newsfirstkannada.com

BREAKING: ‘ಫಯಾಜ್‌ಗೆ ಕುಮ್ಮಕ್ಕು ನೀಡಿದವರು ಹೊರಗಿದ್ದಾರೆ’- ನೇಹಾ ತಂದೆ ಸ್ಫೋಟಕ ಹೇಳಿಕೆ

Share :

Published April 21, 2024 at 1:52pm

    ನೇಹಾ, ಫಯಾಜ್ ಫೋಟೋಗಳ ವೈರಲ್ ಹಿಂದೆ ದೊಡ್ಡ ಷಡ್ಯಂತ್ರ ಇದೆ

    ನ್ಯೂಸ್‌ ಫಸ್ಟ್ ಜೊತೆ ಮಾತನಾಡಿದ ಕಾರ್ಪೊರೇಟರ್ ನಿರಂಜನ ಹಿರೇಮಠ

    ಇಂದು ನೇಹಾ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿ ಸಾಧ್ಯತೆ

ಹುಬ್ಬಳ್ಳಿ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹಿರೇಮಠ್ ಅವರ ಹತ್ಯೆ ಪ್ರಕರಣ ಹೊಸ, ಹೊಸ ರೂಪ ಪಡೆದುಕೊಳ್ಳುತ್ತಿದೆ. ನೇಹಾ ಹಿರೇಮಠ ಮನೆಗೆ ಹಲವಾರು ನಾಯಕರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ನೇಹಾ ಅವರ ಮನೆಗೆ ಆಗಮಿಸೋ ಸಾಧ್ಯತೆ ಇದೆ.

ಈ ಬಗ್ಗೆ ನ್ಯೂಸ್‌ ಫಸ್ಟ್ ಜೊತೆ ಮಾತನಾಡಿರುವ ಕಾರ್ಪೊರೇಟರ್ ನಿರಂಜನ್ ಹಿರೇಮಠ ಅವರು, ಇವತ್ತು ಕಾಂಗ್ರೆಸ್ ಶಾಸಕರಾದ ಶ್ರೀನಿವಾಸ ಮಾನೆ, VRL ಮುಖ್ಯಸ್ಥ ವಿಜಯ ಸಂಕೇಶ್ವರ ಅವರು ಭೇಟಿ ನೀಡಿ ನಮಗೆ ಸಾಂತ್ವನ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭೇಟಿ ನೀಡಲು ಅನುಮತಿ ಕೇಳಿದ್ದಾರೆ. ನಮಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದ್ದೇನೆ ಎಂದರು.

ಇದೇ ವೇಳೆ ಹಂತಕ ಫಯಾಜ್ ಅವರ ತಾಯಿ, ತಂದೆ, ಸಹೋದರಿ ಹೇಳಿಕೆ ಗಮನಿಸಿದರೆ ಮೊದಲೇ ಪ್ರೀ ಪ್ಲಾನ್ ಮಾಡಿ ಕೊಲೆ ಮಾಡಿರೋ ಸೂಚನೆ ಸಿಗುತ್ತಾ ಇದೆ. ಫಯಾಜ್ ಕುಟುಂಬಸ್ಥರು ಮಗನಿಗೆ ಕುಮ್ಮಕ್ಕು ನೀಡಿದ್ದಾರೆ. ಹೀಗಾಗಿ ಫಯಾಜ್ ಮನೆಯವರ ಮೇಲೂ ದೂರು ಕೊಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೇಹಾ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್; ಫಯಾಜ್ ಹೆಸರಲ್ಲಿ ದಿಕ್ಕು ತಪ್ಪಿಸಲು ಕಿಡಿಗೇಡಿಗಳ ಯತ್ನ

ಇನ್ನು, ಸೋಷಿಯಲ್ ಮೀಡಿಯಾದಲ್ಲಿ ನೇಹಾ ಹಾಗೂ ಫಯಾಜ್ ಕುರಿತ ಹಲವು ಫೋಟೋಗಳನ್ನು ವೈರಲ್ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಇದೆ. ಹುಬ್ಬಳ್ಳಿಯಂತ ಊರಿನಲ್ಲಿ ಒಬ್ಬನೇ ರಾಜಾರೋಷವಾಗಿ ಮರ್ಡರ್ ಮಾಡಲು ಸಾಧ್ಯವಿಲ್ಲ.

ನೇಹಾಳ ಚಲನವಲನ ಎಲ್ಲವೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಆಕೆ ಯಾವುದಕ್ಕೂ ಬಗೋದಿಲ್ಲ ಅನ್ನೋ ಹೆಣ್ಣು ಮಗಳು ಅಂತ ಗೊತ್ತಾದ ಮೇಲೆ ಅವಳ ಜೀವ ತೆಗೆಯಲು ನಿರ್ಧರಿಸಿದ್ದಾರೆ. ಫಯಾಜ್ ಕುಟುಂಬಸ್ಥರ ಕುಮ್ಮಕ್ಕು ಇದರ ಹಿಂದೆ ಇದೆ. ಹಾಡಹಗಲೇ ಪ್ರತಿಷ್ಟಿತ ಕಾಲೇಜಿನಲ್ಲಿ ಏಕಾಏಕಿ ಇಂತಹ ಘಟನೆ ನಡೆಯಲು ಸಾಧ್ಯವಿಲ್ಲ ಎಂದು ನೇಹಾ ತಂದೆ ನಿರಂಜನ ಹಿರೇಮಠ ಅವರು ಆರೋಪಿಸಿದ್ದಾರೆ. ಇವತ್ತೇ ಫಯಾಜ್ ಮನೆಯವರ ಮೇಲೆ ದೂರು ಕೊಡುತ್ತೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ‘ಫಯಾಜ್‌ಗೆ ಕುಮ್ಮಕ್ಕು ನೀಡಿದವರು ಹೊರಗಿದ್ದಾರೆ’- ನೇಹಾ ತಂದೆ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2024/04/Hubbali-Neha-Hiremath-Father.jpg

Load More