newsfirstkannada.com

ಬಿಜೆಪಿಯಲ್ಲಿ ಘಟಾನುಘಟಿ ನಾಯಕರಿದ್ರೂ ವಿಜಯೇಂದ್ರಗೆ ಪಟ್ಟ ಕಟ್ಟಿದ್ದೇಕೆ? ಮೋದಿ, ಅಮಿತ್​ ಶಾ ಲೆಕ್ಕಾಚಾರ ಏನು?

Share :

Published November 11, 2023 at 6:09am

    ಯಡಿಯೂರಪ್ಪ ಗರಡಿಯಲ್ಲಿ ಬೆಳೆದಿದ್ದಕ್ಕೆ ವಿಜಯೇಂದ್ರನಿಗೆ ಪಟ್ಟ ಕಟ್ಟಿದ್ರಾ?

    ಹೈಕಮಾಂಡ್‌ ಏನೇ ನಿರ್ಧಾರ ಮಾಡಿದ್ರು ಅದ್ರ ಹಿಂದೆ ಲೆಕ್ಕಾಚಾರಗಳು ಇವೆ

    ಯುವಕರನ್ನು ಸೆಳೆಯುವ, ಸಂಘಟಿಸುವ ಸಾಮರ್ಥ್ಯ ವಿಜಯೇಂದ್ರರಿಗೆ ಇದೆ!

ರಾಜ್ಯ ಬಿಜೆಪಿ ಸಾರಥಿಯಾಗಲು ನಾ ಮುಂದು ತಾ ಮುಂದು ಅನ್ನೋ ಸ್ಪರ್ಧೆ ಇತ್ತು. ವಿಜಯೇಂದ್ರರ ಜೊತೆಗೆ ಶೋಭಾ ಕರಂದ್ಲಾಜೆ, ಸಿಟಿ ರವಿಯಂತಹ ಘಟಾನುಘಟಿಗಳೇ ರೇಸ್‌ನಲ್ಲಿದ್ರು. ಆದ್ರೆ, ಕಾಂಗ್ರೆಸ್‌ನಲ್ಲಿ ಸಿದ್ದು ಮತ್ತು ಡಿಕೆಯಂತಹ ಪ್ರಳಯ ನಾಯಕರಿದ್ದಾಗ, ಅವರ ಎದುರು ಬಿಜೆಪಿಯನ್ನ ಮತ್ತೆ ಪುಟಿದೇಳುವಂತೆ ಮಾಡೋಕೆ ಮತ್ತೊಬ್ಬ ಪ್ರಬಲನೇ ಬೇಕಿತ್ತು. ಅದೆಲ್ಲ ಲೆಕ್ಕಾಚಾರಗಳನ್ನ ತಲೆಯಲ್ಲಿಟ್ಕೊಂಡು, ಕೇಸರಿ ಹೈಕಮಾಂಡ್‌ ವಿಜಯೇಂದ್ರ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಹಾಗಾದ್ರೆ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರರನ್ನೇ ಆಯ್ಕೆ ಮಾಡಲು ಇದ್ದ ಆ 5 ಪ್ರಮುಖ ಕಾರಣಗಳಾದ್ರೂ ಏನು?.

ವಿಜಯೇಂದ್ರ ರಾಜ್ಯ ಬಿಜೆಪಿ ಸಾರಥಿ ಅಂತಾ ಗೊತ್ತಾಗಿದ್ದೇ ತಡ. ಕೇಸರಿ ಪಡೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ. ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ವಿಜಯೇಂದ್ರನನ್ನ ಹೊತ್ತು ಹೂ ಮಳೆ ಸುರಿಸಿದ್ದಾರೆ. ಹಾಗಾದ್ರೆ, ಕಾರ್ಯಕರ್ತರ ಸಂಭ್ರಮಕ್ಕೆ ಕಾರಣವೇನು? ಘಟಾನುಘಟಿ ನಾಯಕರು ರಾಜ್ಯಾಧ್ಯಕ್ಷ ರೇಸ್‌ನಲ್ಲಿದ್ರೂ ಮೋದಿ-ಶಾ ವಿಜಯೇಂದ್ರಗೆ ಮಣೆ ಹಾಕಿದ್ದೇಕೆ? ಇಂತಹ ಪ್ರಶ್ನೆಗಳನ್ನ ಬೆನ್ನತ್ತಿ ಹೋದ್ರೆ ವಿಜಯೇಂದ್ರಗೆ ಇರೋ ಶಕ್ತಿ ಸಾಮರ್ಥ್ಯ ಏನು ಅನ್ನೋದ್‌ ಗೊತ್ತಾಗುತ್ತಿದೆ.

