newsfirstkannada.com

ಟಿ20 ವಿಶ್ವಕಪ್​ಗಾಗಿ ಬಲಿಷ್ಠ ನೇಪಾಳ ತಂಡ ಪ್ರಕಟ.. ರೋಹಿತ್​ ಕ್ಯಾಪ್ಟನ್​​!

Share :

Published May 2, 2024 at 6:04pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ 2024ರ ಟಿ20 ವಿಶ್ವಕಪ್

    ಜೂನ್​​ನಲ್ಲಿ ವೆಸ್ಟ್​ ಇಂಡೀಸ್​​ ಮತ್ತು ಯುಎಸ್​​​ನಲ್ಲಿ ಮೆಗಾ ಸಮರ

    ರೋಹಿತ್ ನಾಯಕತ್ವದ 15 ಸದಸ್ಯರ ನೇಪಾಳ ತಂಡ ಪ್ರಕಟ!

ಇಂಡಿಯನ್​ ಪ್ರೀಮಿಯರ್​ ಲೀಗ್​ ಬೆನ್ನಲ್ಲೇ ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಜೂನ್​​ನಲ್ಲಿ ವೆಸ್ಟ್​ ಇಂಡೀಸ್​​ ಮತ್ತು ಯುಎಸ್​​​ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಸಮರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಬಾರಿ 20 ರಾಷ್ಟ್ರಗಳು ಪ್ರತಿಷ್ಠಿತ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದು, ಈಗಾಗಲೇ ಹಲವು ದೇಶಗಳು ಬಲಿಷ್ಠ ತಂಡಗಳನ್ನು ಪ್ರಕಟಿಸಿವೆ.

ಈಗಾಗಲೇ ಸೌತ್​ ಆಫ್ರಿಕಾ, ಇಂಗ್ಲೆಂಡ್​​, ನ್ಯೂಜಿಲೆಂಡ್​​, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಟಿ20 ವಿಶ್ವಕಪ್​ಗೆ ಬಲಿಷ್ಠ ತಂಡಗಳನ್ನು ಪ್ರಕಟಿಸಿದ್ದವು. ಈಗ ನೇಪಾಳ ಕೂಡ ರೋಹಿತ್ ಪೌಡೆಲ್ ನಾಯಕತ್ವದ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಇತ್ತೀಚೆಗೆ ನೇಪಾಳ ತಂಡ ತಮ್ಮ ಅತ್ಯುತ್ತಮ ಕ್ರಿಕೆಟ್​ಗೆ ಹೆಸರು ವಾಸಿಯಾಗಿದೆ.

2024ರ ಟಿ20 ವಿಶ್ವಕಪ್‌ನಲ್ಲಿ ನೇಪಾಳವು ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೆದರ್ಲ್ಯಾಂಡ್ಸ್ ತಂಡಗಳೊಂದಿಗೆ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಫೇವರಿಟ್​ ತಂಡಗಳು ಆಗಿವೆ. ನೆದರ್ಲ್ಯಾಂಡ್ಸ್ ಮತ್ತು ನೇಪಾಳ ವಿಶ್ವ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕಿದೆ.

2024ರ ಟಿ20 ವಿಶ್ವಕಪ್‌ಗೆ ನೇಪಾಳ ತಂಡ ಹೀಗಿದೆ..!

ರೋಹಿತ್ ಪೌಡೆಲ್ (ನಾಯಕ), ಆಸಿಫ್ ಶೇಖ್ (ವಿಕೆಟ್ ಕೀಪರ್), ಅನಿಲ್ ಕುಮಾರ್ ಸಾಹ್, ಕುಶಾಲ್ ಭುರ್ಟೆಲ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಲಲಿತ್ ರಾಜಬಂಶಿ, ಕರಣ್ ಕೆಸಿ, ಗುಲ್ಶನ್ ಝಾ, ಸೋಂಪಾಲ್ ಕಾಮಿ, ಪ್ರತಿಸ್ ಜಿಸಿ, ಸಂದೀಪ್ ಜೋರಾ, ಅಬಿನಾಶ್ ಬೋಹರಾ, ಸಾಗರ್ ಧಕಲ್, ಕಮಲ್ ಸಿಂಗ್ ಐರಿ.

ಇದನ್ನೂ ಓದಿ: ಅಯ್ಯೋ.. ಕಣ್ಣೀರಿನಲ್ಲಿ ಸುರೇಶ್​ ರೈನಾ ಕುಟುಂಬ.. ಅಷ್ಟಕ್ಕೂ ಏನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್​ಗಾಗಿ ಬಲಿಷ್ಠ ನೇಪಾಳ ತಂಡ ಪ್ರಕಟ.. ರೋಹಿತ್​ ಕ್ಯಾಪ್ಟನ್​​!

https://newsfirstlive.com/wp-content/uploads/2024/05/Nepal-India.jpg

Load More