newsfirstkannada.com

RBI ಆಫೀಸರ್​ಗೆ ಮಹಾ ಮೋಸ.. ಲಕ್ಷ ಲಕ್ಷ ಹಣ ಪೀಕಿದ ಸೈಬರ್​ ಖದೀಮರು; ಅಸಲಿಗೆ ಆಗಿದ್ದೇನು?

Share :

Published May 26, 2024 at 6:11am

    ಹೊಸ ವಂಚನೆ ಮಾರ್ಗವನ್ನ ಕಂಡು ಹಿಡೀತಿದ್ದಾರೆ ಸೈಬರ್​ ಖದೀಮರ

    ಟೆರರಿಸ್ಟ್ ಜೊತೆ ಸಂಪರ್ಕ ಇರೋದಾಗಿ ಬೆದರಿಸಿ ಲಕ್ಷ ಲಕ್ಷ ವಂಚನೆ

    ಸಿಲಿಕಾನ್​ ಸಿಟಿ ಆರ್​ಬಿಐ ಆಫೀಸರ್​ಗೆ ವಂಚಿಸಿರುವ ಸೈಬರ್ ಕಳ್ಳರು

ಬೆಂಗಳೂರು: ನಿಮ್ಮ ನಂಬರ್​ಗೆ ಅಪರಿಚಿತ​​ ನಂಬರ್​ನಿಂದ ಕರೆ ಬಂದ್ರೆ ರಿಸೀವ್​ ಮಾಡ್ತಾ ಇದ್ದೀರಾ? ಅದರಲ್ಲೂ ಪೊಲೀಸರು ಅಂತ ಹೇಳಿಕೊಂಡರೆ ನಿಮ್ಮ ಎಲ್ಲ ಡೀಟೇಲ್ಸ್​ ಕೊಡ್ತೀರಾ? ಹಾಗಿದ್ರೆ ಈ ಸ್ಟೋರಿಯನ್ನು ತಪ್ಪದೆ ಓದಿ. ಯಾಕಂದ್ರೆ ನಾವು ಪೊಲೀಸ್​ ನೀವು ಕಳ್ಳ ಅಂತ ಆಟ ಆಡೋಕೆ ಬರೋರು. ಇವರು ಮಾಡೋದು ಯಾರು ಊಹಿಸದ ಮೋಸ.

ಇದನ್ನೂ ಓದಿ: ಪಾಂಡ್ಯಗೂ ಮುನ್ನ ಈ ಚಿತ್ತಚೋರರ ಜೊತೆ ಡೇಟಿಂಗ್! ​ ನತಾಶಾ ಪ್ರೇಮ್​ ಕಹಾನಿ ಸಿನಿಮಾವನ್ನೂ ಮೀರಿಸುತ್ತೆ..!

