/newsfirstlive-kannada/media/post_attachments/wp-content/uploads/2024/04/water1.jpg)
ಜೀವಜಲಕ್ಕೆ ಹಾಹಾಕಾರ, ರಣಬಿಸಿಲು. ಈ ಬಿಸಿಲಿನ ನಡುವೆ ನಗರದ ಜನರ ಜೀವ ಹಿಂಡುತ್ತಿರುವ ಕಾಯಿಲೆಗಳು. ಹೀಗೆ ಸಾಲು ಸಾಲು ಸಮಸ್ಯೆಗಳು ಬೆಂಗಳೂರಿಗರನ್ನ ಕಾಡಲು ಶುರು ಮಾಡಿದ ಹೊತ್ತಲ್ಲೇ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಸಮಸ್ಯೆಯ ಮೂಲದಲ್ಲಿಯೇ ಔಷಧ ಸಿಂಪಡಿಸಲು ಸಿದ್ಧತೆ ಮಾಡ್ಕೊಂಡಿದೆ.
/newsfirstlive-kannada/media/post_attachments/wp-content/uploads/2024/04/Drinking-Water.jpg)
ಕಾಲರ, ವಾಂತಿ ಭೇದಿ, ಟೈಫಾಯ್ಡ್. ಹೀಟ್ ಸ್ಟ್ರೋಕ್. ಒಂದಾ ಎರಡಾ ಪಟ್ಟಿ ಮಾಡಿದ್ರೆ ರೋಗಗಳ ಲಿಸ್ಟ್ ದೊಡ್ಡದಾಗುತ್ತಾ ಹೋಗ್ತಿದೆ. ಬಿಸಿಲ ಏಟು, ನೀರಿನ ಅಭಾವದ ನಡುವೆ ಜನರನ್ನ ಸಾಲು ಸಾಲು ರೋಗಗಳು ಕಾಡೋದಕ್ಕೆ ಶುರು ಮಾಡಿವೆ. ಇದೇ ಕಾರಣಕ್ಕೆ ಈಗ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಸಮಸ್ಯೆಯ ಮೂಲಕ್ಕೆ ಮದ್ದೆರೆಯಲು ಮುಂದಾಗಿದೆ.
ಇದನ್ನೂ ಓದಿ: ಬರೋಬ್ಬರಿ 200 ಕೋಟಿ ಆಸ್ತಿ ದಾನ ಮಾಡಿದ ಖ್ಯಾತ ಉದ್ಯಮಿ ದಂಪತಿ; ಕಾರಣವೇನು?
ಜಲಮೂಲದ ಶುದ್ಧತೆ ಪರೀಕ್ಷೆಗೆ ಆರೋಗ್ಯ ಇಲಾಖೆ ಪ್ಲಾನ್ ಮಾಡ್ಕೊಂಡಿದ್ದು, ನಗರದಲ್ಲಿನ ಕೊಳಚೆ ನೀರು, ಒಳಚರಂಡಿ ಮೂಲಕ ಹಾದು ಹೋಗುವ ಮಾರ್ಗದಲ್ಲಿ, ಕುಡಿಯುವ ನೀರಿನ ಪೈಪ್​ ಇದ್ರೆ ಅಂತಹ ಪೈಪ್ ಮೂಲಕ ಹರಿಯುವ ನೀರಿನ ಮಾದರಿ ಸಂಗ್ರಹ ಮಾಡಿ ಅವುಗಳನ್ನ ಗುಣಮಟ್ಟದ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ. ವಲಯ ಮಟ್ಟದಲ್ಲಿ ನೀರನ್ನ ಸಂಗ್ರಹಿಸಿ, ಪರೀಕ್ಷೆಗೊಳಪಡಿಸಲು ಮುಂದಾಗಿರುವ ಆರೋಗ್ಯ ಇಲಾಖೆ, ಈ ಮೂಲಕ ಸಮಸ್ಯೆಯ ಮೂಲದಲ್ಲಿಯೇ ಮದ್ದೆರೆಯಲು ಪ್ಲಾನ್‌ಮಾಡ್ಕೊಂಡಿದೆ.
/newsfirstlive-kannada/media/post_attachments/wp-content/uploads/2024/02/Water-taker.jpg)
ಬಿಬಿಎಂಪಿ ಆರೋಗ್ಯ ಇಲಾಖೆ ಕೂಡ ಈ ಸಂಬಂಧ ಹಲವು ನಿಯಮಗಳನ್ನ ಜಾರಿಗೆ ತರಲು ಮುಂದಾಗಿದ್ದು, ರಸ್ತೆ ಬದಿಯಲ್ಲಿ ಕಟ್ ಮಾಡಿ ಇಟ್ಟಿರುವ ಹಣ್ಣುಗಳ ಮಾರಾಟದ ಮೇಲೂ ಕಾನೂನಿನ ಲಾಠಿ ಬೀಸಿದೆ. ಜಂಟಿಯಾಗಿ ಅಖಾಡಕ್ಕೆ ಇಳಿದ ಮಾರಣಾಂತರ ಕಾಯಿಲೆಗಳನ್ನ ಹೊಡೆದೋಡಿಸಲು ಆರೋಗ್ಯ ಇಲಾಖೆ ಸಜ್ಜಾಗಿದ್ದು, ಈ ಪ್ರಯೋಗ ಯಾವ ರೀತಿ ಫಲಕೊಡಲಿದೆ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us