newsfirstkannada.com

‘ಬ್ಲರ್ ಮಾಡದೇ ಪೆನ್‌ಡ್ರೈವ್ ಹಂಚಿದ ಪಾಪಿಗಳು ಯಾರು’- ನಿಖಿಲ್ ಕುಮಾರಸ್ವಾಮಿ ಆಕ್ರೋಶ

Share :

Published May 10, 2024 at 2:02pm

    ಹೆಣ್ಣು ಮಕ್ಕಳನ್ನು ಬ್ಲರ್ ಮಾಡದೇ ವಿಡಿಯೋ ವೈರಲ್ ಮಾಡಿದ್ದಾರೆ

    ಸಚಿವರು ಸುಮ್ಮನೆ ಅಪಪ್ರಚಾರ, ಆರೋಪ ಮಾಡೋದು ಸೂಕ್ತ ಇಲ್ಲ

    ನನ್ನ ಸಂಪರ್ಕದಲ್ಲಿ ಪ್ರಜ್ವಲ್ ರೇವಣ್ಣ ಅವರು ಇಲ್ಲ - ನಿಖಿಲ್ ಕುಮಾರಸ್ವಾಮಿ

ಮಂಡ್ಯ: ಹಾಸನ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆನ್‌ಡ್ರೈವ್ ವಿಚಾರವಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಅದನ್ನು ನಾವು ಸ್ವಾಗತ ಮಾಡ್ತೀವಿ. ಆದರೆ ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ಯಾ ಎಂದು ನಿಖಿಲ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 700 ಮಹಿಳೆಯರ ದೂರು? ಪ್ರಜ್ವಲ್ ರೇವಣ್ಣ ಕೇಸ್‌ಗೆ NCW ಬಿಗ್ ಟ್ವಿಸ್ಟ್‌; ಹೇಳಿದ್ದೇನು? 

ಅಶ್ಲೀಲ ವಿಡಿಯೋ ಮಾಡಿರುವುದು ವಿಡಿಯೋ ಬಿಟ್ಟಿರೋದು ಎರಡು ಕೂಡ ತಪ್ಪು. ಹೆಣ್ಣು ಮಕ್ಕಳ ರಕ್ಷಣೆ ಮಾಡಬೇಕಾದ ಸರ್ಕಾರವೇ ಅವರನ್ನು ಬೀದಿಗೆ ತಂದಿದೆ. ಪೆನ್‌ಡ್ರೈವ್ ಹಂಚಿರೋದು ಯಾರು ಎಂದು ಪತ್ತೆ ಹಚ್ಚಬೇಕು. ಹೆಣ್ಣು ಮಕ್ಕಳನ್ನು ಬ್ಲರ್ ಮಾಡದೇ ವಿಡಿಯೋ ವೈರಲ್ ಮಾಡಿದ್ದಾರೆ. ಹೆಣ್ಣು ಮಕ್ಕಳ ಮರ್ಯಾದೆ ಏನ್ ಆಗುತ್ತೆ. ಅವರ ಕುಟುಂಬದ ಗತಿ ಏನು. ಹೆಣ್ಣು ಮಕ್ಕಳ ಜೀವಕ್ಕೆ ಅಪಾಯ ಬಂದರೆ ಯಾರು ಜವಾಬ್ದಾರಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಬ್ಲರ್ ಮಾಡದೇ ಪೆನ್‌ಡ್ರೈವ್‌ ಹಂಚಿರೋ ಪಾಪಿಗಳ ವಿರುದ್ಧ ತನಿಖೆ ಆಗಬೇಕು. ಸುಮ್ಮನೆ ಅಪಪ್ರಚಾರ, ಆರೋಪ ಮಾಡೋದು ಸೂಕ್ತ ಇಲ್ಲ. ಈ ತನಿಖೆಯನ್ನು ಸಿಬಿಐಗೆ ಕೊಡಿ. ಸಂತ್ರಸ್ತೆಯರಿಗೆ ಎಸ್‌ಐಟಿಯವರು ಒತ್ತಡ ಹಾಕುತ್ತಿರೋದು ನಮ್ಮ ಗಮನಕ್ಕೆ ಬಂದಿದೆ. ಈ ರೀತಿ ಒತ್ತಡ ಏರೋದು ರಾಜಕೀಯ ದುರುದ್ದೇಶ ಮಾಡೋದು ಸರಿಯಲ್ಲ. ಸಂತ್ರಸ್ತೆಯರ ನೋವು, ಅವರ ಕುಟುಂಬದ ನೋವು ಇದೆ.

ಈ ಪ್ರಕರಣವನ್ನು ಸಿಬಿಐಗೆ ಕೊಟ್ಟು ಕೂಲಂಕಷವಾಗಿ ತನಿಖೆ ಮಾಡಲಿ. ಸತ್ಯಾಸತ್ಯತೆ ಹೊರ ಬೀಳಲಿ. ಉಪ್ಪು ತಿಂದವರು ನೀರು ಕುಡಿಯಬೇಕು ಅಂತ ಹೇಳಿರುವ ಹೆಚ್‌.ಡಿ ಕುಮಾರಸ್ವಾಮಿ ಅವರು ಮೊದಲ ದಿನವೇ ಅಮಾನತು ಮಾಡಿದ್ದಾರೆ. ಸದ್ಯ ನನ್ನ ಸಂಪರ್ಕದಲ್ಲಿ ಪ್ರಜ್ವಲ್ ರೇವಣ್ಣ ಅವರು ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬ್ಲರ್ ಮಾಡದೇ ಪೆನ್‌ಡ್ರೈವ್ ಹಂಚಿದ ಪಾಪಿಗಳು ಯಾರು’- ನಿಖಿಲ್ ಕುಮಾರಸ್ವಾಮಿ ಆಕ್ರೋಶ

https://newsfirstlive.com/wp-content/uploads/2024/05/NIKHIL-KUMARASWAMY.jpg

Load More