newsfirstkannada.com

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಸವಾರರಿಗೆ ಮತ್ತೆ ಶಾಕ್‌.. ಏಪ್ರಿಲ್ 1ರಿಂದ ಟೋಲ್ ಶುಲ್ಕ ಹೆಚ್ಚಳ; ಎಷ್ಟು?

Share :

Published March 28, 2024 at 1:07pm

    ವಾಹನ ಸವಾರರಿಗೆ ಶಾಕ್‌ ಕೊಟ್ಟ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

    ಏಪ್ರಿಲ್ 1ರಿಂದ ಎಲ್ಲಾ ಹೆದ್ದಾರಿಗಳಲ್ಲಿ ಪರಿಷ್ಕರಣೆಯ ಟೋಲ್ ದರ ಜಾರಿ

    ತುಮಕೂರು-ಚಿತ್ರದುರ್ಗ ಹೆದ್ದಾರಿಯ ಟೋಲ್ ದರ ಕೂಡ ಏರಿಕೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೇಸ್ ವೇ ಸೇರಿದಂತೆ ಹಲವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಕಟ್ಟಿ ಸಂಚಾರ ಮಾಡುವ ವಾಹನ ಸವಾರರಿಗೆ ಶಾಕಿಂಗ್ ಸುದ್ದಿ ಬಂದಿದೆ. ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಟೋಲ್‌ ದರ ಹೆಚ್ಚಿಸಲು ಮುಂದಾಗಿದ್ದು, ಇದೇ ಏಪ್ರಿಲ್ 1ರಿಂದ ಪರಿಷ್ಕರಣೆ ಮಾಡಿರುವ ಟೋಲ್ ದರ ಜಾರಿಗೆ ತರಲಾಗುತ್ತಿದೆ.

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಶುಲ್ಕ 10ರೂಪಾಯಿ ಏರಿಕೆ ಮಾಡಲಾಗುತ್ತಿದೆ. ಸದ್ಯ ಒಂದು ಕಡೆಯ ಪ್ರಯಾಣಕ್ಕೆ ಕಾರುಗಳಿಗೆ 320 ರೂಪಾಯಿ ಇತ್ತು. ಏಪ್ರಿಲ್ 1ರಿಂದ ಪರಿಷ್ಕರಣೆ ದರದಿಂದ 330 ರೂಪಾಯಿಗೆ ಏರಿಕೆ ಮಾಡಲಾಗುತ್ತಿದೆ. ಎರಡು ಕಡೆಯ ಪ್ರಯಾಣಕ್ಕೆ ಕಾರುಗಳಿಗೆ 485 ರೂಪಾಯಿನಿಂದ 495 ರೂಪಾಯಿಗೆ ಏರಿಕೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಸ್ನೇಹಿತನ ತಮಾಷೆಯಿಂದ ಅಮಾಯಕ ಬಲಿ.. ಬೈಕ್​ ಸರ್ವೀಸ್​ ಮಾಡಲು ಹೋದಾತ ಅನ್ಯಾಯವಾಗಿ ಸಾವನ್ನಪ್ಪಿದ  

ಇದೇ ರೀತಿ ತುಮಕೂರು-ಚಿತ್ರದುರ್ಗ ಹೆದ್ದಾರಿಯ ಟೋಲ್ ದರ ಕೂಡ ಏಪ್ರಿಲ್ 1ರಿಂದ ಪರಿಷ್ಕರಣೆ ಆಗುತ್ತಿದೆ. ಶಿರಾದ ಕಳ್ಳಂಬೆಳ್ಳ ಬಳಿಯ ಕರಜೀವನಹಳ್ಳಿಯ ಟೋಲ್, ಚಿತ್ರದುರ್ಗ ಬಳಿಯ ಗುಯಿಲಾಳು ಟೋಲ್ ದರವೂ ಕೂಡ ಏಪ್ರಿಲ್ 1ರಿಂದ 10 ರೂಪಾಯಿ ಏರಿಕೆ ಮಾಡಲಾಗುತ್ತಿದೆ.

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪ್ರತಿ ವರ್ಷ ಟೋಲ್ ದರ ಹೆಚ್ಚಳ ಮಾಡುತ್ತದೆ. ಇದೀಗ ವಾರ್ಷಿಕ ದರ ಪರಿಷ್ಕರಣೆ ಮಾಡಲಾಗಿದ್ದು, ಏಪ್ರಿಲ್ 1ರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಟೋಲ್ ಶುಲ್ಕ 10 ರೂಪಾಯಿ ಏರಿಕೆಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಸವಾರರಿಗೆ ಮತ್ತೆ ಶಾಕ್‌.. ಏಪ್ರಿಲ್ 1ರಿಂದ ಟೋಲ್ ಶುಲ್ಕ ಹೆಚ್ಚಳ; ಎಷ್ಟು?

https://newsfirstlive.com/wp-content/uploads/2023/09/Bengaluru_Mysore_Express-Way.jpg

Load More