newsfirstkannada.com

ರಾತ್ರಿ ಊಟ ಆಗ್ತಿದ್ದಂತೆ ನೀವು ಈ ತಪ್ಪು ಮಾಡ್ತಿದ್ರೆ ಇಂದೇ ಬಿಟ್ಟುಬಿಡಿ..! ಯಾಕೆಂದರೆ..

Share :

Published April 3, 2024 at 12:37pm

    ಕೆಲಸ ಮಾಡಿ ತುಂಬಾ ಸುಸ್ತಾಗಿದೆ ಎಂದು ಈ ತಪ್ಪು ಮಾಡಬೇಡಿ

    ಎಷ್ಟೇ ಒತ್ತಡದಲ್ಲಿದ್ದರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

    ಒಮ್ಮೆ ಆರೋಗ್ಯ ಹದಗೆಟ್ಟರೆ ನಿಮ್ಮ ಆಯುಸ್ಸು ಕೂಡ ಹಾಳಾದಂತೆ

ಬಿಡುವಿಲ್ಲದ ಜೀವನ ಶೈಲಿ, ಜಂಜಾಟಗಳಿಂದಾಗಿ ನಿಮ್ಮ ಬಗ್ಗೆ ನೀವು ನೋಡಿಕೊಳ್ಳೋದೇ ದೊಡ್ಡ ಸವಾಲಿನ ಕೆಲಸ. ಆಧುನಿಕ ಜೀವನಶೈಲಿ, ಕೆಲಸದ ಒತ್ತಡಗಳ ಪರಿಣಾಮ ಜನ ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ಗಮನ ಹರಿಸದೇ ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸದಲ್ಲಿ ಬ್ಯುಸಿ ಇರ್ತಾರೆ. ಇದೇ ಕಾರಣಕ್ಕೆ ಅನೇಕರು ರಾತ್ರಿ ಊಟ ಆಗ್ತಿದ್ದಂತೆಯೇ ನಿದ್ರೆಗೆ ಜಾರಿ ಬಿಡುತ್ತಾರೆ.

ಒಂದು ವೇಳೆ ನಿಮಗೂ ಆ ರೀತಿಯ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಏಕೆಂದರೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಬಹಳಷ್ಟು ತೊಂದರೆಯಾಗಲಿದೆ. ತಿಂದ ತಕ್ಷಣ ಮಲಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ‘ಓನ್ಲಿ ಮೈ ಹೆಲ್ತ್’ನಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ, ರಾತ್ರಿ ಊಟ ಮಾಡಿದ ತಕ್ಷಣ ನಿದ್ದೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

ಜೀರ್ಣಕ್ರಿಯೆಗೆ ಸಮಸ್ಯೆ
ರಾತ್ರಿ ಊಟವಾದ ತಕ್ಷಣ ಮಲಗಿದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ನಿದ್ರೆಗೆ ಜಾರುವುದರಿಂದ ಜೀರ್ಣ ಪ್ರಕ್ರಿಯೆ ನಿಧಾನವಾಗಿ ನಡೆಯುತ್ತದೆ. ಹಾಗಾಗಿ ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗದೆ ಹೊಟ್ಟೆಯಲ್ಲಿ ಊತ ಮತ್ತು ಅಜೀರ್ಣದಂಥ ಸಮಸ್ಯೆಗಳು ಶುರುವಾಗುತ್ತವೆ.

ಮಧುಮೇಹ ರೋಗ
ಊಟ ಮಾಡ್ತಿದ್ದಂತೆಯೇ ಮಲಗುವ ಅಭ್ಯಾಸದಿಂದ ದೇಹದಲ್ಲಿನ ಗ್ಲೂಕೋಸ್​ನ ಪ್ರಮಾಣ ಹೆಚ್ಚಾಗುತ್ತದೆ. ಮಧುಮೇಹ ಮತ್ತು ಬೊಜ್ಜು ಮುಂತಾದ ರೋಗಗಳನ್ನು ಬರುವ ಸಾಧ್ಯತೆ ಹೆಚ್ಚಿರುತ್ತದೆ.

ಎದೆಯುರಿ ದೂರು
ತಿಂದ ತಕ್ಷಣ ಮಲಗುವುದರಿಂದ ಎದೆಯುರಿ ಉಂಟಾಗುತ್ತದೆ. ಅಸಿಡಿಟಿ, ಹೊಟ್ಟೆ ಉರಿ, ಎದೆ ಉರಿ ಮುಂತಾದ ದೂರುಗಳೂ ಬರುತ್ತವೆ. ನೀವು ಈಗಾಗಲೇ ಅಸಿಡಿಟಿಯಿಂದ ಬಳಲುತ್ತಿದ್ದರೆ ತಿಂದ ತಕ್ಷಣ ಮಲಗಬಾರದು. ಅಷ್ಟೇ ಅಲ್ಲ, ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೂ ಎದುರಾಗುತ್ತವೆ. ಬೊಜ್ಜು, ನಿದ್ರೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವುದರಿಂದ ಯಾವುದೇ ಕಾರಣಕ್ಕೂ ಸುಸ್ತಾಗಿದೆ ಎಂದು ರಾತ್ರಿ ಊಟ ಆಗ್ತಿದ್ದಂತೆ ಮಲಗಲೇಬೇಡಿ!

ಇದನ್ನೂ ಓದಿ: ಬೆಳ್ಳನೆಯ ಮಜ್ಜಿಗೆ, ನಿಮ್ಮ ಆರೋಗ್ಯ ಫಳಫಳ; ಬೇಸಿಗೆಯ ಆಸರಿಗೆ ಮಜ್ಜಿಗೆ ಆಸರೆ.. ಅಯ್ಯೋ ಇಷ್ಟೊಂದು ಲಾಭಾನಾ..!?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾತ್ರಿ ಊಟ ಆಗ್ತಿದ್ದಂತೆ ನೀವು ಈ ತಪ್ಪು ಮಾಡ್ತಿದ್ರೆ ಇಂದೇ ಬಿಟ್ಟುಬಿಡಿ..! ಯಾಕೆಂದರೆ..

https://newsfirstlive.com/wp-content/uploads/2024/04/DINNER.jpg

Load More