Advertisment

ಹಿಂದೂ ಹೆಸರು ಹೇಳಿಕೊಂಡು ಓಡಾಟ.. ಮಹತ್ವದ ಘಟ್ಟ ತಲುಪಿದ ರಾಮೇಶ್ವರಂ ಕೆಫೆ ಕೇಸ್ ತನಿಖೆ​..!

author-image
Bheemappa
Updated On
ಹಿಂದೂ ಹೆಸರು ಹೇಳಿಕೊಂಡು ಓಡಾಟ.. ಮಹತ್ವದ ಘಟ್ಟ ತಲುಪಿದ ರಾಮೇಶ್ವರಂ ಕೆಫೆ ಕೇಸ್ ತನಿಖೆ​..!
Advertisment
  • ಆರೋಪಿಗಳ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ
  • ಆಗಂತುಕರ 3 ಪೋಟೋ ಹಂಚಿಕೊಂಡಿರುವ ಎನ್​ಐಎ
  • NIA ಬಿಡುಗಡೆಗೊಳಿಸಿದ ವಾಂಟೆಡ್ ಲಿಸ್ಟ್​ನಲ್ಲಿ ಸ್ಫೋಟಕ ವಿಚಾರ

ಬಾಂಬ್​​ ಸ್ಫೋಟದ ಆರೋಪಿಗಳಾದ ಅಬ್ದುಲ್ ಮತೀನ್ ಅಹಮದ್ ತಾಹ ಹಾಗೂ ಆತನ ಸಹಚರ ಮುಸಾವಿರ್ ಹುಸ್ಸೇನ್ ಅವರ ಫೋಟೋವನ್ನು ಎನ್‌ಐಎ ಬಿಡುಗಡೆ ಮಾಡಿದೆ. ಆರೋಪಿಗಳ ಸುಳಿವು ನೀಡುವವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಅಲ್ಲದೆ, ಕೆಲ ಇಂಟ್ರಸ್ಟಿಂಗ್​ ವಿಚಾರಗಳನ್ನ ಎನ್​ಐಎ ಹಂಚಿಕೊಂಡಿದೆ.

Advertisment

ಮಾರ್ಚ್​​​ 1.. ಅದೊಂದು ಸ್ಫೋಟಕ್ಕೆ ಸಿಲಿನಾನ್​​ ಸಿಟಿ ಬೆಚ್ಚಿಬಿದ್ದಿತ್ತು. ಬ್ರಾಂಡ್​​ ಬೆಂಗಳೂರಿಗೆ ಕಳಂಕ ಮೆತ್ತಿತ್ತು. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಪ್ರಕರಣದಲ್ಲಿ ಮೊದಲ ಬಂಧನವಾಗಿದೆ. ಬಾಂಬಿಟ್ಟ ಭೂತನ ಸ್ನೇಹಿತನನ್ನ ಎನ್​​ಐಎ ಹೆಡೆಮುರಿ ಕಟ್ಟಿದೆ. ಬಂಧಿತನಿಂದ ದುಷ್ಟನ ಮಾಹಿತಿ ಕಕ್ಕಿಸಿದೆ. ಸದ್ಯ ನಾಪತ್ತೆ ಆಗಿರುವ ಕೇಡಿ ಈಗಲೂ ಪತ್ತೆ ಆಗಿಲ್ಲ. ಆದ್ರೆ, ನಾಪತ್ತೆ ಆದವನ ಬೆನ್ನುಬಿದ್ದ ಎನ್​​ಐಎ, ಶಂಕಿತನ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿದೆ.

publive-image

ಮೊದಲ ಬಾರಿಗೆ ಫೋಟೋ ಹಂಚಿಕೊಂಡ ಎನ್​​ಐಎ

ಬೆಂಗಳೂರಿನಲ್ಲಿ ಮಾರ್ಚ್ 1 ರಂದು ನಡೆದಿದ್ದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹುಡುಕಾಟ ಕಂಟಿನ್ಯೂ ಆಗಿದೆ. ಆರೋಪಿಗಳ ಫೋಟೋ ಮೊದಲ ಬಾರಿಗೆ ಎನ್​​ಐಎ ಹಂಚಿಕೊಂಡಿದೆ.. ಅಬ್ದುಲ್ ಮತೀನ್ ಅಹಮದ್ ತಾಹ ಹಾಗೂ ಆತನ ಸಹಚರ ಮುಸಾವಿರ್ ಹುಸ್ಸೇನ್ ಎಂಬ ಆರೋಪಿಗಳ ಫೋಟೋ ಶೇರ್​​ ಮಾಡಿದೆ. ಆರೋಪಿಗಳ ಸುಳಿವಿಗೆ ಬಹುಮಾನ ಘೋಷಿಸಿರುವ ತನಿಖಾ ತಂಡ, 10 ಲಕ್ಷ ರೂ. ಬಹುಮಾನ ನೀಡುವುದಾಗಿ ಹೇಳಿದೆ.

