newsfirstkannada.com

ಈಜಿಪ್ಟ್ ಪ್ರಧಾನಿ ತಬ್ಬಿ ಬಾಂಧ್ಯವದ ಬಾಗಿಲು ತೆರೆದ ಮೋದಿ.. ಮಕ್ಕಳ ಜೊತೆ ಮಗುವಾಗಿ ದೇಶದ ಧ್ವಜ ಹಾರಿಸಿದ ನಮ್ಮ ಪ್ರಧಾನಿ

Share :

Published June 25, 2023 at 7:16am

Update June 25, 2023 at 7:20am

    ರೌಂಡ್ ಟೇಬಲ್ ಮೀಟಿಂಗ್​ನಲ್ಲಿ ಭಾಗಿಯಾದ ಪ್ರಧಾನಿ ಮೋದಿ

    ಕೈರೋ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ

    26 ವರ್ಷಗಳ ನಂತರ ಭಾರತದ ಪ್ರಧಾನಿ ಈಜಿಪ್ಟ್​​ಗೆ ಭೇಟಿ

ಅಮೆರಿಕ ಪ್ರವಾಸ ಯಶಸ್ವಿಯಾಗಿ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಈಜಿಫ್ಟ್​ಗೆ ಬಂದಿಳಿದಿದ್ದಾರೆ. ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಸಂಚಾರ ಶುರು ಮಾಡಿದ್ದಾರೆ. ಮೊದಲ ದಿನವೇ ರೌಂಡ್ ಟೇಬಲ್ ಮೀಟಿಂಗ್ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದ್ರು. ಮೋದಿ ಈಜಿಫ್ಟ್ ಟೂರ್​ ಹೇಗಿದೆ?.

ಅಮೆರಿಕದಿಂದ ಡೈರೆಕ್ಟ್ ಈಜಿಫ್ಟ್​ಗೆ ಪ್ರಧಾನಿ ಮೋದಿ ಲ್ಯಾಂಡ್​ ಆಗಿದ್ದಾರೆ. ಬರೋಬ್ಬರಿ 26 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈಜಿಫ್ಟ್​ಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿಗೆ ಇದು ಮೊದಲ ಭೇಟಿ. ಕೈರೋ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಗೆ ವಿಶೇಷ ಸ್ವಾಗತ ಕೋರಲಾಯ್ತು. ಈಜಿಪ್ಟ್​ ಫ್ಟ್ ಪ್ರಧಾನಿ ಹ್ಯಾಂಡ್ ಶೇಕ್ ಕೊಡಲು ಮುಂದಾದಾಗ ಪ್ರಧಾನಿ ತಬ್ಬಿಕೊಳ್ಳೋ ಮೂಲಕ ಬಾಂಧ್ಯವದ ಬಾಗಿಲನ್ನ ತೆರೆದರು.

ಪುಟ್ಟ ಮಕ್ಕಳ ಜೊತೆಗೆ ಮಗುವಾದ ಮೋದಿ..!

ಕೈರೋ ವಿಮಾನ ನಿಲ್ದಾಣದಲ್ಲಿ ಮೋದಿಗೆ ಗಾರ್ಡ್ ಹಾಫ್ ಹಾನರ್ ಮೂಲಕ ಸ್ವಾಗತ ಕೋರಲಾಯ್ತು. ಮೋದಿಗೆ ಈಜಿಫ್ಟ್​ನಲ್ಲಿರೋ ಭಾರತೀಯ ಮೂಲದ ಜನರು ಅದ್ಧೂರಿ ಸ್ವಾಗತ ಕೋರಿದ್ರು. ಈ ವೇಳೆ ಮೋದಿ ಮೋದಿ ಘೋಷಣೆ ಹಾಗೂ ವಂದೇ ಮಾತರಂ ಝೇಂಕರಿಸಿತ್ತು. ಈ ವೇಳೆ ಪುಟ್ಟ ಮಕ್ಕಳ ಜೊತೆ ಮಗುವಾದ ಮೋದಿ.. ಮಕ್ಕಳ ಕೈ ಹಿಡಿದು ತ್ರಿವರ್ಣ ಧ್ವಜ ಹಾರಿಸಿದ್ರು.  ಈಜಿಫ್ಟಿಯನ್ ಯುವತಿಯೊಬ್ಬಳು ಯೇ ದೋಸ್ತಿ ಹಮ್ ನಹೀ ಚೋಡೆಂಗೆ ಸಾಂಗ್ ಹಾಡಿದ್ರು. ಇದನ್ನ ಮಂತ್ರಮುಗ್ಧವಾಗಿ ಮೋದಿ ಆಲಿಸುತ್ತಾ, ಎಂಜಾಯ್ ಮಾಡಿದ್ರು.