ತಂದೆಯ ಜೊತೆ ಕಾರ್ಯಕ್ರಮದಲ್ಲಿ ಸಹೋದರರು

ಸಂಘಟನೆ ಶಕ್ತಿ ಅಡಗಿದೆ, ಯಡಿಯೂರಪ್ಪರ ಕೃಪೆ ಇರುತ್ತೆ!

ರಾಜ್ಯ ಸಾರಥಿ ಪಟ್ಟ ವಿಜಯೇಂದ್ರಗೆ ಏಕೆ ದಕ್ಕಿತು ಅಂತಾ ನೋಡ್ತಾ ಹೋದ್ರೆ ನಮ್ಗೆ ಬಹುಮುಖ್ಯವಾಗಿ ಕಾಣಿಸೋದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವ್ರ ಪುತ್ರ ಅನ್ನೋದು. ಹೌದು, ಇಷ್ಟು ವರ್ಷ ಏನಾಗ್ತಿತ್ತು ಅಂದ್ರೆ ಬಿಜೆಪಿಗೆ ಯಡಿಯೂರಪ್ಪ ಮಾಸ್‌ ಲೀಡರ್‌ ಆಗಿದ್ರು. ಹೀಗಾಗಿ ಕೇಸರಿ ಪಡೆಯ ಹೈಕಮಾಂಡ್‌ಗೆ ಟೆನ್ಷನ್‌ ಅನ್ನೋದ್‌ ಇರ್ಲೇ ಇಲ್ಲ. ಲಿಂಗಾಯತರು ಅಷ್ಟೇ ಅಲ್ಲದೇ ಬೇರೆ ಬೇರೆ ಸಮುದಾಯದವ್ರು ಯಡಿಯೂರಪ್ಪ ಬೆನ್ನಿಗೆ ಗಟ್ಟಿಯಾಗಿ ನಿಂತುಕೊಂಡಿದ್ರು. ಆದ್ರೆ, ಈಗ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತರಾಗಿ ಬಿಟ್ಟಿದ್ದಾರೆ. ಬಟ್‌, ಯಡಿಯೂರಪ್ಪ ಅವ್ರಂತೆ ಮತ್ತೊಬ್ಬ ಮಾಸ್‌ ಲೀಡರ್‌ ಸಿಕ್ಕರೇ ಮಾತ್ರ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯ ಅನ್ನೋದು ಹೈಕಮಾಂಡ್‌ಗೆ ಅರ್ಥವಾಗಿದೆ.

ಬಿಜೆಪಿ ಹೈಕಮಾಂಡ್‌ ಏನೇ ನಿರ್ಧಾರ ಕೈಗೊಂಡ್ರೂ ಅದ್ರ ಹಿಂದೆ ಅನೇಕ ಲೆಕ್ಕಾಚಾರಗಳು ಇದ್ದೇ ಇರ್ತಾವೆ. ಅದ್ರಲ್ಲಿ ವಿಜಯೇಂದ್ರ ಕೇವಲ ಮಾಜಿ ಸಿಎಂ ಪುತ್ರ ಅನ್ನೋದ್‌ ಮಾತ್ರ ಅಲ್ಲ. ಯಡಿಯೂರಪ್ಪ ಸಿಎಂ ಆದಾಗ ಅವ್ರ ಬೆನ್ನಿಗೆ ಗಟ್ಟಿಯಾಗಿ ನಿಂತ್ಕೊಂಡ್‌ ತಮ್ಮ ಶಕ್ತಿ ಸಾಮರ್ಥ್ಯ ಏನು ಅನ್ನೋದನ್ನು ವಿಜಯೇಂದ್ರ ತೋರಿಸಿದ್ದಾರೆ. ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವಿದೆ. ಇನ್ನೊಂದ್‌ ಮಹತ್ವದ ವಿಚಾರ ಅಂದ್ರೆ, ವಿಜಯೇಂದ್ರ ಅಂತಹ ಯುವಕರ ಉತ್ಸಾಹ ಜೊತೆ ಯಡಿಯೂರಪ್ಪನವರ ಅನುಭವ ಒಂದುಗೂಡಿದ್ರೆ ಪಕ್ಷ ಪ್ರಬಲವಾಗಲಿದೆ. ಜೊತೆಗೆ ಸಮುದಾದಯ ಬೆಂಬಲವೂ ಇದೆ. ಈ ಕಾರಣಕ್ಕೆ ಹೈಕಮಾಂಡ್ ವಿಜಯೇಂದ್ರಗೆ ಮಣೆ ಹಾಕಿದೆ.