ಅಬ್ದುಲ್ ಮತೀನ್ ಅಹಮದ್ ತಾಹಾ ಹಾಗೂ ಮುಸಾವಿರ್ ಹುಸ್ಸೇನ್ ಶಾಜಿಬ್ ಇಬ್ಬರ ಪೋಟೋ ಬಿಡುಗಡೆ ಮಾಡಲಾಗಿದೆ. ಈ ಇಬ್ಬರು ಆಗಂತುಕರು ತಲಾ 3 ಮಾದರಿಯ ಪೋಟೋವನ್ನ ಎನ್​ಐಎ ಹಂಚಿಕೊಂಡಿದೆ. ಶಂಕಿತರು ಹೇಗೆ ಇರಬಹುದು ಎಂಬುದರ ಮಾಹಿತಿಯನ್ನ ನೀಡಿದೆ..

Advertisment

ಬಾಂಬಿಟ್ಟವನು ಹಿಂದೂ ಹೆಸರಿಟ್ಟುಕೊಂಡು ಓಡಾಟ

ಎನ್​ಐಎ ಬಿಡುಗಡೆ ಮಾಡಿದ ವಾಂಟೆಡ್ ಲಿಸ್ಟ್​ನಲ್ಲಿ ಸ್ಫೋಟಕ ವಿಚಾರ ಬಯಲಿಗೆ ಬಂದಿದೆ.. ಹಿಂದೂ ಯುವಕನ ರೀತಿಯಲ್ಲಿ ಅಬ್ದುಲ್ ಮತೀನ್ ಅಹಮದ್ ತಾಹಾ ಇರೋದು ಪತ್ತೆಯಾಗಿದೆ. ಹಿಂದೂ ಹೆಸರು ಹೇಳಿಕೊಂಡು ವಿವಿಧ ನಗರಗಳಲ್ಲಿ ಸಂಚಾರ ಮಾಡ್ತಿದ್ದಾನೆ ಅಂತ ಗೊತ್ತಾಗಿದೆ. ತಲೆ ಮರೆಸಿಕೊಳ್ಳಲು ವಿಘ್ನೇಶ್ ಹಾಗೂ ಸುಮಿತ ಎಂಬ ಹೆಸರನ್ನ ನಕಲಿ ಹೆಸರು ಇಟ್ಟುಕೊಂಡಿದ್ದಾನೆ. ಜೊತೆಗೆ ವಿಘ್ನೇಶ್ ಎಂಬ ಹೆಸರಿನಲ್ಲಿ ಆಧಾರ್ ಕಾರ್ಡ್‌ ಕೂಡ ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 5 ವರ್ಷದ ಬಾಲಕನಿಗೆ ಕುರ್ಚಿ ಬಿಟ್ಟು ಕೊಟ್ಟ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್; ವಿಡಿಯೋ!

publive-image

ಬೇರೊಬ್ಬರ ಹೆಸರಲ್ಲಿ ಡ್ರೈವಿಂಗ್ ಲೈಸೆನ್ಸ್‌!

ಈ ಮತಿಗೆಟ್ಟ ಮತೀನ್ ಸಹಚರ ಮುಸಾವೀರ್ ಹುಸ್ಸೇನ್ ಶಾಜಿಬ್ ಸಹ ತಲೆ ಮರೆಸಿಕೊಂಡಿದ್ದಾನೆ. ಮುಸಾವೀರ್ ಹುಸ್ಸೇನ್ ಶಾಜಿಬ್ ಕೂಡ ತನ್ನ ಹೆಸರನ್ನು ಬದಲಿಸಿಕೊಂಡು ದೇಶದ ವಿವಿಧ ನಗರಗಳಲ್ಲಿ ವಾಸಿಸ್ತಿದ್ದಾನಂತೆ.. ಈತ ಮಹಮ್ಮದ್ ಜುನೇದ್ ಸೈಯದ್ ಎಂಬ ಹೆಸರಿನಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾನೆ ಅಂತ ತನಿಖೆಯಲ್ಲಿ ಗೊತ್ತಾಗಿದೆ. ಶಂಕಿತರಿಬ್ಬರು ತಮ್ಮ ಐಡೆಂಟಿಟಿ ಮರೆಮಾಚಲು ವಿಗ್ ಹಾಗೂ ನಕಲಿ ಗಡ್ಡ ಮೀಸೆಗಳನ್ನ ಬಳಸ್ತಿದ್ದಾರೆ ಅಂತ ಎನ್‌ಐಎ ಮಾಹಿತಿ ನೀಡಿದೆ.

Advertisment

ಸುಳಿವು ಸಿಕ್ಕಿದ್ದಲ್ಲಿ 080 29510900 ಮತ್ತು 8904241100 ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಲಾಗಿದೆ. ಆರೋಪಿ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ನಗದು ಬಹುಮಾನ ನೀಡೋದಾಗಿ ಎನ್​​ಐಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment