newsfirstkannada.com

‘ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್‌ ಅಂತ ಸಿಎಂ ಬೇಕು’- ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ತಂದೆ ಆಕ್ರೋಶ

Share :

Published May 15, 2024 at 5:42pm

  ಹುಬ್ಬಳ್ಳಿಯ ವೀರಾಪೂರ ಓಣಿಯ ಮನೆಯಲ್ಲಿದ್ದ ಯುವತಿ ಬರ್ಬರ ಹತ್ಯೆ

  ನೇಹಾ ಸಾವನ್ನಪ್ಪಿ ಒಂದು ತಿಂಗಳ ಒಳಗೆ ಮತ್ತೊಂದು ಭಯಾನಕ ಕೊಲೆ

  ಅಂಜಲಿ ಕೊಂದ ಆರೋಪಿಯನ್ನ ಬಂಧಿಸಿ ಗಲ್ಲಿಗೇರಿಸಬೇಕೆಂದು ಘೋಷಣೆ

ಹುಬ್ಬಳ್ಳಿ: ನೇಹಾ ಹಿರೇಮಠ ಬರ್ಬರ ಹತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ಕೊಲೆಯಾಗಿದೆ. ಹುಬ್ಬಳ್ಳಿ ವೀರಾಪೂರ ಓಣಿಯ ಅಂಜಲಿಯನ್ನು ಇಂದು ಬೆಳಗ್ಗೆ ಹತ್ಯೆ ಮಾಡಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮನೆಯಲ್ಲಿ ಯುವತಿ ಅಂಜಲಿ ಮಲಗಿದ್ದಾಗಲೇ ಮನೆಗೆ ಬಂದ ಹಂತಕ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಅಂಜಲಿ ಹತ್ಯೆಗೆ ಹುಬ್ಬಳ್ಳಿಯಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಲಾಗಿದೆ. ಅಂಜಲಿ ಹತ್ಯೆ ಖಂಡಿಸಿ ಪ್ರತಿಭಟನೆ ನಡೆದಿದ್ದು, ಆರೋಪಿಯನ್ನ ಬಂಧಿಸಿ ಗಲ್ಲಿಗೇರಿಸಬೇಕೆಂದು ಘೋಷಣೆ ಕೂಗಿದ್ದಾರೆ.

ಅಂಜಲಿ ಮೃತದೇಹವನ್ನು ಕಿಮ್ಸ್ ಶವಗಾರದಲ್ಲಿ ಇರಿಸಲಾಗಿದ್ದು, ನೇಹಾ ತಂದೆ ನಿರಂಜನ ಹಿರೇಮಠ ಅವರು ಭೇಟಿ ನೀಡಿದ್ದರು. ನಿರಂಜನ ಹಿರೇಮಠ ಅವರು ವೀರಾಪೂರ ಓಣಿಯ ಕಾಂಗ್ರೆಸ್ ಕಾರ್ಪೊರೇಟರ್‌ ಕೂಡ ಆಗಿದ್ದಾರೆ. ತಮ್ಮ ಏರಿಯಾದಲ್ಲಿನ ಯುವತಿ ಹತ್ಯೆ ಆಗಿರುವುದಕ್ಕೆ ನಿರಂಜನ ಹಿರೇಮಠ, ಹುಬ್ಬಳ್ಳಿ ಪೊಲೀಸರು ಹಾಗೂ ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ.

ನನ್ನ ವಾರ್ಡ್‌ನಲ್ಲಿ ಇಂತಹ ಘಟನೆಯಾಗಿರುವುದನ್ನ ನಾನು ಖಂಡಿಸುತ್ತೇನೆ. ನನ್ನ ಮಗಳು ನೇಹಾ ಹತ್ಯೆ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ಸದ್ಯ ನನ್ನ ವಾರ್ಡ್‌ನಲ್ಲೇ ಈ ರೀತಿ ಘಟನೆ ಮತ್ತೆ ಆಗಿದೆ. ನನ್ನ ಮಗಳು ಹತ್ಯೆಯಾದಾಗಲೇ ಈ ರೀತಿಯ ಮತ್ತೊಂದು ಘಟನೆಯಾಗಬಾರದು ಅಂತ ಹೇಳಿದ್ದೆ. ಆದರೂ ಇಂತಹ ಘಟನೆ ನಡೆದಿದೆ ಇದಕ್ಕೆ ಇಲ್ಲಿನ ಪೊಲೀಸ್ ಕಮೀಷನರ್ ಅವರೇ ಕಾರಣ ಎಂದು ಆರೋಪಿಸಿದರು.

ಇದನ್ನೂ ಓದಿ: ಹುಬ್ಬಳ್ಳಿಯ ಅಂಜಲಿ ಬರ್ಬರ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್‌.. ಕೊಲೆಗೆ ಕಾರಣವೇನು? ಅಸಲಿಗೆ ಆಗಿದ್ದೇನು? 

ಹುಬ್ಬಳ್ಳಿ ಪೊಲೀಸ್ ಕಮೀಷನರ್‌ ಸರಿಯಾದ ಏನು ಕ್ರಮ ಕೈಗೊಳ್ಳುತ್ತಿಲ್ಲ. ಸರಿಯಾಗಿ ಕೆಲಸ ಮಾಡಲು ಇಷ್ಟ ಇಲ್ಲದಿದ್ದರೇ ರಾಜೀನಾಮೆ ಕೊಟ್ಟು ಹೋಗಿ. ಅಂಜಲಿ ಕೂಡ ನನ್ನ ಮಗಳು ಇದ್ದ ಹಾಗೆ. ನನ್ನ ಮಗಳು ನೇಹಾಳ ಹತ್ಯೆ ವಿಚಾರವಾಗಿ ಯಾವ ರೀತಿ ಹೋರಾಟ ನಡೆದಿತ್ತು ಅದೇ ರೀತಿ ಇವಳ ಹತ್ಯೆಯನ್ನ ಖಂಡಿಸಬೇಕು ಎಂದು ನಿರಂಜನ ಹಿರೇಮಠ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಎಲ್ಲಾ ಕಡೆ ಯುವಕರು ಗಾಂಜಾ ಅಫೀಮು ಅಂತ ದಾರಿ ತಪ್ಪುತ್ತಿದ್ದಾರೆ. ಹೀಗಾಗಿ ಹುಬ್ಬಳ್ಳಿ ಪೊಲೀಸರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಕರ್ನಾಟಕಕ್ಕೂ ಉತ್ತರಪ್ರದೇಶ, ಹೈದರಾಬಾದ್‌ ಮಾದರಿಯಲ್ಲೇ ಎನ್‌ಕೌಂಟರ್‌ ಆಗಬೇಕು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಂತಹ ಸಿಎಂ ರಾಜ್ಯಕ್ಕೂ ಬೇಕಿದೆ ಎಂದು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್‌ ಅಂತ ಸಿಎಂ ಬೇಕು’- ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ತಂದೆ ಆಕ್ರೋಶ

https://newsfirstlive.com/wp-content/uploads/2024/05/Hubbali-Neha-Hiremath-Father-1.jpg

Load More