Advertisment

ಸ್ವಾತಂತ್ರ್ಯ ಬಂದು 76 ವರ್ಷಗಳದ್ರೂ ಬಸ್​ ಕಂಡಿರದ ಗ್ರಾಮಕ್ಕೆ ಬಂತು KSRTC​.. ನ್ಯೂಸ್​ಫಸ್ಟ್ ವರದಿಗೆ ಭಾರೀ ಮೆಚ್ಚುಗೆ

author-image
Bheemappa
Updated On
ಸ್ವಾತಂತ್ರ್ಯ ಬಂದು 76 ವರ್ಷಗಳದ್ರೂ ಬಸ್​ ಕಂಡಿರದ ಗ್ರಾಮಕ್ಕೆ ಬಂತು KSRTC​.. ನ್ಯೂಸ್​ಫಸ್ಟ್ ವರದಿಗೆ ಭಾರೀ ಮೆಚ್ಚುಗೆ
Advertisment
  • ಮಳೆ, ಬಿಸಿಲು ಎನ್ನದೆ ನಿತ್ಯ ನಡೆದು ಹೋಗುತ್ತಿದ್ದ ಶಾಲಾ ಮಕ್ಕಳು
  • ದಿನಲೂ 10 ಕೀಲೋ ಮೀಟರ್ ನಡೆಯುತ್ತಿದ್ದ ಶಾಲಾ ಮಕ್ಕಳು
  • ಬಸ್​ ಗ್ರಾಮಕ್ಕೆ ಬಂದಿದ್ದಕ್ಕೆ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ

ದಿನಕ್ಕೆ 10 ಕಿ.ಮೀ ನಡೆದು ಸುಸ್ತಾಗಿದ್ದ ಮಕ್ಕಳು ಈಗ 10 ನಿಮಿಷದಲ್ಲಿ ಶಾಲೆ ಸೇರುತ್ತಾರೆ. ಇದು ಸಾಧ್ಯ ಆಗಿದ್ದು ನ್ಯೂಸ್ ಫಸ್ಟ್ ವರದಿಯಿಂದ. ಸ್ವತಂತ್ರ ಬಂದು 76 ವರ್ಷಗಳಾದ್ರೂ ಬಸ್ ಸೌಲಭ್ಯ ಕಂಡಿರದ ಗ್ರಾಮಕ್ಕೆ ಸದ್ಯ ಬಸ್ ಸೌಲಭ್ಯ ದೊರಕಿದ್ದು, ಇಡೀ ಊರಿಗೆ ಊರೇ ನ್ಯೂಸ್ ಫಸ್ಟ್​ಗೆ ಧನ್ಯವಾದ ತಿಳಿಸಿದೆ.

Advertisment

ಒಂದಲ್ಲ ಎರಡಲ್ಲ 10 ಕಿ.ಮೀ ನಡೆದುಕೊಂಡು ಶಾಲೆಗೆ ಹೋಗಬೇಕಾದ ದುಸ್ಥಿತಿ ಈ ಮಕ್ಕಳದ್ದಾಗಿತ್ತು. ಆದ್ರೆ ಅದೇ ಮಕ್ಕಳ ಮೊಗದಲ್ಲಿ ಸದ್ಯ ಕಾಣುತ್ತಿರುವ ಆ ಖುಷಿಗೆ ಬೆಲೆನೇ ಕಟ್ಟಲಾಗಲ್ಲ. ಮಕ್ಕಳ ಮಂದಹಾಸಕ್ಕೆ ಕಾರಣವಾಗಿದ್ದು ನ್ಯೂಸ್​ಫಸ್ಟ್​ ಮಾಡಿದ್ದ ವರದಿ.