ಲಕ್ಷ ಲಕ್ಷ ಹಣವನ್ನ ಬ್ಯಾಂಕ್​ನಲ್ಲಿ ಇಟ್ಕೊಂಡೋರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾಕಂದ್ರೆ ಇದು ಅಂತಿಂತ ಮೋಸ ಅಲ್ಲ. ವಿದ್ಯಾವಂತರು, ದೊಡ್ಡ ದೊಡ್ಡ ಅಧಿಕಾರಿಗಳನ್ನೇ ಖೆಡ್ಡಾಕೆ ಕೆಡವಿ ವಂಚಿಸುವ ಮಹಾ ಜಾಲ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದಂತ ಅದೊಂದು ಕೇಸ್​ ಈಗ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ಸೈಬರ್​ ಖದೀಮರು: ಹಲೋ
ಆರ್​ಬಿಐ ಆಫೀಸರ್: ಹಾ ಹಲೋ ಹೇಳಿ
ಸೈಬರ್​ ಖದೀಮರು: ಮುಂಬೈ ಪೊಲೀಸ್​ ಮಾತಾಡ್ತಾಯಿರೋದು. ನೀವು ಟೆರರಿಸ್ಟ್​​ ಜೊತೆ ಲಿಂಕ್​ ಹೊಂದಿದ್ದೀರಾ?
ಆರ್​ಬಿಐ ಆಫೀಸರ್: ಅಯ್ಯೋ ಇಲ್ಲ ಸರ್.​ ಯಾರ್​ ಹೇಳಿದ್ದು
ಸೈಬರ್​ ಖದೀಮರು: ನೀವು ಕಳುಹಿಸಿದ್ದ ಪಾರ್ಸೇಲ್ ನಮಗೆ ಸಿಕ್ಕಿದೆ. ಅದರಲ್ಲಿ 5 ಪಾಸ್ ಪೋರ್ಟ್, 3 ಕ್ರೆಡಿಟ್ ಕಾರ್ಡ್, 5 ಕೆಜಿ ಬಟ್ಟೆ, ಒಂದು ಲ್ಯಾಪ್ ಟ್ಯಾಪ್, 200ಗ್ರಾಂ ಎಂಡಿಎಂಎ ಇದೆ .
ಆರ್​ಬಿಐ ಆಫೀಸರ್: ಅಯ್ಯೋ ಇಲ್ಲ ಸರ್​. ನಾನು ಯಾವುದು ಪಾರ್ಸೇಲ್​ ಮಾಡಿಲ್ಲ.
ಸೈಬರ್​ ಖದೀಮರು: ನಿಮ್ಮ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಟೆರರಿಸ್ಟ್ ಎಂ.ಡಿ ಮಲ್ಲಿಕ್ ಜೊತೆ ಸಂಪರ್ಕದಲ್ಲಿರೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಮನಿ ಲಾಂಡ್ರಿಂಗ್ ಕೇಸ್ ದಾಖಲಾಗಿದೆ.
ಆರ್​ಬಿಐ ಆಫೀಸರ್: ಇಲ್ಲ ಸರ್​ ನಾನ್​ ಹಾಗೇನು ಮಾಡಿಲ್ಲ. ಮಲ್ಲಿಕ್​ ಯಾರು ಅಂತಾನು ನಂಗೆ ಗೊತ್ತಿಲ್ಲ.
ಸೈಬರ್​ ಖದೀಮರು: ಸರಿ ಈ ಕೇಸ್​​ ಮುಂದುವರಿಸಲ್ಲ. 24 ಲಕ್ಷ ದುಡ್ಡು ನಮ್ಮ ಅಕೌಂಟ್​ಗೆ ಹಾಕಿ.
ಆರ್​ಬಿಐ ಆಫೀಸರ್: ಓಕೆ ಸರ್.​​ ಹಾಗೇ ಮಾಡ್ತೀನಿ. ನಂಗೇನು ತೊಂದರೆ ಆಗಲ್ಲ ತಾನೆ.
ಸೈಬರ್​ ಖದೀಮರು: ಇಲ್ಲ ಇಲ್ಲ ನಿಮ್ಮ ಮೇಲೆ ಕೇಸ್​ ಬೇಡ ಅಂದ್ರೆ ಯೋಚನೆ ಮಾಡಿ.

ಈ ಘಟನೆ ಬೇರೆಲ್ಲೋ ನಡೆದಿದ್ದಲ್ಲ. ಬದಲಾಗಿ ಬೆಂಗಳೂರಲ್ಲೇ ಅದು ಆರ್​ಬಿಐ ಆಫೀಸರ್​​ ಒಬ್ಬರಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಖದೀಮರು ಯಾಮಾರಿಸಿದ್ದಾರೆ. ಒಂದಲ್ಲ ಎರಡಲ್ಲ ಸುಮಾರು 24ಕ್ಕೂ ಅಧಿಕ ಲಕ್ಷ ಹಣವನ್ನ ಬೇರೆ ಬೇರೆ ಅಕೌಂಟ್​ನಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಯಾವ ಅನೌನ್​ ನಂಬರ್​ನಿಂದ ಕರೆ ಬಂದಿದ್ದೇ ಆದಲ್ಲಿ ನೀವು ಈ ಕೂಡಲೇ ತಡ ಮಾಡದೇ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RBI ಆಫೀಸರ್​ಗೆ ಮಹಾ ಮೋಸ.. ಲಕ್ಷ ಲಕ್ಷ ಹಣ ಪೀಕಿದ ಸೈಬರ್​ ಖದೀಮರು; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/crime2.jpg

Load More