newsfirstkannada.com

×

ಅತ್ತೂ, ಅತ್ತೂ, ಅತ್ತೂ ಗಿನ್ನೆಸ್ ದಾಖಲೆ ಮಾಡುವ ಹುಚ್ಚು; 7 ದಿನ ಸತತ ಕಣ್ಣೀರು ಸುರಿಸಿದವನಿಗೆ ಏನಾಯ್ತು ಗೊತ್ತಾ?

Share :

Published July 20, 2023 at 8:10pm

    ಸತತ 100 ಗಂಟೆ ಕಣ್ಣೀರು ಸುರಿಸಿದ್ರೂ ಹಠ ಬಿಡದ ಆಸಾಮಿ

    ಗಿನ್ನೆಸ್ ದಾಖಲೆಗಾಗಿ ಕಣ್ಣೀರು ಸುರಿಸಿದ ನೈಜೀರಿಯಾದ ವ್ಯಕ್ತಿ

    ಗಿನ್ನಿಸ್ ದಾಖಲೆಯ ದೃಢ ಸಂಕಲ್ಪ ಹೊಂದಿದವನಿಗೆ ಏನಾಯ್ತು?

ಅಬುಜಾ: ಅದೆಷ್ಟೋ ಜನರು ಗಿನ್ನಿಸ್ ದಾಖಲೆ ಮಾಡಬೇಕೆಂದು ಏನೇನೋ ಹೊಸ, ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಾರೆ. ಗಿನ್ನಿಸ್ ದಾಖಲೆಯ ಪಟ್ಟಿಯಲ್ಲಿ ನನ್ನ ಹೆಸರು ಬರಬೇಕೆಂದು ಎಂತಹ ಸಾಹಸವನ್ನು ಕೂಡ ಮಾಡಬಲ್ಲರು. ಹೀಗೆ ಗಿನ್ನಿಸ್ ದಾಖಲೆ ಮಾಡಲೇಬೇಕು ಎಂಬ ಹಠದಲ್ಲಿ ವ್ಯಕ್ತಿಯೋರ್ವ ತನ್ನ ಕಣ್ಣನ್ನು ಕಳೆದುಕೊಂಡಿದ್ದಾನೆ.

ನೈಜೀರಿಯಾದ ತೆಂಬು ಎಬೆರೆ ಎಂಬ ವ್ಯಕ್ತಿಯು ಸುಮಾರು 100 ಗಂಟೆ ಕಾಲ ಅಂದರೆ 4 ದಿವಸ 4 ಗಂಟೆ ಅತ್ತು ಕಣ್ಣು ಕಳೆದುಕೊಂಡಿದ್ದಾನೆ ಎಂದರೆ ನೀವು ನಂಬಲು ಸಾಧ್ಯವೇ? ಹೌದು, ನಿರಂತರವಾಗಿ ತೆಂಬು ಎಬೆರೆ ಎಂಬ ವ್ಯಕ್ತಿಯು ಕಣ್ಣೀರು ಸುರಿಸಿದ್ದಾನೆ. ಇದಾದ ಬಳಿಕ ಈತನಿಗೆ ತಲೆ ನೋವು, ಕಣ್ಣುರಿ ಜೊತೆಗೆ ಮುಖ ಊದಿಕೊಂಡಿರುವುದು ಕಂಡು ಬಂದಿದೆ. ಇಷ್ಟಾದರೂ ಆ ವ್ಯಕ್ತಿಯು ಸಾಹಸವನ್ನು ಕೈ ಬಿಟ್ಟಿಲ್ಲ. ನಿರಂತರ ಒಂದು ವಾರ ಕಣ್ಣೀರು ಹಾಕಲೇಬೇಕು ಎಂದು ದೃಢ ಸಂಕಲ್ಪವನ್ನು ಹೊಂದಿದ್ದನಂತೆ. ಜೊತೆಗೆ ಈ ಮೂಲಕ ವಿಶ್ವದಾಖಲೆ ಮಾಡಲೇಬೇಕು ಎಂದು ಹೇಳಿದ್ದನು.

ಆದರೆ ಈ ಸಾಹಸಕ್ಕೆ ಕೈ ಹಾಕಿದ ಈತ ಒಂದು ಕ್ಷಣವೂ ಬಿಡದೆ ಏಳು ದಿನಗಳ ಕಾಲ ಸತತವಾಗಿ ಅಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಲು ಬಯಸಿರುವುದಾಗಿ ಹೇಳಿಕೊಂಡಿದ್ದ. ಇದಾದ ಬಳಿಕ 45 ನಿಮಿಷಗಳ ಕಾಲ ಈತನಿಗೆ ಕಣ್ಣೇ ಕಾಣಿಸಿಲ್ಲ. ಇದರಿಂದ ಈತನಿಗೆ ದೃಷ್ಟಿ ಸಮಸ್ಯೆ ಎದುರಾಗಿದೆ. ಇದು ತಾತ್ಕಾಲಿಕವಾದ ಕುರುಡುತನವಾಗಿದ್ದು, ಸೂಕ್ತ ಚಿಕಿತ್ಸೆಯಿಂದ ಗುಣಮುಖರಾಗೋ ಸಾಧ್ಯತೆ ಇದೆ. ಈತ ಏನೇ ಆದರೂ ನಾನು ಗಿನ್ನೆಸ್‌ ಸಾಹಸವನ್ನು ಕೈಬಿಟ್ಟಿಲ್ಲ ಎಂದು ತುಂಬಾ ಖುಷಿಯಾಗಿ ಖಾಸಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ. ಇದೀಗ ಈತನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತ್ತೂ, ಅತ್ತೂ, ಅತ್ತೂ ಗಿನ್ನೆಸ್ ದಾಖಲೆ ಮಾಡುವ ಹುಚ್ಚು; 7 ದಿನ ಸತತ ಕಣ್ಣೀರು ಸುರಿಸಿದವನಿಗೆ ಏನಾಯ್ತು ಗೊತ್ತಾ?

https://newsfirstlive.com/wp-content/uploads/2023/07/nigerian-2.jpg

Load More