Advertisment

ನೀಟ್ ಬಳಿಕ ನೆಟ್​​​ನಲ್ಲೂ ಅಕ್ರಮದ ವಾಸನೆ! ಎಕ್ಸಾಂ ನಡೆದ ಮರುದಿನವೇ ಪರೀಕ್ಷೆ ರದ್ದು.. ಮುಂದೇನು ಕತೆ?

author-image
AS Harshith
Updated On
PUC ರಿಸಲ್ಟ್​ ಔಟ್.. ದ್ವಿತೀಯ ಪಿಯುಸಿ ಪರೀಕ್ಷೆ- 3ರಲ್ಲೂ ಬಾಲಕಿಯರೇ ಮೇಲುಗೈ
Advertisment
  • ಜೂನ್ 18ರಂದು ದೇಶಾದ್ಯಂತ ನಡೆದಿದ್ದ ನೆಟ್ ಪರೀಕ್ಷೆ
  • 317 ನಗರಗಳು, 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರು
  • ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವ ಸರ್ಕಾರ

ದೇಶದ ಅತ್ಯಂತ ಕಠಿಣಾತಿ ಕಠಿಣ ಪರೀಕ್ಷೆ ನೀಟ್​​ನಲ್ಲಿ ಗೋಲ್​ಮಾಲ್ ನಡೆದಿರುವ ಆರೋಪ ಕೇಳಿಬಂದಿತ್ತು. ಪ್ರಕರಣ ಸುಪ್ರೀಂಕೋರ್ಟ್​​ನಲ್ಲಿದೆ. ಈ ಬೆನ್ನಲ್ಲೇ ಮೊನ್ನೆ ನಡೆದಿದ್ದ ಯುಜಿಸಿ ನೆಟ್ ಪರೀಕ್ಷೆಯಲ್ಲೂ ಅಕ್ರಮದ ವಾಸನೆ ಬಂದಿದ್ದು ಪರೀಕ್ಷೆ ರದ್ದುಗೊಳಿಸಿ ಮರಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisment

ಎನ್​ಇಟಿ. ನ್ಯಾಷನಲ್ ಎಲಿಜಬಿಲಿಟಿ ಟೆಸ್ಟ್​. ಯುಜಿಸಿ ನಡೆಸುವ ನೆಟ್​ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಸೇರಿದಂತೆ ಜೂನಿಯರ್ ಸಂಶೋಧನಾ ಫೆಲೋಶಿಪ್‌ಗೆ ಅರ್ಹತೆ ನಿರ್ಧರಿಸಲು ನಡೆಸುವ ಪರೀಕ್ಷೆಯಾಗಿದೆ. ಪವಿತ್ರ ಪ್ರಾಧ್ಯಾಪಕ ವೃತ್ತಿಗಾಗಿ ನಡೆಸುವ, ಪಾರದರ್ಶಕ ಹಾಗೂ ದೋಷಮುಕ್ತವಾಗಿ ನಡೆಯುತ್ತಿದ್ದ ನೆಟ್​ ಪರೀಕ್ಷೆಗೂ ಈಗ ಅಕ್ರಮದ ಕಳಂಕ ಮೆತ್ತಿಕೊಂಡಿದೆ.

ನೆಟ್​ ಪರೀಕ್ಷೆಯಲ್ಲೂ ಅಕ್ರಮದ ಕಳಂಕ

ದೇಶದಲ್ಲಿ ನೀಟ್‌ ವಿವಾದ ಕೊತ ಕೊತ ಕುದಿಯುತ್ತಿರುವ ನಡುವೆಯೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ್ದ ಯುಜಿಸಿ-ನೆಟ್ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಮೊನ್ನೆ ತಾನೇ ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಿರುವ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಪರೀಕ್ಷೆ ನಡೆದ ಒಂದು ದಿನದ ಬಳಿಕ ರದ್ದು ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ಜೊತೆಗೆ ಮರು ಪರೀಕ್ಷೆ ನಡೆಸಲು ಆದೇಶಿಸಿದೆ. ಪರೀಕ್ಷೆಯ ಸಮಗ್ರತೆಗೆ ಧಕ್ಕೆ ಹಾಗೂ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಈ ನಿರ್ಧಾರ ಕೈಗೊಂಡಿದೆ.

