ಡಾರ್ಜಲಿಂಗ್ಗೆ ಹನಿಮೂನ್ ಟ್ರಿಪ್ ಹೊರಟಿದ್ದ ನವಜೋಡಿ
ಸೂಪರ್ಫಾಸ್ಟ್ ರೈಲಿನಲ್ಲಿ ಹೋಗುವಾಗ ನವವಧು ನಾಪತ್ತೆ
ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದಳು
ಪಾಟ್ನಾ: ಹೊಸದಾಗಿ ಮದುವೆಯಾದ ನವಜೋಡಿ ಹನಿಮೂನ್ಗೆ ಹೋಗೋದು ಕಾಮನ್. ಆದರೆ ಮಧುಚಂದ್ರಕ್ಕೆ ಹೊರಟ ಹುಡುಗನಿಂದ ಹುಡುಗಿ ತಪ್ಪಿಸಿಕೊಂಡು ಬಿಟ್ರೆ ಹೇಗಿರುತ್ತೆ. ಪಾಪ ಹನಿಮೂನ್ ಕನಸು ಕಂಡ ಆ ಮಧುಮಗ ಕಕ್ಕಾಬಿಕ್ಕಿ ಆಗುತ್ತಾನೆ. ಬಿಹಾರದಲ್ಲಿ ಇದೇ ರೀತಿಯ ಸಿನಿಮೀಯ ಘಟನೆಯೊಂದು ನಡೆದಿದೆ. ಆಗಷ್ಟೇ ಮದುವೆಯಾದ ನವಜೋಡಿಯೊಂದು ಹನಿಮೂನ್ ಟ್ರಿಪ್ಗೆಂದು ನವದೆಹಲಿ-ನ್ಯೂ ಜಲ್ಪೈಗುರಿ ಸೂಪರ್ಫಾಸ್ಟ್ ರೈಲು ಹತ್ತಿದೆ. ಸೂಪರ್ ಫಾಸ್ಟ್ ರೈಲಿನ ಎಂಜಿನ್ ಸ್ಟಾರ್ಟ್ ಆಗುತ್ತಿದ್ದಂತೆ ಹುಡುಗಿ ನಾಪತ್ತೆಯಾಗಿದ್ದು, ಮಧುಮಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಕಳೆದ ಜುಲೈ 28ರಂದು ಬಿಹಾರದ ಕಿಶನ್ಗಂಜ್ ಜಿಲ್ಲೆಯಲ್ಲಿ ನವವಧು ನಾಪತ್ತೆಯಾಗಿರೋ ಪ್ರಕರಣ ಬೆಳಕಿಗೆ ಬಂದಿದೆ. ಕಾಜಲ್ ಕುಮಾರಿ ನಾಪತ್ತೆಯಾದ ಯುವತಿ ಎನ್ನಲಾಗಿದೆ. ಕೆಲವೇ ದಿನಗಳಿಂದ ಮದುವೆಯಾಗಿದ್ದ ಕಾಜಲ್ ಕುಮಾರಿ ದಂಪತಿ ಡಾರ್ಜಲಿಂಗ್ಗೆ ಹನಿಮೂನ್ ಟ್ರಿಪ್ ಹೊರಟಿದ್ದಾರೆ. ಮುಜಾಫರ್ಪುರ್ ರೈಲ್ವೆ ನಿಲ್ದಾಣದಲ್ಲಿ ನವದೆಹಲಿ- ನ್ಯೂ ಜಲ್ಪೈಗುರಿ ಸೂಪರ್ಫಾಸ್ಟ್ ರೈಲನ್ನು ಹತ್ತಿದ್ದಾರೆ. ಇವರಿಗೆ ಕೋಚ್ ನಂಬರ್ B4ನ ನಂಬರ್ 43 ಮತ್ತು 44 ಸೀಟ್ ಕೂಡ ಮುಂಗಡ ಬುಕ್ಕಿಂಗ್ ಮಾಡಲಾಗಿತ್ತು. ಈ ರೈಲಿನಲ್ಲೇ ನವವಧು ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಲಾಗಿದೆ.
ಸೂಪರ್ ಫಾಸ್ಟ್ ರೈಲು ಕಿಶನ್ಗಂಜ್ ರೈಲು ನಿಲ್ದಾಣಕ್ಕೆ ಬಂದ ನನ್ನ ಹೆಂಡತಿ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದಳು. ಆದ್ರೆ, ಮರಳಿ ವಾಪಸ್ ಬರಲೇ ಇಲ್ಲ. ರೈಲು ಹೊರಡಲು ಶುರುವಾದಾಗ ನಾನು ಎಲ್ಲಾ ಬೋಗಿಗಳನ್ನು ಹುಡುಕಿದೆ. ಎಲ್ಲೂ ನನ್ನ ಹೆಂಡತಿ ಸಿಕ್ಕಿಲ್ಲ. ಕೊನೆಗೆ ನಾನು ವಾಪಸ್ ಮುಜಾಫರ್ಪುರ್ಗೆ ಬಂದು ನಾಪತ್ತೆ ದೂರು ಕೊಟ್ಟಿದ್ದೇನೆ ಎಂದು ಮಧುಮಗ ಹೇಳಿದ್ದಾನೆ. ನನ್ನ ಹೆಂಡತಿಯನ್ನು ಡ್ರಗ್ಸ್ ವ್ಯಸನಿ ಗ್ಯಾಂಗ್ ಅಪಹರಿಸಿರೋ ಸಾಧ್ಯತೆ ಇದೆ. ನನ್ನ ಹೆಂಡತಿಗೆ ಯಾವುದೇ ಅಕ್ರಮ ಸಂಬಂಧಗಳು ಇರಲಿಲ್ಲ ಎಂದು ಹೇಳಿದ್ದಾನೆ. ಈ ಪ್ರಕರಣ ದಾಖಲಿಸಿರೋ ಬಿಹಾರ ಪೊಲೀಸರು ರೈಲ್ವೆ ನಿಲ್ದಾಣದ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಕಾಜಲ್ ಕುಮಾರಿ ದಂಪತಿ ಕಳೆದ 6 ತಿಂಗಳ ಹಿಂದೆಯೇ ಮದುವೆಯಾಗಿದ್ದರು. ಕೌಟುಂಬಿಕ ಕಾರಣಗಳ ಹಿನ್ನೆಲೆ 6 ತಿಂಗಳಿಂದ ಹನಿಮೂನ್ಗೆ ಹೋಗಲು ಆಗಿರಲಿಲ್ಲ. ಇದೀಗ ಹನಿಮೂನ್ಗೆ ಹೊರಟಿದ್ದು ನವವಧುಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