ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಪೊಲೀಸ್ ಇಲಾಖೆ ಸಿಬ್ಬಂದಿ
68ಕ್ಕೂ ಹೆಚ್ಚು ನಿವಾಸಿಗಳು ಕಣ್ಮರೆ, ಸ್ಥಳೀಯ ನಿವಾಸಿಗಳಲ್ಲಿ ಭಯ
ಮನೆ, ರಸ್ತೆ, ಸೇತುವೆ ಸೇರಿ ಸಾರ್ವಜನಿಕ ಆಸ್ತಿ- ಪಾಸ್ತಿ ಸರ್ವನಾಶ
ನೇಪಾಳದಲ್ಲಿ ಧಾರಾಕಾರ ಮಳೆಯಿಂದಾಗಿ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದ 112 ಜನರು ಮೃತಪಟ್ಟಿದ್ದು 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇವಲ 24 ಗಂಟೆಯಲ್ಲಿ ನೂರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ ಎಂದು ನೇಪಾಳದ ಆರ್ಮಡ್ ಪೊಲೀಸ್ ಪೋರ್ಸ್ ಮತ್ತು ನೇಪಾಳ ಪೊಲೀಸ್ ಅಧಿಕೃತವಾಗಿ ಮಾಹಿತಿ ನೀಡಿವೆ ಎನ್ನಲಾಗಿದೆ.
ಇದನ್ನೂ ಓದಿ: Jr NTR ಸಿನಿಮಾದಲ್ಲಿ ಕನ್ನಡಿಗನ ಕಮಾಲ್.. KGFನಲ್ಲೂ ಖದರ್, ‘ದೇವರ’ದಲ್ಲೂ ಸೂಪರ್..!
ನೇಪಾಳದ ಪೂರ್ವ ಭಾಗ ಹಾಗೂ ಮಧ್ಯ ಭಾಗದಲ್ಲಿ ವರುಣಾರ್ಭಟ ಜೋರಾಗಿದ್ದರಿಂದ ಹಲವಾರು ಪ್ರದೇಶಗಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ಅಲ್ಲದೇ ಪ್ರವಾಹ ಜೊತೆ ಭೂಕುಸಿತ ಕೂಡ ಸಂಭವಿಸುತ್ತಿರುವುದರಿಂದ 24 ಗಂಟೆಯಲ್ಲಿ 112 ಸ್ಥಳೀಯರು ಮೃತಪಟ್ಟಿದ್ದು 100ಕ್ಕೂ ಅಧಿಕ ಜನ ಗಂಭೀವಾಗಿ ಗಾಯಗೊಂಡಿದ್ದಾರೆ. ಅಲ್ಲದೇ 68ಕ್ಕೂ ಹೆಚ್ಚು ನಿವಾಸಿಗಳು ಕಣ್ಮರೆಯಾಗಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಕಾವ್ರೆಪಾಲನ್ ಚೌಕ್ ಜಿಲ್ಲೆಯಲ್ಲಿ 34 ಜನ ಮೃತಪಟ್ಟಿರುವುದು ಗೊತ್ತಾಗಿದೆ. ಇದರ ಬಳಿಕ ಲಲಿತ್‌ಪುರದಲ್ಲಿ 20, ಧಾಡಿಂಗ್‌ನಲ್ಲಿ 15 ಜನ ಸಾವನ್ನಪ್ಪಿದ್ದಾರೆ. ಕಠ್ಮಂಡು, ಮಕ್ವಾನ್‌ಪುರ್, ಸಿಂಧುಪಾಲ್‌ಚೌಕ್, ಡೋಲಾಖಾ, ಪಂಚತಾರ್, ಭಕ್ತಪುರ್, ಧನ್‌ಕುಟಾ, ಸೋಲುಖುಂಬು, ರಾಮ್‌ಚಾಪ್, ಮಹೋತ್ತ ಜಿಲ್ಲೆಗಳೆಲ್ಲ ಪ್ರವಾಹ ಪೀಡಿತ ಪ್ರದೇಶಗಳಾಗಿವೆ. ಸರ್ಕಾರವು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. 77 ಜಿಲ್ಲೆಗಳ ಪೈಕಿ 56 ಜಿಲ್ಲೆಗಳಲ್ಲಿ ಇನ್ನೂ ಮಳೆ ಆರ್ಭಟ ಮುಂದುವರೆಯಲಿ ಎಂದು ಅಲ್ಲಿನ ಹವಾಮಾನ ಇಲಾಖೆ ಹೇಳಿದೆ ಎನ್ನಲಾಗಿದೆ.
ಇದನ್ನೂ ಓದಿ: 2025 IPL; ವಿದಾಯದ ಬೆನ್ನಲ್ಲೇ CSKಗೂ ಬಿಗ್ ಶಾಕ್ ಕೊಟ್ಟ ಕೋಚ್ ಡ್ವೇನ್ ಬ್ರಾವೋ
ಕಠ್ಮಂಡು ಕಣಿವೆಯಲ್ಲಿ ಕನಿಷ್ಠ 195 ಮನೆಗಳು ಮತ್ತು 8 ಸೇತುವೆಗಳು ಹಾನಿಗೊಳಗಾಗಿವೆ. ಇದರಿಂದ ಸಂಪರ್ಕ ಸಂಪೂರ್ಣ ಕಡಿತವಾಗಿದ್ದು ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೆಪ್ಟೆಂಬರ್ 19 ರಿಂದ ಭಾರೀ ಮಳೆ ಸುರಿಯುತ್ತಿರುವ ಕಾರಣ ನೇಪಾಳೀಗರು ನಿತ್ಯದ ಕೆಲಸಕ್ಕೂ ಹರಸಾಹಸ ಪಡುವಂತೆ ಆಗಿದೆ. ಭದ್ರತಾ ಸಿಬ್ಬಂದಿ ಸುಮಾರು 3,100 ಜನರನ್ನು ರಕ್ಷಿಸಿದ್ದಾರೆ. ಪೊಲೀಸರು ಹಾಗೂ ಭದ್ರತಾ ಪಡೆ ಸೇರಿ ಒಟ್ಟು 3 ಸಾವಿರಕ್ಕೂ ಅಧಿಕ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