ಬಿಎಸ್​ವೈ ಪುತ್ರರು

ಉಪಚುನಾವಣೆಯಲ್ಲಿ ತೋರಿಸಿದ್ದಾರೆ ಚಾಣಾಕ್ಷತನ!

ವಿಜಯೇಂದ್ರ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆದ್ರೆ, ತಮ್ಮ ಸಾಮರ್ಥ್ಯ ಏನು ಅನ್ನೋದನ್ನು ಹೈಕಮಾಂಡ್‌ ಮಟ್ಟದಲ್ಲಿ ಅನೇಕ ಬಾರಿ ಸಾಬೀತು ಮಾಡಿ ತೋರಿಸಿದ್ದಾರೆ. ಅದ್ರಲ್ಲಿ ನಮ್ಗೆ ಪ್ರಮುಖವಾಗಿ ಕಾಣಿಸೋದು ಅಂದ್ರೆ ಯಡಿಯೂರಪ್ಪ ಸಿಎಂ ಆಗಿದ್ದಾಗ ನಡೆದಿರೋ ಉಪಚುನಾವಣೆಗಳು, ಹೌದು, ಕೆಆರ್‌ ಪೇಟೆ ಮತ್ತು ಶಿರಾದಲ್ಲಿ ವಿಜಯೇಂದ್ರ ಉಸ್ತುವಾರಿಯಾಗಿ ತೆಗೆದ್ಕೊಂಡಿದ್ರು. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸ್ಕೊಂಡ್‌ ಬರೋ ಜವಾಬ್ದಾರಿ ಹೊತ್ತುಕೊಂಡಿದ್ರು. ಆದ್ರೆ, ಅದು ಅಷ್ಟು ಸುಲಭದ ಕೆಲ್ಸ ಆಗಿರ್ಲಿಲ್ಲ. ಯಾಕಂದ್ರೆ, ಆ ಎರಡೂ ಕ್ಷೇತ್ರದಲ್ಲಿ ಬಿಜೆಪಿಯ ಗಂಧಗಾಳಿ ಇರ್ಲಿಲ್ಲ. ಇತಿಹಾಸದಲ್ಲಿ ಯಾವಾಗ್ಲೂ ಬಿಜೆಪಿ ಠೇವಣಿ ಉಳಿಸ್ಕೊಂಡಿದ್ದು ಇರ್ಲಿಲ್ಲ. ಆದ್ರೆ, ವಿಜಯೇಂದ್ರ ಆ ಎರಡೂ ಕ್ಷೇತ್ರದಲ್ಲಿ ಕೇಸರಿ ಬಾವುಟ ರಾರಾಜಿಸುವಂತೆ ಮಾಡಿದ್ರು. ಅದು ಹೈಕಮಾಂಡ್‌ ನಾಯಕರ ದೃಷ್ಟಿ ವಿಜಯೇಂದ್ರ ಮೇಲೆ ಬೀಳುವಂತೆ ಮಾಡಿತ್ತು. ಆವಾಗ ವಿಜಯೇಂದ್ರನನ್ನು ಅಮಿತ್‌ ಶಾ ದೆಹಲಿಗೆ ಕರೆಯಿಸ್ಕೊಂಡ್‌ ಬೆನ್ನುತಟ್ಟಿ ಕಳುಹಿಸಿದ್ರು.

ಇನ್ನು ವಿಜಯೇಂದ್ರ ಯುವಕರನ್ನು ಸೆಳೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ವಿಜಯೇಂದ್ರ ಱಲಿಗೆ ಬರ್ತಾರೆ ಅಂದ್ರೆ ಸಾಕು ಸಾವಿರಾರು ಯುವಕರು ಸ್ವಇಚ್ಛೆಯಿಂದ ಬರ್ತಾರೆ. ಹಿಂದೆ ಯಡಿಯೂರಪ್ಪ ಱಲಿಗೆ ಯಾವ್‌ ರೀತಿಯಲ್ಲಿ ಜನಸಾಗರ ಹರಿದು ಬರ್ತಾ ಇದ್ರೋ ಸೇಮ್‌ ಹಾಗೇ ವಿಜಯೇಂದ್ರ ಱಲಿಗೆ ಬರ್ತಿದ್ದಾರೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿರೋ ಬಿಜೆಪಿ ಹೈಕಮಾಂಡ್‌ ವಿಜಯೇಂದ್ರನೇ ರಾಜ್ಯ ಸಾರಥಿಯಾಗ ಸೂಕ್ತ ಅಂತಾ ನಿರ್ಧಾರ ಮಾಡಿದೆ.

