/newsfirstlive-kannada/media/post_attachments/wp-content/uploads/2024/10/ROHIT_SHARMA_TEAM.jpg)
ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 3 ಪಂದ್ಯಗಳ ಸರಣಿಯ ಮೊದಲ ಟೆಸ್ಟ್​ನಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0 ದಿಂದ ಕಿವೀಸ್ ಪಡೆ ಮುನ್ನಡೆ ಕಾಯ್ದುಕೊಂಡಿದೆ.
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ. ಸ್ವದೇಶದಲ್ಲಿ ಸತತ ಗೆಲುವುಗಳಿಂದ ಟೀಮ್ ಇಂಡಿಯಾ ಸಖತ್ ಖುಷಿಯಲ್ಲಿತ್ತು. ಆದರೆ ಇದೀಗ ರೋಹಿತ್ ಶರ್ಮಾ ಪಡೆಗೆ ಕಿವೀಸ್ ಆಟಗಾರರು ಸೋಲಿನ ಕಹಿ ಅನುಭವ ನೀಡಿದ್ದಾರೆ. ಭಾರತದ ಗೆಲುವುಗಳಿಗೆ ಬ್ರೇಕ್ ಹಾಕಿದ್ದಾರೆ. ಮಳೆಯ ನಡುವೆ ಪಂದ್ಯವನ್ನು ನಡೆಸಲಾಗಿತ್ತು. ಮೊದಲ ದಿನ ಪಂದ್ಯವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. 2ನೇ ದಿನದಲ್ಲಿ ಟಾಸ್ ಗೆದ್ದುಕೊಂಡಿದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತಪ್ಪು ಮಾಡಿದ್ದರು. ಇದರ ಫಲವೇ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 46 ರನ್​ಗಳಿಗೆ ಆಲೌಟ್ ಆಗಿತ್ತು.
ಇದನ್ನೂ ಓದಿ: 25 ಸಾವಿರ ಸರ್ಕಾರಿ ಉದ್ಯೋಗಗಳಿಗೆ ಆಹ್ವಾನ.. ಇದಕ್ಕೆ ಇವರು ಮಾತ್ರ ಅಪ್ಲೇ ಮಾಡಬೇಕು; ಯಾಕೆ ಗೊತ್ತಾ?
/newsfirstlive-kannada/media/post_attachments/wp-content/uploads/2024/10/ROHIT_SHARMA-2.jpg)
ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 402 ರನ್​ಗಳಿಗೆ ಆಲೌಟ್ ಆಗಿತ್ತು. ಇದರಲ್ಲಿ ಟೀಮ್ ಸೌತಿ 65, ಡಿವೋನ್ ಕಾನ್ವೆ 91, ರಚಿನ್ ರವೀಂದ್ರ 134 ರನ್​ಗಳನ್ನ ಗಳಿಸಿ ತಂಡಕ್ಕೆ ಕೊಡುಗೆ ನೀಡಿದ್ದರು. ಇದರಿಂದ 356ರನ್​ಗಳ ಲೀಡ್ ಪಡೆದುಕೊಂಡಿತ್ತು. ಬಳಿಕ 2ನೆ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಮ್ ಬೃಹತ್ ಮೊತ್ತ ಕಲೆ ಹಾಕಿತ್ತು. ರೋಹಿತ್ 50, ಕೊಹ್ಲಿ 70, ರಿಷಬ್ ಪಂತ್ 99 ಹಾಗೂ ಸರ್ಫರಾಜ್ ಅವರ 150 ರನ್​ಗಳ ನೆರವಿನಿಂದ ಭಾರತ ಒಟ್ಟು 462 ರನ್​ಗಳನ್ನು ಕಲೆ ಹಾಕಿತ್ತು.
ಇದರಿಂದ ಭಾರತ 107 ರನ್​ಗಳ ಟಾರ್ಗೆಟ್ ಅನ್ನು ಎದುರಾಳಿಗೆ ನೀಡಿತ್ತು. ಈ ಸುಲಭ ಟಾರ್ಗೆಟ್ ಬೆನ್ನು ಹತ್ತಿದ್ದ ನ್ಯೂಜಿಲೆಂಡ್ ಟೀಮ್ 2ನೇ ಇನ್ನಿಂಗ್ಸ್​ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 107 ರನ್​ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿ ಗೆಲುವು ದಾಖಲಿಸಿದೆ. ಮೊದಲ ಟೆಸ್ಟ್​ನ ಕೊನೆ ದಿನದಲ್ಲಿ 8 ವಿಕೆಟ್​ಗಳಿಂದ ನ್ಯೂಜಿಲೆಂಡ್ ಗೆದ್ದು ಬೀಗಿದೆ. ರಚಿನ್ ರವೀಂದ್ರ ಅವರಿಗೆ ಪ್ಲೇಯರ್ ಆಫ್ ದೀ ಮ್ಯಾಚ್ ಪ್ರಶಸ್ತಿ ನೀಡಲಾಗಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us