ಬಳಿಕ ಅನಿವಾಸಿ ಭಾರತೀಯರೊಂದಿಗೆ ಕೆಲ ಕಾಲ ಕಳೆದ ಪ್ರಧಾನಿ ಮೋದಿ, ಒಂದಷ್ಟು ಮಾತುಕತೆ ನಡೆಸಿದ್ರು. ಇದೆಲ್ಲದರ ಬಳಿಕ ಈಜಿಪ್ಟ್ ಪ್ರಧಾನಿ ಮೊಸ್ತಫಾ ಮೊಡ್​ಬೌಲಿಯೊಂದಿಗೆ ರೌಂಡ್ ಟೇಬಲ್​ ಮೀಟಿಂಗ್​ನಲ್ಲಿ ಮೋದಿ ಭಾಗಿಯಾದ್ರು. ಕೈರೋದಲ್ಲಿ ನಡೆದ ಈ ಸಭೆಯಲ್ಲಿ ಉಭಯ ದೇಶಗಳ ಸಂಬಂಧ ವೃದ್ಧಿ ಹಾಗೂ ಸಹಕಾರ ಸಂಬಂಧ ಮಹತ್ವದ ಚರ್ಚೆ ನಡೆಯುತು. ಇದಾದ ನಂತರ ಈಜಿಫ್ಟ್ ಗ್ರಾಂಡ್ ಮಫ್ತಿ ಡಾ. ಇಬ್ರಾಹಿಂ ಅಬ್ದುಲ್ ಕರೀಮ್ ಅಲ್ಲಮ್​ರನ್ನ ಭೇಟಿಯಾದ್ರು. ಈ ವೇಳೆ ವಿಶೇಷ ಉಡುಗೊರೆಯನ್ನ ಪ್ರಧಾನಿ ಮೋದಿಗೆ ನೀಡಲಾಯ್ತು.

ಅಲ್-ಹಕೀಮ್ ಮಸೀದಿಗೆ ಇಂದು ಮೊದಿ ಭೇಟಿ..!

ಅಮೆರಿಕಾದಂತೆ ಯೋಗ ಮಂತ್ರವನ್ನ ಈಜಿಫ್ಟ್​ನಲ್ಲಿ ಮೋದಿ ಪಠಿಸಿದ್ದು, ಯೋಗ ಟೀಚರ್ಸ್​ಗಳನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇಂದು ಪ್ರಧಾನಿ ಮೋದಿ ಅಲ್ ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. ಸುಮಾರು 1,000 ವರ್ಷಗಳಷ್ಟು ಹಳೆಯದಾದ ಅಲ್-ಹಕೀಮ್ ಮಸೀದಿಯನ್ನು ದಾವೂದಿ ಬೊಹ್ರಾ ಸಮುದಾಯ ಇತ್ತೀಚೆಗೆ ಮರುನಿರ್ಮಿಸಿದೆ. ಇನ್ನು, ಇವತ್ತು ಭಾರತೀಯ ಮೂಲದ ಬೊಹ್ರಾ ಸಮುದಾಯದವರನ್ನ ಮೋದಿ ಭೇಟಿಯಾದ್ರು.

ಪ್ರಧಾನಿ ಮೋದಿಯವರ ಈಜಿಫ್ಟ್​ ಟೂರ್ ಸಾಕಷ್ಟು ಮಹತ್ವವನ್ನ ಪಡೆದುಕೊಂಡಿದೆ. ಅದ್ಭುತವಾಗಿಯು ನಡೆಯುತ್ತಿದೆ. ಈ ನಡುವೆ ಇಂದಿನ ಮೋದಿ ಮಸೀದಿ ಭೇಟಿ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈಜಿಪ್ಟ್ ಪ್ರಧಾನಿ ತಬ್ಬಿ ಬಾಂಧ್ಯವದ ಬಾಗಿಲು ತೆರೆದ ಮೋದಿ.. ಮಕ್ಕಳ ಜೊತೆ ಮಗುವಾಗಿ ದೇಶದ ಧ್ವಜ ಹಾರಿಸಿದ ನಮ್ಮ ಪ್ರಧಾನಿ

https://newsfirstlive.com/wp-content/uploads/2023/06/PM_MODI-5.jpg

Load More