ರಾಜ್ಯದಲ್ಲಿ ಬಿಜೆಪಿಗೆ ಕಠಿಣ ಹಾದಿಯಿದೆ. ಹಾಗಂತ ಸುಮ್ಮನೇ ಇರುವಂತೆ ಇಲ್ಲ. ಯಾಕಂದ್ರೆ ಲೋಕಸಭೆಯಲ್ಲಿ ಕಳೆದ ಬಾರಿ ಬಿಜೆಪಿಗೆ ರಾಜ್ಯದಲ್ಲಿ 25 ಸೀಟ್‌ ಸಿಕ್ಕಿದೆ. ಅದೆಲ್ಲವನ್ನು ಉಳಿಸ್ಕೊಳ್ಬೇಕು ಅಂತಾದ್ರೆ ಬಿಜೆಪಿ ಹೈಕಮಾಂಡ್‌ ಎಚ್ಚರಿಕೆಯ ಹೆಜ್ಜೆ ಇಡ್ಬೇಕು. ಆ ಕೆಲ್ಸವನ್ನು ಮಾಡ್ತಿರೋ ಹಾಗೇ ಕಾಣಿಸ್ತಿದೆ.

ಲಕ್ಷ್ಮಣ ಸವದಿ

ಶೆಟ್ಟರ್‌, ಸವದಿ ಹೋಗಿದ್ದಕ್ಕೆ ಡ್ಯಾಮೇಜ್‌ ಕಂಟ್ರೋಲ್‌!

ಕಳೆದ ವಿಧಾನಸಭೆ ಎಲೆಕ್ಷನ್‌ನಲ್ಲಿ ಬಿಜೆಪಿಗೆ ಏಕೆ ಹೀನಾಯ ಸೋಲು ಎದುರಾಯ್ತು ಅಂತಾದ್ರೆ ಕೇಳಿಬರೋ ಆನ್ಸರ್‌ ಲಿಂಗಾಯತ ವೋಟ್‌ಗಳು ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದಲ್ಲಿ ಹೋಗಿದ್ದು. ಹೌದು, ಯಡಿಯೂರಪ್ಪ ಆಕ್ಟೀವ್​ ಇರೋವರೆಗೂ ಲಿಂಗಾಯತ ಸಮುದಾಯ ದೊಡ್ಡ ಪ್ರಮಾಣದಲ್ಲಿ ಬಿಜೆಪಿ ಜೊತೆ ನಿಂತ್ಕೊಂಡಿತ್ತು. ಹೀಗಾಗಿ ಬಿಜೆಪಿಗೆ ಸೋಲು ಎದುರಾದ್ರೂ ಹೀನಾಯ ಸೋಲು ಎದುರಾಗ್ತಾ ಇರ್ಲಿಲ್ಲ. ಆದ್ರೆ, ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ರು. ಇನ್ನು ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿದಿದ್ದನ್ನೇ ಕಾಂಗ್ರೆಸ್‌ ದೊಡ್ಡ ಅಸ್ತ್ರವಾಗಿ ಮಾಡ್ಕೊಂಡಿತ್ತು. ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಅನ್ನೋದನ್ನು ದೊಡ್ಡದಾಗಿ ಡಂಗೂರ ಸಾರಿತ್ತು. ಹಾಗೇ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಟಿಕೆಟ್‌ ಸಿಗದ ಅಸಮಾದಾನದಲ್ಲಿ ಕಾಂಗ್ರೆಸ್‌ಗೆ ಜಂಪ್‌ ಆಗಿದ್ರು. ಇದೆಲ್ಲದ್ರ ಪರಿಣಾಮ ಇಷ್ಟು ವರ್ಷಗಳ ಕಾಲ ಕೇಸರಿ ಪಾಳಯದ ಬುಟ್ಟಿಯಲ್ಲಿ ಭದ್ರವಾಗಿದ್ದ ಲಿಂಗಾಯತ ವೋಟ್‌ಗಳು ಕಾಂಗ್ರೆಸ್‌ಗೆ ಹೋದ್ವು. ಒಮ್ಮೆ ಡಿಕೆಶಿ ಲಿಂಗಾಯತ ಡ್ಯಾಮ್‌ ಒಡೆದಿದೆ ಅಂತಾ ಹೇಳಿದ್ದು ಇದೇ ಕಾರಣಕ್ಕೆ.

ವಿಜಯೇಂದ್ರ ಆಯ್ಕೆ ಏಕೆ ಮಾಡಿದ್ದಾರೆ ಅಂತಾ ಕೇಳಿದ್ರೆ ಇದ್ಕೆ ನೋಡಿ. ಕಳೆದ ವಿಧಾನಸಭೆಯಲ್ಲಿ ದೂರವಾಗಿರೋ ಲಿಂಗಾಯತ ಮತಗಳು ಅವುಗಳನ್ನು ಪುನಃ ಬಿಜೆಪಿಗೆ ತರ್ಬೇಕು ಅಂತಾದ್ರೆ, ಶೆಟ್ಟರ್‌, ಸವದಿ ಪಕ್ಷ ಬಿಟ್ಟು ಹೋಗಿರೋ ಡ್ಯಾಮೇಜ್‌ ಕಂಟ್ರೋಲ್‌ ಮಾಡ್ಕೋಬೇಕು ಅಂತಾದ್ರೆ ಒಬ್ಬ ಪ್ರಬಲ ಲಿಂಗಾಯತ ನಾಯಕನನ್ನೇ ಸಾರಥಿಯಾಗಿಸ್ಬೇಕಿತ್ತು. ಆ ಸಾಮರ್ಥ್ಯ ವಿಜಯೇಂದ್ರಗೆ ಇದೆ ಅಂತಾ ಸಮೀಕ್ಷೆ ಮೂಲಕ ಅರಿತ್ಕೊಂಡಿರೋ ಬಿಜೆಪಿ ಶಿಕಾರಿಪುರದ ಶಾಸಕನಿಗೆ ಪಟ್ಟಕಟ್ಟಿದೆ. ಇನ್ನು ವಿಜಯೇಂದ್ರ ಯಡಿಯೂರಪ್ಪ ಅವ್ರ ಪುತ್ರರಾಗಿರೋದ್ರಿಂದ, ಲಿಂಗಾಯತ ಸಮುದಾಯದ ಲೀಡರ್‌ಗಳು ಮತ್ತು ಮಠಾಧೀಶರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ವಿಜಯೇಂದ್ರ ಪ್ರಭಾವ ಇರೋದ್ರಿಂದ ಲೋಕಸಮದ ವಿಜಯಕ್ಕೆ ಅನುಕೂಲ ಆಗುತ್ತೆ ಅನ್ನೋ ಲೆಕ್ಕಾಚಾರವೂ ಖಂಡಿತ ಅಡಗಿದೆ.

ಸ್ವಾಮೀಜಿಯವರೊಂದಿಗೆ ವಿಜಯೇಂದ್ರ

ಒಂದು ಕಾಲು ಹೊರಗಿಟ್ಟವರನ್ನು ಹಿಡಿದಿಟ್ಟುಕೊಳ್ಳುವುದು!

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದೇ ತಡ. ಲೋಕಸಭೆಯಲ್ಲಿ ಕನಿಷ್ಠ 20 ಸೀಟ್‌ ಗೆಲ್ಬೇಕು ಅಂತಾ ಸೈಲೆಂಟ್‌ ಆಗಿ ಆಪರೇಷನ್‌ ಹಸ್ತ ಶುರು ಮಾಡಿದ್ದಾರೆ. ಮೀಡಿಯಾದ್ವರು ಕೇಳಿದ್ರೆ ಇಲ್ಲಾ ಇಲ್ಲಾ ನಾವು ಅಪರೇಷನ್‌ ಹಸ್ತ ಮಾಡ್ತಿಲ್ಲ. ಅವರಾಗಿಯೇ ಪಕ್ಷಕ್ಕೆ ಬರ್ತಿದ್ದಾರೆ ಅನ್ನೋದನ್ನು ಹೇಳ್ತಿದ್ದಾರೆ. ಇನ್ನು ಬಿಜೆಪಿಯಲ್ಲಿರೋ ಮಾಜಿ ಶಾಸಕರು ಭಾರೀ ದೊಡ್ಡ ಪ್ರಮಾಣದಲ್ಲಿ ಸಿದ್ದು-ಡಿಕೆ ಬಲೆಗೆ ಬಿದ್ದಿದ್ದಾರೆ. ಹೀಗಾಗಿಯೇ ಒಂದು ಕಾಲನ್ನು ಪಕ್ಷದಿಂದ ಹೊರಕ್ಕೆ ಇಟ್ಟಿದ್ದಾರೆ. ಬಟ್‌, ಇಂಥಾ ಟೈಮ್‌ನಲ್ಲಿ ಬಿಜೆಪಿಗೆ ಅವರನ್ನು ಹಿಡಿದಿಟ್ಟುಕೊಳ್ಳುವ ದಕ್ಷ ನಾಯಕ ಸಾರಥಿಯಾಗ್ಬೇಕು. ವಿಜಯೇಂದ್ರ ಹೊರತು ಪಡ್ಸಿ ಯಾರೇ ರಾಜ್ಯಾಧ್ಯಕ್ಷರಾದ್ರೂ ಅವರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಅನ್ನೋ ಅರಿವು ಬಿಜೆಪಿ ಹೈಕಮಾಂಡ್‌ಗೆ ಮನವರಿಕೆಯಾಗಿದೆ. ವಿಜಯೇಂದ್ರ ರಾಜಕೀಯವಾಗಿ, ಲಿಂಗಾಯತ ಸಮುದಾಯದಲ್ಲಿ ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಗುರ್ತಿಸಿಕೊಂಡಿದ್ದಾರೆ. ಹೀಗಾಗಿ ಹೈಕಮಾಂಡ್‌ ಶಿಕಾರಿಪುರ ವೀರನಿಗೆ ಮಣೆ ಹಾಕಿದೆ.

ಇನ್ನೊಂದ್‌ ವಿಚಾರ ಅಂದ್ರೆ, ಲಿಂಗಾಯತ ಸಮುದಾಯದ ವೋಟ್‌ ಚಾಮರಾಜನರಗರಿಂದ ಬೀದರ್‌ ವರೆಗೂ ಇದೆ. ಹೀಗಾಗಿ ವಿಜಯೇಂದ್ರನನ್ನು ಅಧ್ಯಕ್ಷರಾಗಿ ಮಾಡೋದ್ರಿಂದ ಜೆಡಿಎಸ್‌ಗೂ ದೊಡ್ಡ ಪ್ರಮಾಣದಲ್ಲಿ ಲಾಭವಿದೆ ಅನ್ನೋದ್‌ ಕೇಳಿಬರ್ತಿದೆ. ಅರೇ ವಿಜಯೇಂದ್ರ ಬಿಜೆಪಿ ಸಾರಥಿಯಾದ್ರೆ ಜೆಡಿಎಸ್‌ಗೆ ಹೇಗೆ ಲಾಭ ಅನ್ನೋದ್‌ ಪ್ರಶ್ನೆ. ಲೋಕಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ದೋಸ್ತಿಯಾಗಿ ಅಖಾಡಕ್ಕೆ ಇಳಿಯಲು ಸಜ್ಜಾಗಿದೆ. ಹಳೇ ಮೈಸೂರು ಭಾಗದಲ್ಲಿ ಸಾಮಾನ್ಯವಾಗಿ ಜೆಡಿಎಸ್‌ ಪ್ರಭಲವಾಗಿರೋದ್ರಿಂದ 4 ರಿಂದ 5 ಸೀಟ್‌ಗಳು ದಳಪತಿಗಳಿಗೆ ಸಿಗುತ್ತೆ. ಇಲ್ಲಿ ಒಕ್ಕಲಿಗ ವೋಟ್‌ಗಳ ಜೊತೆ ಲಿಂಗಾಯತ ವೋಟ್‌ಗಳು ಸೇರ್ಬೇಕು ಅಂತಾದ್ರೆ ವಿಜಯೇಂದ್ರ ಸಾರಥಿಯಾಗ್ಬೇಕಿತ್ತು. ಹೌದು, ಇದೇ ವಿಚಾರವನ್ನು ಜೆಡಿಎಸ್‌ ಕೂಡ ಪ್ಲಾನ್‌ ಮಾಡ್ಕೊಂಡಿತ್ತು. ವಿಜಯೇಂದ್ರನೇ ರಾಜ್ಯಾಧ್ಯಕ್ಷ ಆಗ್ಲಿ ಅಂತಾ ಕಾಯ್ತಾನೇ ಇತ್ತು. ಇದೀಗ ದಳದ ಆಸೆ ನೆರವೇರಿದೆ.