Advertisment


">June 19, 2024

ಇದನ್ನೂ ಓದಿ: ಇಂದು ನಿರ್ಧಾರವಾಗಲಿದೆ ದರ್ಶನ್​ ಭವಿಷ್ಯ! ಮತ್ತೆ ಪೊಲೀಸ್​ ಕಸ್ಟಡಿನಾ? ಜೈಲೇ ಗತಿನಾ? 

ನೆಟ್ ಮರುಪರೀಕ್ಷೆಯ ದಿನಾಂಕ ಶೀಘ್ರದಲ್ಲೇ ಪ್ರಕಟ

ಜೂನ್ 18ರಂದು ದೇಶಾದ್ಯಂತ ನೆಟ್ ಪರೀಕ್ಷೆ ನಡೆದಿತ್ತು. ದೇಶದ 317 ನಗರಗಳಲ್ಲಿ ಸುಮಾರು 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಪರೀಕ್ಷೆ ರದ್ದು ಮಾಡಿ ಆದೇಶಿಸಿದೆ. ಮರುಪರೀಕ್ಷೆಯ ದಿನಾಂಕ ಶೀಘ್ರದಲ್ಲೇ ಪ್ರಕಟಿಸಲಾಗುವುದು ಅಂತ ತಿಳಿಸಿದೆ. ಮೊನ್ನೆ ಪರೀಕ್ಷೆಗೆ ಹಾಜರಾಗಿದ್ದ ಎಲ್ಲರಿಗೂ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಈ ಬಗ್ಗೆ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಇನ್ನು ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯ ಹೊಣೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿ, ಸ್ಮೃತಿ ಮಂದನಾ ಬೌಲಿಂಗ್ ಹಾಕೋ ಸ್ಟೈಲ್​ ಸೇಮ್ ಟು ಸೇಮ್​..

Advertisment

ಇನ್ನು ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯೂನಿಟ್‌ನಿಂದ ಪರೀಕ್ಷೆಯಲ್ಲಿ ಅಕ್ರಮ ನಡೆದಿರಬಹುದೆಂಬ ಮಾಹಿತಿ ಪಡೆದ ಬಳಿಕವೇ ನೆಟ್ ಪರೀಕ್ಷೆ ರದ್ದುಗೊಳಿಸಲಾಗಿದೆ ಅಂತ ಸರ್ಕಾರ ತಿಳಿಸಿದೆ. ಬಿಹಾರದ ಪಾಟ್ನಾದಲ್ಲಿ ಪರೀಕ್ಷೆಯ ನಿರ್ವಹಣೆಯಲ್ಲಿ ಲೋಪ ಕಂಡುಬಂದಿದ್ದು, ವರದಿ ಕೇಳಲಾಗಿದೆ.

publive-image

ಇದನ್ನೂ ಓದಿ: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕುತ್ತಿಗೆಗೆ ಗಾಯ; ಅಭಿಮಾನಿಗಳಲ್ಲಿ ಆತಂಕ; ಏನಾಯ್ತು?

ನಾಳೆ ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ಪ್ರಸಕ್ತ ಸಾಲಿನ ಯುಜಿಸಿ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ. ಹೀಗಾಗಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಳೆ ದೇಶಾದ್ಯಂತ ಪ್ರತಿಭಟನೆಗೆ ಸಜ್ಜಾಗಿದೆ. ಒಟ್ಟಾರೆ, ನೆಟ್ ಪರೀಕ್ಷೆ ರದ್ದು ಮಾಡಿರುವ ಸರ್ಕಾರ ಭವಿಷ್ಯದಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಬಿಗಿ ಕ್ರಮ ವಹಿಸಬೇಕಿದೆ. ಪರೀಕ್ಷೆಗಳ ಪಾವಿತ್ರ್ಯತೆಯನ್ನು ಕಾಪಾಡಬೇಕಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment