ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!
ಟೊಮ್ಯಾಟೊ ಕಳ್ಳತನ ಆಗದಂತೆ ತಡೆಯಲು ಹೈಟೆಕ್ ಐಡಿಯಾ
ಟೊಮ್ಯಾಟೊ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ
ಹಾವೇರಿ: ದೇಶಾದ್ಯಂತ ಟೊಮ್ಯಾಟೋ ಬೆಲೆ ದಿಢೀರ್ ಏರಿಕೆಯಾಗಿದೆ. 1 ಕೆಜಿ ಟೊಮ್ಯಾಟೋ ಬೆಲೆ 100ರ ಗಡಿ ದಾಟಿದೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ಹೀಗಾಗಿ ಮಳೆ ಕೊರತೆಯಿಂದ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಇನ್ನು ತರಕಾರಿ ಬೆಲೆ ಇನ್ನಷ್ಟು ದುಬಾರಿ ಆಗುವ ನಿರೀಕ್ಷೆ ದಟ್ಟವಾಗಿದ್ದು ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಇನ್ನು, ಈ ನಡುವೆ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋ ಕಳ್ಳತನ ಮಾಡಿರುವ ಘಟನೆ ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಧರಣಿ ಎಂಬವರು ತಮ್ಮ ಜಮೀನಿನಲ್ಲಿ ಟೊಮ್ಯಾಟೋ ಬೆಳೆದಿದ್ದರು. ಕಳೆದ ರಾತ್ರಿ ಹೊಲಕ್ಕೆ ನುಗ್ಗಿರುವ ಕಳ್ಳರು ಟೊಮ್ಯಾಟೋ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ದಿಢೀರ್ ಟೊಮ್ಯಾಟೋ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದರೆ, ಇತ್ತ ಟೊಮ್ಯಾಟೋ ವ್ಯಾಪಾರಸ್ಥರು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಫುಲ್ ಅಲರ್ಟ್ ಕೂಡ ಆಗಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಡಿಮ್ಯಾಂಡು ಜಾಸ್ತಿಯಾಗಿದೆ. ಅದಕ್ಕೆ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದಲ್ಲಿ ಟೊಮ್ಯಾಟೊ ಕಳ್ಳತನ ಆಗದಂತೆ ವ್ಯಾಪಾರಸ್ಥ ಕೃಷ್ಣಪ್ಪ ಎಂಬುವವರು ತಮ್ಮ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಿದ್ದಾರೆ.
ಇದನ್ನು ಓದಿ: ಮತ್ತಷ್ಟು ಹೆಚ್ಚಿದ ತರಕಾರಿ ಬೆಲೆ; ಪ್ರತಿ ಕೆ.ಜಿ ಟೊಮ್ಯಾಟೋಗೆ 150 ರೂಪಾಯಿ..!
ಪ್ರತಿ 1 ಕೆ.ಜಿ ಟೊಮ್ಯಾಟೊಗೆ 150 ರೂಪಾಯಿ ಬೆಲೆ ಏರಿದ ಹಿನ್ನೆಲೆಯಲ್ಲಿ ಖರೀದಿ ನೆಪದಲ್ಲಿ ಬಂದ ಜನರು ಟೊಮ್ಯಾಟೋ ಕಳ್ಳತನ ಮಾಡುವ ಸಾಧ್ಯತೆ ಇದೆ. 1ರಿಂದ 2 ಕೆಜಿ ಟೊಮ್ಯಾಟೋ ಕದ್ದರೂ ಅದು ನಮಗೆ ತುಂಬಾ ನಷ್ಟ ಆಗುವುದು. ಹೀಗಾಗಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಕೆ ಮಾಡಿದ್ದೇನೆ ಎಂದು ವ್ಯಾಪಾರಸ್ಥ ಹೇಳಿದ್ದಾರೆ.
ಅಯ್ಯೋ.. ಎಂಥ ಕಾಲ ಬಂತು ನೋಡ್ರಪ್ಪಾ…
ತರಕಾರಿ ಬೆಲೆ ಗಗನಕ್ಕೆ ಏರಿದ ಹಿನ್ನೆಲೆ ವ್ಯಾಪಾರಸ್ಥ ಫುಲ್ ಅಲರ್ಟ್ ಆಗಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಡಿಮ್ಯಾಂಡು ಶುರುವಾಗಿದೆ. ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದಲ್ಲಿ ಟೊಮ್ಯಾಟೊ ಕಳ್ಳತನ ಆಗದಂತೆ ವ್ಯಾಪಾರಸ್ಥ ಸಿಸಿಟಿವಿ ಅಳವಡಿಕೆ ಮಾಡಿದ್ದಾರೆ.#newsfirstkannada… pic.twitter.com/m62saO6sID
— NewsFirst Kannada (@NewsFirstKan) July 5, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