ಸಿದ್ದು-ಡಿಕೆ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಲು ‘ವಿಜಯಾಸ್ತ್ರ’!

ಫೈನಲಿ ವಿಜಯೇಂದ್ರಗೆ ಬಿಜೆಪಿ ಹೈಕಮಾಂಡ್‌ ಮಣೆ ಹಾಕಿದೆ. ಯಾಕಂದ್ರೆ, ಸಿದ್ದು-ಡಿಕೆ ಜೋಡೆತ್ತಿನ ಲಾಗಾಲೋಟಕ್ಕೆ ಬ್ರೇಕ್‌ ಹಾಕಬೇಕಿತ್ತು. ಯೆಸ್‌, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ನಡುವೆ ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯಗಳು ಇರ್ಬಹುದು. ಪಕ್ಷದೊಳಗೆ ಅಂತರ್ಯುದ್ಧವೂ ಇರ್ಬಹುದು. ಆದ್ರೆ, ಎಲೆಕ್ಷನ್‌ ವಿಚಾರದಲ್ಲಿ ಮಾತ್ರ ಇಬ್ಬರು ಜೋಡೆತ್ತಾಗಿ ದಂಡಯಾತ್ರೆಗೆ ಹೊರಡುತ್ತಾರೆ. ಇದು ಬಿಜೆಪಿಗೆ ಟೆನ್ಷನ್‌ ಮೇಲೆ ಟೆನ್ಷನ್‌ ಸೃಷ್ಟಿಮಾಡಿ ಬಿಟ್ಟಿದೆ. ಹೇಗಾದ್ರೂ ಮಾಡಿ ಇವ್ರಿಗೆ ಮೂಗು ದಾರ ಹಾಕ್ಬೇಕು ಅಂತಾನೇ ಪ್ಲಾನ್‌ ಮೇಲೆ ಪ್ಲಾನ್‌ ಮಾಡ್ತಾನೇ ಇತ್ತು.

ವಿಜಯೇಂದ್ರ ರಾಜ್ಯ ಬಿಜೆಪಿಗೆ ಸಾರಥಿಯಾಗಿದ್ದಕ್ಕೆ ಕಾಂಗ್ರೆಸ್‌ ನಾಗಾಲೋಟಕ್ಕೆ ಹೇಗೆ ಬ್ರೇಕ್‌ ಬೀಳುತ್ತೆ ಅಂದ್ರೆ ಕಾಂಗ್ರೆಸ್‌ ಬುಟ್ಟಿ ಸೇರಿರೋ ಲಿಂಗಾಯತ ವೋಟ್‌ಗಳು ಪುನಃ ಬಿಜೆಪಿ ಸೇರೋ ಸಾಧ್ಯತೆ ಇರುತ್ತೆ. ಸ್ವಲ್ಪ ಪ್ರಮಾಣದ ವೋಟ್‌ಗಳು ಪುನಃ ಬಿಜೆಪಿ ಸೇರಿದ್ರೆ ಫಲಿತಾಂಶ ಏರುಪೇರಾಗುವುದು ಪಕ್ಕಾ ಆಗಿರುತ್ತೆ. ಪಕ್ಷದಿಂದ ಹೊರಹೋಗಲು ತೀರ್ಮಾನಿಸಿದವರು ಪಕ್ಷದಲ್ಲಿ ಉಳಿದುಕೊಳ್ಳುವ ಸಾಧ್ಯತೆ ಇರುತ್ತೆ. ಇವೆಲ್ಲವುಗಳಿಂತ ಹೆಚ್ಚಾಗಿ ಲಿಂಗಾಯತ ಸಮುದಾಯಕ್ಕೆ ಒಬ್ಬ ಯುವಕನ ಸಾರಥ್ಯ ಸಿಗುವುದು ಹುಮ್ಮಸ್ಸು ಮೂಡಿಸಿದೆ.

ವಿಜಯೇಂದ್ರ ಸಾರಥಿ ಪಟ್ಟ, ಕಾಂಗ್ರೆಸ್‌ಗೆ ಸವಾಲು ಏನು?

