newsfirstkannada.com

×

See Pics: ತಿರುಪತಿ ದೇಗುಲಕ್ಕೆ ಬಂಗಾರದ ಪೂಜಾ ಸಾಮಗ್ರಿ ದಾನ ಮಾಡಿದ ಸುಧಾ ಮೂರ್ತಿ ದಂಪತಿ.. ಚಿನ್ನದ ಆಮೆ, ಶಂಖ ಗಿಫ್ಟ್​..!

Share :

Published July 18, 2023 at 2:13pm

Update July 18, 2023 at 2:20pm

    ಒಟ್ಟು ಎಷ್ಟು ಕೆ.ಜಿ ‘ಬಂಗಾರದ ವಸ್ತು’ ದಾನ ಮಾಡಿದ್ದಾರೆ ಗೊತ್ತಾ?

    ಕೂಡುಗೈ ದಾನಿ ಸುಧಾ ಮೂರ್ತಿ ಸೇವೆ ಕೊಂಡಾಡಿದ ಜನ

    ಈ ಹಿಂದೆ ಟಿಟಿಡಿ ಟ್ರಸ್ಟ್​ನ ಸದಸ್ಯೆ ಆಗಿದ್ದ ಸುಧಾ ಮೂರ್ತಿ

ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ, ಮಾಜಿ ಟಿಟಿಡಿ ಟ್ರಸ್ಟ್​​​ನ ಸದಸ್ಯೆ ಸುಧಾ ಮೂರ್ತಿ ಅವರು ತಿರುಪತಿ ದೇಗುಲಕ್ಕೆ ಬಂಗಾರದ ವಿಶೇಷ ಪೂಜಾ ವಸ್ತುಗಳನ್ನು ದಾನ ಮಾಡಿದ್ದಾರೆ. ಜುಲೈ 16 ರಂದು ಬಂಗಾರದ ಅಭಿಷೇಕ ಶಂಖ, ಬಂಗಾರದ ಆಮೆಯ ಪ್ರತಿಮೆಯನ್ನು ದಾನವಾಗಿ ನೀಡಿದ್ದಾರೆ.

ದಂಪತಿ ಖುದ್ದು ಟಿಡಿಪಿ ಆಡಳಿತ ಮಂಡಳಿಯ EO, ಎವಿ ಧರ್ಮ ರೆಡ್ಡಿಗೆ ರಂಗನಾಯಕುಳ ಮಂಟಪದಲ್ಲಿ ಹಸ್ತಾಂತರ ಮಾಡಿದ್ದಾರೆ. ದಾನ ಮಾಡಿರುವ ಬಂಗಾರದ ವಸ್ತುಗಳ ಒಟ್ಟು ಕೆಜಿ ಎರಡು ಕಿಲೋ ಗ್ರಾಮ್ ಇದೆ ಎಂದು ಹೇಳಲಾಗಿದೆ.

ಸುಧಾ ಮೂರ್ತಿ ದಂಪತಿ ಬಂಗಾರದ ವಿಶೇಷ ಪೂಜಾ ಸಾಮಗ್ರಿಗಳನ್ನು ನೀಡಿರುವ ಬಗ್ಗೆ ಆಂಧ್ರ ಪ್ರದೇಶ ಸರ್ಕಾರ ಸಲಹೆಗಾರ ಎಸ್​. ರಾಜೀವ್ ಅವರು, ಟ್ವಿಟರ್​ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇನ್ಫೋಸಿಸ್​ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ (ಮಾಜಿ ಟಿಟಿಡಿ ಸದಸ್ಯೆ) ಸುಧಾ ಮೂರ್ತಿ, ತಿರುಮಲದಲ್ಲಿರುವ ಶ್ರೀ ವರು ಟೆಂಪಲ್​​ಗೆ ಗೋಲ್ಡನ್ ‘ಅಭಿಷೇಕ ಶಂಖ’ ದಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇವರ ಟ್ವೀಟ್​ಗೆ ಟ್ವಿಟ್ಟಿಗರು ತಮ್ಮದೇ ಶೈಲಿಯಲ್ಲಿ ನಾರಾಯಣಮೂರ್ತಿ ದಂಪತಿಯನ್ನು ಕೊಂಡಾಡುತ್ತಿದ್ದಾರೆ. ಗ್ರೇಟ್ ಕಪಲ್, ನಿಮ್ಮ ಮೇಲೆ ಅಪಾರವಾದ ಗೌರವ ಇದೆ. ತಮ್ಮ ಟ್ರಸ್ಟ್​ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದೀರಿ. ನಿಮ್ಮ ಸಮಾಜ ಸೇವೆಯನ್ನು ಯಾರೂ ಮರೆಯುವಂತಿಲ್ಲ. ತಿಮ್ಮಪ್ಪನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿದೆ ಎಂದು ಕೊಂಡಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

See Pics: ತಿರುಪತಿ ದೇಗುಲಕ್ಕೆ ಬಂಗಾರದ ಪೂಜಾ ಸಾಮಗ್ರಿ ದಾನ ಮಾಡಿದ ಸುಧಾ ಮೂರ್ತಿ ದಂಪತಿ.. ಚಿನ್ನದ ಆಮೆ, ಶಂಖ ಗಿಫ್ಟ್​..!

https://newsfirstlive.com/wp-content/uploads/2023/07/SUDHAMURTHY.jpg

Load More