newsfirstkannada.com

×

ಒಂಟಿ ಒಂಟಿಯಾಗಿರುವುದು ಬೋರು ಬೋರು.. ಹೀಗೆಂದು ಅಗ್ನಿಶಾಮಕ ದಳದ ಸಹಾಯವಾಣಿಗೆ 2,761 ಬಾರಿ ಕರೆ ಮಾಡಿದ ಮಹಿಳೆ!

Share :

Published July 20, 2023 at 12:31pm

Update July 20, 2023 at 12:33pm

    ಸಿಂಗಲ್​ ಆಗಿ ಇದ್ದ ಮಹಿಳೆ ಏನು ಮಾಡಿದ್ಳು ಗೊತ್ತಾ?

    ಒಂಟಿತನ ನಿವಾರಣೆಗೆಂದು ತುರ್ತು ನಂಬರ್​ಗೆ ಕರೆ ಮಾಡೋದಾ

    ಈಕೆಯ ಸ್ಟೋರಿ ಕೇಳಿದ್ರೆ ಸಿಂಗಲ್ಲಾಗಿದ್ದವರು ಕೂಡ ನಗ್ತಾರೆ

ಒಂಟಿತನ ಕಾಡಿದರೆ ಏನು ಮಾಡುತ್ತೀರಾ ಹೇಳಿ?. ವಯಸ್ಸಾದ ಕೆಲವರು ಸರಿಯಾದ ಸಂಗಾತಿಯ ಹುಡುಕಿ ಮದುವೆಯಾಗುವ ಮೂಲಕ ಒಂಟಿತನಕ್ಕೆ ಫುಲ್​ ಸ್ಟಾಪ್​ ಇಟ್ಟರೆ, ವಯಸ್ಸಿಗೆ ಬಾರದವರು ಸ್ನೇಹಿತರಿಗೆ ಕರೆ ಮಾಡುವ ಮೂಲಕ ಅಥವಾ ಪಾರ್ಕ್​, ಸಿನಿಮಾ ಹೀಗೆ ಸುತ್ತಾಡುತ್ತಾ ಒಂಟಿತನ ನಿವಾರಿಸಲು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಬ್ಬಳು ಮಹಿಳೆ ಏನು ಮಾಡಿದ್ದಾಳೆ ಗೊತ್ತಾ? ಅಗ್ನಿಶಾಮಕ ದಳದ ಸಹಾಯವಾಣಿಗೆ ಕರೆ​ ಮಾಡಿದ್ದಾಳೆ. ಆದರೆ ಇಷ್ಟಕ್ಕೆ ಈಕೆ ಸುದ್ದಿಯಾಗಿದ್ದರೆ ಅಚ್ಚರಿಯಾಗುತ್ತಿರಲಿಲ್ಲ, ಕಾರಣ ಬರೋಬ್ಬರಿ 2,761 ಬಾರಿ ಕರೆ ಮಾಡಿದ್ದಾಳೆ.

ಹೌದು. ಜಪಾನಿನಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಪ್ರಿಫೆಕ್ಟರ್​​ನಲ್ಲಿರುವ ಮಾಟ್ಸುಡೋದ ನಿವಾಸಿ 51 ವರ್ಷದ ಹಿರೋಕೊ ಹಟಗಾಮಿ ಎಂಬ ಮಹಿಳೆ ಒಂಟಿತನ ನಿವಾರಣೆಗೆ ಅಗ್ನಿ ಶಾಮಕ ದಳದ ತುರ್ತು ನಂಬರ್​ಗೆ ಕರೆ ಮಾಡಿದ್ದಾಳೆ. ಇದೇ ಕಾರಣಕ್ಕೆ ಆಕೆಯನ್ನು ಬಂಧನ ಮಾಡಲಾಗಿದೆ.

ಹಿರೋಕೊ ಹಟಗಾಮಿ ಏಕಾಂಗಿತನವನ್ನು ಅನುಭವಿಸುತ್ತಿದ್ದಳು. ಆಕೆಗೆ ತಾನು ಮಾತನಾಡಬೇಕು, ನಾನು ಮಾತನಾಡಿದ್ದನ್ನು ಯಾರಾದರು ಕೇಳಬೇಕು ಎಂಬ ಹಂಬಲವಿತ್ತು. ಆದರೆ ಆ ಹಂಬಲವನ್ನು ನಿವಾರಿಸಲು ಯಾರು ಇರಲಿಲ್ಲ. ಈ ಕಾರಣಕ್ಕೆ ಎರಡು ಮುಕ್ಕಾಲು ವರ್ಷದಲ್ಲಿ ಅಗ್ನಿಶಾಮಕ ದಳದ ಸಹಾಯವಾಣಿಗೆ ಕರೆ ಮಾಡಿದ್ದಾಳೆ.

ಹಿರೋಕೊ ಹಟಗಾಮಿ 2020ರ ಆಗಸ್ಟ್​ 15ರಿಂದ ಪ್ರಾರಂಭಿಸಿ 2023ರ ಮೇ ವರೆಗೆ ಅಗ್ನಿಶಾಮಕ ದಳದ ಸಹಾಯವಾಣಿಗೆ ಕರೆ ಮಾಡಿದ್ದಾಳೆ. ಕೊನೆಗೆ ಸಿಕ್ಕಿಬಿದ್ದಿದ್ದಾಳೆ. ಹಾಗಾಗಿ ಆಕೆಯನ್ನು ಜಪಾನ್​ ಪೊಲೀಸರು ಬಂಧಿಸಿದ್ದಾರೆ.

ಪ್ರಾರಂಭದಲ್ಲಿ ಹಿರೋಕೊ ಹಟಗಾಮಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿರಲಿಲ್ಲ. ಬಳಿಕ ಪೊಲೀಸರು ತಮಗಾಗುವ ಶಿಕ್ಷೆಯ ಬಗ್ಗೆ ವಿವರಿಸಿದ ಬಳಿಕ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಬಂಧನದ ಬಳಿಕ ತನ್ನ ಒಂಟಿತನದ ಬಗ್ಗೆ ಹೇಳಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂಟಿ ಒಂಟಿಯಾಗಿರುವುದು ಬೋರು ಬೋರು.. ಹೀಗೆಂದು ಅಗ್ನಿಶಾಮಕ ದಳದ ಸಹಾಯವಾಣಿಗೆ 2,761 ಬಾರಿ ಕರೆ ಮಾಡಿದ ಮಹಿಳೆ!

https://newsfirstlive.com/wp-content/uploads/2023/07/Single.jpg

Load More