ಇದನ್ನೂ ಓದಿ: ನೀಟ್ ಪರೀಕ್ಷೆ ಪಾಸ್ ಮಾಡಿ MBBSಗೆ ಆಯ್ಕೆಯಾದ ಬುಡಕಟ್ಟು ವಿದ್ಯಾರ್ಥಿ; ದೇಶದ ಇತಿಹಾಸದಲ್ಲೇ ಮೊದಲು!

publive-image

60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಳಲು

ಅಂದಾಗೆ ನಾವು ರಾಯಚೂರು ತಾಲೂಕಿನ ರಘುನಾಥನಹಳ್ಳಿಗೆ ವರದಿ ಮಾಡಲು ತೆರಳಿದಾಗಲೆ ಗೊತ್ತಾಗಿದ್ದು ಇಲ್ಲಿಯ ಮಕ್ಕಳು ಅಕ್ಷರ ಕಲಿಯಲು ಅದ್ಯಾವ ರೀತಿ ಹರಸಾಹಸ ಪಡ್ತಿದ್ದಾರೆ ಅಂತ. ರಘುನಾಥನಹಳ್ಳಿಯಿಂದ ಗಬ್ಬೂರು ಗ್ರಾಮಕ್ಕೆ 10 ಕಿ.ಮೀ ದೂರ ಆಗುತ್ತೆ. ಒಂದ್ವೇಳೆ ಶಾಲೆಗೆ ತಡವಾಗಿ ಹೋದರೆ ಶಿಕ್ಷಕರು ಬೈತಾರೆ. ಮನೆಗೆ ತಡವಾಗಿ ಬಂದ್ರೆ ಅಪ್ಪ ಅಮ್ಮ ಬೈತಾರೆ ಅಂತ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಅಳಲನ್ನು ವ್ಯಕ್ತಪಡಿಸಿದರು.

Advertisment

ಮಕ್ಕಳ ಈ ಸಮಸ್ಯೆ ಬಗ್ಗೆ 10 ದಿನಗಳ ಹಿಂದೆ ನ್ಯೂಸ್ ಫಸ್ಟ್ ವಿಸ್ತ್ರತವಾಗಿ ವರದಿ ಬಿತ್ತರಿಸಿತ್ತು. ಮಕ್ಕಳಿಗೆ, ಗ್ರಾಮಸ್ಥರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ರಘುನಾಥನಹಳ್ಳಿ ಶಾಲಾ‌ ಮಕ್ಕಳಿಗೆ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಇದರಿಂದ ದಿನಕ್ಕೆ 10 ಕಿ.ಮೀ ನಡೆಯುತ್ತಿದ್ದ ಮಕ್ಕಳು ಈಗ 10 ನಿಮಿಷದಲ್ಲಿ ಶಾಲೆಗೆ ಖುಷ್ ​ಖುಷಿಯಿಂದ ಶಾಲೆಗೆ ತೆರಳುತ್ತಿದ್ದಾರೆ. ಇದೇ ಖುಷಿಯಲ್ಲಿ ಗ್ರಾಮಸ್ಥರು ನ್ಯೂಸ್ ಫಸ್ಟ್ ಹಾಗೂ ನಮ್ಮ ವರದಿಗಾರ ಶ್ರೀಕಾಂತ್​ ಸಾವೂರುಗೆ ಧನ್ಯವಾದ ತಿಳಿಸಿದ್ದಾರೆ.

‘ಮಳೆಯಲ್ಲೂ ನಡ್ಕೊಂಡ್ ಹೋಗ್ತಿದ್ವಿ’

ಶಾಲೆಗೆ ಹೋಗುವುದಕ್ಕೆ ತುಂಬಾ ಕಷ್ಟ ಆಗುತ್ತಿತ್ತು. ಸದ್ಯ ಬಸ್​ ಬಂದಿದ್ದಕ್ಕೆ ನಮಗೆಲ್ಲ ಫುಲ್ ಖುಷಿಯಾಗಿದೆ. ಮಳೆ, ಬಿಸಿಲು ಏನೇ ಇದ್ದರು ನಾವು ನಡೆದುಕೊಂಡು ಹೋಗುತ್ತಿದ್ದೇವೆ. ಈ ಬಗ್ಗೆ ವರದಿ ಮಾಡಿರುವುದಕ್ಕೆ ನ್ಯೂಸ್​​ಫಸ್ಟ್​ಗೆ ಥ್ಯಾಂಕ್ಸ್​.

