ಸಾರ್ವಜನಿಕರು ಓದಲೇಬೇಕಾದ ಸ್ಟೋರಿ
ಕೋವಿಡ್ ಆಯ್ತು, ಓಮಿಕ್ರಾನ್ ಆಯ್ತು..!
ಈ ಬೆನ್ನಲ್ಲೀಗ ಬಂದಿದೆ ಡೇಂಜರಸ್ ವೈರಸ್
ನವದೆಹಲಿ: ಮೂರು ವರ್ಷಗಳ ಹಿಂದೆ ಇಡೀ ಜಗತ್ತನ್ನೇ ಕೊರೋನಾ ಎಂಬ ಮಹಾಮಾರಿ ಬೆಂಬಿಡದೇ ಕಾಡಿತ್ತು. ಈ ಕೋವಿಡ್ ಎಂಬ ಸಾಂಕ್ರಾಮಿಕ ರೋಗಕ್ಕೆ ಇಡೀ ಜಗತ್ತಿನಾದ್ಯಂತ ಲಕ್ಷಾಂತರ ಜನ ಬಲಿಯಾದರು. ಅದರಲ್ಲೂ ಚೀನಾ, ಅಮೆರಿಕಾದಲ್ಲಂತೂ ಕೊರೋನಾ ಅಟ್ಟಹಾಸಕ್ಕೆ ಅಸುನೀಗಿದವರ ಸಂಖ್ಯೆ ಎಷ್ಟು ಎಂದು ಎಣಿಸಲು ಸಾಧ್ಯವೇ ಇಲ್ಲ. ಭಾರತದಲ್ಲೂ ಇದೇ ಕಥೆ.
ಇನ್ನೇನು ಕೋವಿಡ್ ಕಥೆ ಮುಗಿಯಿತು ಎನ್ನುವಷ್ಟರಲ್ಲಿ ಇದರ ರೂಪಾಂತರಿ ಓಮಿಕ್ರಾನ್ ವೈರಾಣು ವಕ್ಕರಿಸಿತ್ತು. ಓಮಿಕ್ರಾನ್ನಿಂದಲೂ ಇಡೀ ದೇಶಾದ್ಯಂತ ಹತ್ತಾರು ಸಾವಿರ ಜನ ತಮ್ಮ ಜೀವವನ್ನೇ ಕಳೆದುಕೊಂಡರು. ಕೋವಿಡ್ ರೂಪಾಂತರಿ ಓಮಿಕ್ರಾನ್ ತೀವ್ರತೆಯೂ ಕಡಿಮೆಯಾಗಿ ಜನ ಎಂದಿನಂತೆ ಸಹಜ ಜೀವನಕ್ಕೆ ಮರಳಿದರು. ಈ ಕರಾಳ ವೈರಸ್ ಮಾನವ ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಅಧ್ಯಯನ ಆಗಿತ್ತು. ಎಲ್ಲವೂ ಮುಗಿದು ಹೋಗಿದೆ, ಮತ್ತೆ ಈ ರೋಗದ ಸುಳಿವು ಕಾಣಲೂ ಸಾಧ್ಯವಿಲ್ಲ ಎಂದು ಭಾವಿಸಿದ್ದ ಜನರಿಗೆ ಆತಂಕಕಾರಿ ಸುದ್ದಿಯೊಂದಿದೆ.
ಕೋವಿಡ್ ರೂಪಾಂತರಿ ಓಮಿಕ್ರಾನ್ ಉಪ ತಳಿ ಎಂದೇ ಕರೆಯಲಾಗುವ ಹೊಸ ವೈರಾಣುವೊಂದು ಪತ್ತೆಯಾಗಿದೆ. ಇದರ ಹೆಸರು EG.5.1, ಇದನ್ನು ಇರೀಸ್ ಎಂದು ಕೂಡ ಕರೆಯಲಾಗುತ್ತದೆ.
ಇರೀಸ್ ವೈರಾಣು ಸದ್ಯ ಬ್ರಿಟನ್ ಎಂದರೆ ಯೂನೈಟೆಡ್ ಕಿಂಗ್ಡಮ್ ಭಾಗದಲ್ಲಿ ಪತ್ತೆಯಾಗಿದೆ. ಇದು ಕೊರೋನಾಗಿಂತಲೂ ಬಹಳ ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಘೋಷಿಸಿದೆ. ಕೋವಿಡ್ಗಿಂತಲೂ ಅತೀ ವೇಗವಾಗಿ ಹರಡಬಲ್ಲ ರೋಗ ಇದಾಗಿದೆ.
ಇರೀಸ್ ಲಕ್ಷಣಗಳೇನು?
ಶೀತ, ಕೆಮ್ಮು, ನೆಗಡಿ, ಗಂಟಲು ನೋವು, ಜ್ವರ ಇದರ ಪ್ರಮುಖ ಲಕ್ಷಗಳು. ಇರೀಸ್ ಕಾಣಿಸಿಕೊಂಡ ಹಲವರು ಇದಕ್ಕಿಂತಲೂ ಅಪಾಯಕಾರಿ ಲಕ್ಷಣಗಳನ್ನು ಹೊಂದಿದ್ದಾರೆ. ಉಸಿರಾಟದ ತೊಂದರೆ, ಎದೆ ನೋವು ಕೂಡ ಕಾಣಿಸಿಕೊಂಡಿದೆ.
ತಡೆಗಟ್ಟುವುದು ಹೇಗೆ?
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸರಿಯಾಗಿ ಕೈ ತೊಳೆಯುವುದು, ಆದಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಒಂದೇ ಪರಿಹಾರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