗ್ಗೆ ಎಲ್ಲರೂ ಯೋಚಿಸಬೇಕಿದೆ. ಇಂಥ ಘಟನೆಗಳು ಪುನಾರಾವರ್ತನೆ ಆಗುವುದನ್ನು ತಡೆಯಲು ತಪ್ಪಿತಸ್ಥರನ್ನು ಎನ್ಕೌಂಟರ್ ಮಾಡಿ ಸಾಯಿಸುವ ಕಾನೂನು ಜಾರಿಗೆ ತರುವುದನನ್ನು ಸರ್ಕಾರಗಳು ಯೋಚಿಸಬೇಕು.

– ಸಚಿವ ಸಂತೋಷ್ ಲಾಡ್

ಒಂದ್ಕಡೆ ನೇಹಾ ಹತ್ಯೆ ಹುಬ್ಬಳ್ಳಿ ಮಂದಿಯನ್ನ ಮಮ್ಮಲ ಮರುಗುವಂತೆ ಮಾಡಿದ್ರೆ, ಇನ್ನೊಂದೆಡೆ ಇದನ್ನೆ ರಾಜಕೀಯ ಅಸ್ತ್ರ ಮಾಡಿಕೊಳ್ಳೋದಕ್ಕೆ ನಾಯಕರು ಮುಂದಾಗಿದ್ದಾರೆ. ಆರೋಪ ಪ್ರತ್ಯಾರೋಪಗಳನ್ನ ಮಾಡ್ತಿದ್ದಾರೆ. ವಿದ್ಯಾರ್ಥಿನಿ ನೇಹಾ ಕೊಲೆ ಮಾಡಿರೋ ಆರೋಪಿಯ ವಿಚಾರಣೆಯೂ ನಡೆಯುತ್ತಿದೆ. ಆತ ಪೊಲೀಸ್‌ ಕಸ್ಟಡಿಯಲ್ಲಿ ಹೇಳಿರೋ ವಿಚಾರವೂ ಚರ್ಚೆಗೆ ಗ್ರಾಸವಾಗಿದೆ.

ಹುಬ್ಬಳ್ಳಿ ಪೊಲೀಸರ ವಶದಲ್ಲಿರುವ ಫಯಾಜ್, ನೇಹಾಳನ್ನು ಪ್ರೀತಿಸುತ್ತಿರುವ ಬಗ್ಗೆ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಆರೋಪಿ ಫಯಾಜ್ ನೇಹಾಳನ್ನು ಪ್ರೀತಿಸುತ್ತಿದ್ದ ಎಂಬ ಹೇಳಿಕೆಗೆ ನೇಹಾಳ ತಂದೆ​ ನಿರಂಜನ್ ಹಿರೇಮಠ ಗರಂ ಆಗಿದ್ದಾರೆ. ನನ್ನ ಮಗಳು ಇಷ್ಟ ಪಡ್ತಿದ್ರೆ ಅವಳ ಹತ್ಯೆ ಯಾಕೆ ಆಗ್ತಿತ್ತು. ಕಳಂಕ ಹಚ್ಚಿ ನನ್ ಮಗಳು ಆತ್ಮಕ್ಕೆ ದುಃಖ ಕೊಡ್ಬೇಡಿ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಈ ಘಟನೆಯನ್ನ ಆಕಸ್ಮಿಕ ಅನ್ನೋದು ದುರ್ದೈವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪ್ರೀತಿಯಲ್ಲಿದ್ರಾ ನೇಹಾ, ಫಯಾಜ್​​? ಈ ಬಗ್ಗೆ ಮಗಳನ್ನು ಕಳೆದುಕೊಂಡ ಕಾರ್ಪೊರೇಟರ್​​ ಹೇಳಿದ್ದೇನು?

https://newsfirstlive.com/wp-content/uploads/2024/04/death23.jpg

Load More