ಲಿಂಗಾಯತ ಸಮುದಾಯದ ಯುವ ನಾಯಕ ಬಿ.ವೈ ವಿಜಯೇಂದ್ರಗೆ ಬಿಜೆಪಿ ಸಾರಥ್ಯ ಸ್ಥಾನ ಕೊಟ್ಟಿರೋದು ಕಾಂಗ್ರೆಸ್‌ಗೆ ಮಾಸ್ಟರ್‌ ಸ್ಟ್ರೋಕ್‌ ಅಂದ್ರೆ ಖಂಡಿತ ತಪ್ಪಾಗದು. ಇದೀಗ ಕಾಂಗ್ರೆಸ್‌ಗೆ ಲಿಂಗಾಯತ ಮತಗಳನ್ನು ಸೆಳೆಯೋ ಸವಾಲು ಪಕ್ಕಾ ಎದುರಾಗುತ್ತೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಮಟ್ಟಕ್ಕೆ ಲಿಂಗಾಯತ ಸಮುದಾಯದ ಮತಗಳನ್ನ ಸೆಳೆಯೋದ್ರಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಯಡಿಯೂರಪ್ಪರನ್ನ ಸಿಎಂ ಸ್ಥಾನದಿಂದ ಕೆಳಕ್ಕಿಳಿಸಿ ವಿಷಯವನ್ನೇ ಚುನಾವಣೆಯಲ್ಲಿ ಪ್ರಸ್ತಾಪಿಸಿ ಲಾಭ ಮಾಡ್ಕೊಂಡಿತ್ತು. ಜೊತೆಗೆ ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯವರನ್ನ ಸೆಳೆದು ಬಿಜೆಪಿ ಲಿಂಗಾಯತರಿಗೆ ಮೋಸ ಮಾಡಿದೆ ಎಂದು ಬಿಂಬಿಸಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯದ ಮತಗಳನ್ನ ಸೆಳೆಯುವಲ್ಲಿ ಸಕ್ಸಸ್‌ ಆಗಿತ್ತು. ಇದೀಗ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸಾರಥ್ಯ ವಹಿಸಿರುವುದು ಕಾಂಗ್ರೆಸ್ ಗೆ ಸವಾಲು ಎದುರಾಗಿದೆ. ಯಾಕಂದ್ರೆ, ಯಡಿಯೂರಪ್ಪ ನಂತರ ಬಿಜೆಪಿಯಲ್ಲಿ ಲಿಂಗಾಯತ ಮತಗಳನ್ನ ಸೆಳೆಯಬಲ್ಲ ಚಾಕಚಕ್ಯತೆ ಹೊಂದಿದ್ದಾರೆ ವಿಜಯೇಂದ್ರ. ಮಠಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಿದಂತಾಗಿದೆ.

ಕಳೆದ 6 ತಿಂಗಳಿಂದ ಕೇಸರಿ ಹೈಕಮಾಂಡ್‌ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುತ್ತೆ ಅನ್ನೋ ಕುತೂಹಲ ಇತ್ತು. ಅಂತಿಮವಾಗಿ ಎಲ್ಲ ಲೆಕ್ಕಾಚಾರಗಳನ್ನು ಇಟ್ಕೊಂಡು ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಮಣೆ ಹಾಕಿದೆ. ವಿಜಯೇಂದ್ರ ಬಿಜೆಪಿಯನ್ನು ಹೇಗೆ ಕಟ್ಟಿ ಬೆಳೆಸುತ್ತಾರೆ? ಲೋಕಸಭೆಯಲ್ಲಿ ಪುಟಿದೇಳುವಂತೆ ಹೇಗೆ ಕಾರ್ಯನಿರ್ವಹಿಸುತ್ತಾರೆ ಅನ್ನೋದನ್ನು ಕಾದು ನೋಡೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಯಲ್ಲಿ ಘಟಾನುಘಟಿ ನಾಯಕರಿದ್ರೂ ವಿಜಯೇಂದ್ರಗೆ ಪಟ್ಟ ಕಟ್ಟಿದ್ದೇಕೆ? ಮೋದಿ, ಅಮಿತ್​ ಶಾ ಲೆಕ್ಕಾಚಾರ ಏನು?

https://newsfirstlive.com/wp-content/uploads/2023/11/BS_VIJAYENDRA_MODI_SHAH.jpg

Load More