ಶಾಲಾ ವಿದ್ಯಾರ್ಥಿನಿ

‘ನ್ಯೂಸ್​ ಫಸ್ಟ್​ಗೆ ಧನ್ಯವಾದ’

ನ್ಯೂಸ್​ ಫಸ್ಟ್​ ಚಾನೆಲ್​ಗೆ ಧನ್ಯವಾದ. ಬಸ್ ಬಿಟ್ಟಿದ್ದರಿಂದ ನಮಗೆ ಸಾಕಷ್ಟು ಸಮಯ ಉಳಿಯುತ್ತದೆ. ಶಾಲೆಗೆ ನಡೆಯಬೇಕೆಂಬುದು ಈಗ ಇಲ್ಲ. ಸಾರಿಗೆ ಇಲಾಖೆಗೆ ಧನ್ಯವಾದ.

ಶಾಲಾ ವಿದ್ಯಾರ್ಥಿನಿ

Advertisment

ಇದನ್ನೂ ಓದಿ: ಮೂರು ದಿನದಿಂದ ಜೈಲಲ್ಲಿ ದರ್ಶನ್‌ಗೆ ಒಂದೇ ಟೀ ಶರ್ಟ್‌.. ಡಿಬಾಸ್​ ಅಭಿಮಾನಿಗಳಿಗೂ ಇದೇ ದೊಡ್ಡ ಕ್ರೇಜ್​!

publive-image

‘ಬೆಳಗ್ಗೆ-ಸಂಜೆ ಬಸ್ ವ್ಯವಸ್ಥೆ’

ವಿದ್ಯಾರ್ಥಿಗಳು ಬಸ್ ಸೌಲಭ್ಯ ಪಡೆದು ಇನ್ನು ಹೆಚ್ಚಿನ ವಿದ್ಯಾಭ್ಯಾಸವನ್ನು ಪಡೆಯಲಿ. ಬೆಳಗ್ಗೆ 8 ಗಂಟೆಗೆ ಹಾಗೂ ಸಂಜೆ 4:30ಕ್ಕೆ ಗಬ್ಬೂರಿನಿಂದ ಬಸ್​ನ ವ್ಯವಸ್ಥೆ ಮಾಡಿದ್ದೇವೆ.

ಚಂದ್ರಶೇಖರ್, KKRTC ಮುಖ್ಯಸ್ಥರು

ಒಬ್ಬ ವರದಿಗಾರನ ಜವಾಬ್ದಾರಿ ಕೇವಲ ವರದಿ ಮಾಡೋದಷ್ಟೇ ಅಲ್ಲ. ಅದನ್ನ ಫಲಶೃತಿಗೊಳಿಸಬೇಕು, ಇದನ್ನ ನಿಮ್ಮ ನ್ಯೂಸ್ ಫಸ್ಟ್ ಮಾಡಿದೆ. ಗ್ರಾಮಕ್ಕೆ ಬಸ್ ಬಂದಿದ್ರಿಂದ ಕೇವಲ ಶಾಲಾ ಮಕ್ಕಳಲ್ಲ, ಇಡೀ ಗ್ರಾಮಸ್ಥರೇ ಸಂತಸ ವ್ಯಕ್ತಪಡಿಸಿದ್ದಾರೆ. ಮಕ್ಕಳೇ ಇನ್ನೇನಿದ್ರೂ ಶಾಲೆಗೆ ಹೋಗಲು ಅಷ್ಟು ದೂರ ನಡೆಯಬೇಕಲ್ಲಪ್ಪ ಅಂತ ಕೊರಗಂಗಿಲ್ಲ. ಬರೋದು ಬಸ್​ ಹತ್ತೋದು ಶಾಲೆಗೆ ಹೋಗಿ ಚೆನ್ನಾಗಿ ಓದೋದು ಅಷ್ಟೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment