/newsfirstlive-kannada/media/post_attachments/wp-content/uploads/2024/10/NIKHLI_YADHUVEER.jpg)
ಮೂರು ಕ್ಷೇತ್ರಗಳ ಉಪ ಚುನಾವಣೆ ಕಣ ಯಾವ ಯುದ್ಧ ಮೈದಾನಕ್ಕೂ ಕಮ್ಮಿ ಇಲ್ಲ. ಚನ್ನಪಟ್ಟಣದಲ್ಲಿ ಸೈನಿಕನಿಗೆ ಸೆಡ್ಡು ಹೊಡೆದ ನಿಖಿಲ್​, ಅಖಾಡವನ್ನೇ ರಂಗೇರಿಸಿದ್ದಾರೆ. ಇತ್ತ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಹೊಂದಾಣಿಕೆ ಹಲ್​ಚಲ್ ಎಬ್ಬಿಸಿದ್ರೆ, ಸಂಡೂರಿನಲ್ಲಿ ತಳಮಟ್ಟದ ಕೈ ಕಾರ್ಯಕರ್ತರನ್ನ ರೆಡ್ಡಿ ಶಿಕಾರಿ ಆಡುತ್ತಿದ್ದಾರೆ. ಈ ಮಧ್ಯೆ ಅಭ್ಯರ್ಥಿಗಳ ಪರ ಮೂರು ಪಕ್ಷಗಳ ಪ್ರಚಾರ ಭರಾಟೆ ಮತ್ತಷ್ಟು ಜೋರಾಗಿದೆ.
ಉಪ ಸಮರ ಉಪಾಂತ್ಯಕ್ಕೆ ಬರ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದು, ಕದನ ಕಣ ರಂಗೇರುತ್ತಿದೆ. ಮೂರು ಕ್ಷೇತ್ರಗಳಲ್ಲೂ ಮಳೆ ಬಿಸಿಲು ಎನ್ನದೆ ಪ್ರಚಾರದ ಅಖಾಡದಲ್ಲಿ ನಾಯಕರ ಬೆವರು ಹರಿಸುತ್ತಿದ್ದಾರೆ. ಜಿದ್ದು-ಪ್ರತಿಷ್ಠೆ- ಅಸ್ತಿತ್ವ ಮೂರು ಪಕ್ಷಗಳಿಗೂ ಎಲೆಕ್ಷನ್​ ಗೆಲ್ಲೋದನ್ನ ಅನಿವಾರ್ಯವಾಗಿಸಿದೆ. ಇದೀಗ ಮೂರೂ ಕ್ಷೇತ್ರಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ.
ಇದನ್ನೂ ಓದಿ: ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ.. ದಾಸನಿಗೆ ದೀಪಾವಳಿಯ ಗುಡ್​ನ್ಯೂಸ್​ ಸಿಗುತ್ತಾ?
/newsfirstlive-kannada/media/post_attachments/wp-content/uploads/2024/10/HDK-2.jpg)
ಚನ್ನಪಟ್ಟಣದ ಚದುರಂಗ ಗೆಲ್ಲಲು ನಿಖಿಲ್​​​ ಕುಮಾರಸ್ವಾಮಿ ಭರ್ಜರಿ ಕ್ಯಾಂಪೇನ್​ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ನಿಖಿಲ್​​​, ಕ್ಷೇತ್ರದ ಪ್ರತಿ ಗ್ರಾಮಕ್ಕೂ ಕನೆಕ್ಟ್​​​ ಆಗುತ್ತಿದ್ದಾರೆ. ಬೊಂಬೆನಾಡನ್ನ ಜೆಡಿಎಸ್ ತೆಕ್ಕೆಗೆ ತೆಗೆದುಕೊಳ್ಳಲು ಮೊದಲ ದಿನವಾದ ನಿನ್ನೆ 16 ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ದು, ಖುದ್ದು ತಾವೇ ಜನರ ಬಳಿ ತೆರಳಿ ಮತಯಾಚಿಸುತ್ತಿದ್ದಾರೆ. ಇದೀಗ ಚಕ್ರವ್ಯೂಹ ಭೇದಿಸಲು ಅಭಿಮನ್ಯುಗೆ ಅರ್ಜುನನಂತೆ ಕುಮಾರಸ್ವಾಮಿ ಸಾಥ್ ಕೊಡಲು ಸಜ್ಜಾಗಿದ್ದಾರೆ. ಜೊತೆಗೆ ಮೈಸೂರು ಬಿಜೆಪಿ ಸಂಸದ ಯದುವೀರ್ ಒಡೆಯರ್ ಕೂಡ ದೋಸ್ತಿ ಜೊತೆ ಕೈ ಜೋಡಿಸಲಿದ್ದಾರೆ.
ಚನ್ನಪಟ್ಟಣದಲ್ಲಿ ದೋಸ್ತಿ ಪ್ರಚಾರ!
- ಚನ್ನಪಟ್ಟಣದ ಹೊಂಗನೂರು, ಮಳೂರು ವ್ಯಾಪ್ತಿಯಲ್ಲಿ ಪ್ರಚಾರ
- ಕೇಂದ್ರ ಸಚಿವ ಕುಮಾರಸ್ವಾಮಿ, ಸಂಸದ ಯದುವೀರ್ ಕ್ಯಾಂಪೇನ್
- ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಮತಬೇಟೆ
- ಬೆಳಗ್ಗೆ ಚನ್ನಪಟ್ಟಣದ ದೇವರಹೊಸಳ್ಳಿಯಿಂದ ಪ್ರಚಾರ ಆರಂಭ
- ನೀಲಕಂಠನಹಳ್ಳಿ, ಸುಣ್ಣಘಟ್ಟ, ಮೋಳೆದೊಡ್ಡಿ ಗ್ರಾಮ, ಕೂಡೂರು
- ಮಸಿಗೌಡನದೊಡ್ಡಿ, ನೀಲಸಂದ್ರ, ಕೋಡಿಪುರ, ಹೊಂಗನೂರು
- ಈ ಗ್ರಾಮಗಳಲ್ಲಿ ಪ್ರಚಾರ ನಡೆಸಲಿರುವ ಮೈತ್ರಿ ಪಕ್ಷದ ನಾಯಕರು
ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸೌಮ್ಯಾ ರೆಡ್ಡಿ ಪ್ರಚಾರ!
ಇತ್ತ ಶಿಗ್ಗಾಂವಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಕೊಂಚ ತಣ್ಣಗಾಗಿದೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಪರ ಪ್ರಚಾರ ಕಾರ್ಯ ಆರಂಭವಾಗಿದೆ. ಇವತ್ತು ಯಾಸೀರ್ ಪರ ಸೌಮ್ಯಾರೆಡ್ಡಿ ಪ್ರಚಾರ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಯನ್ನ ಸೋಲಿಸುವ ನಿಟ್ಟಿನಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಬ್ಬರದ ಕ್ಯಾಂಪೇನ್ ಮಾಡಲಿದ್ದಾರೆ.
ಇದನ್ನೂ ಓದಿ: PhDಗಾಗಿ ₹1 ಕೋಟಿಗೂ ಹೆಚ್ಚು ಖರ್ಚು.. ಹೇಳದೆ, ಕೇಳದೆ ಭಾರತೀಯ ವಿದ್ಯಾರ್ಥಿನ ತೆಗೆದು ಹಾಕಿದ ಆಕ್ಸ್‌ಫರ್ಡ್ ವಿವಿ
/newsfirstlive-kannada/media/post_attachments/wp-content/uploads/2024/10/NIKHLI_KUMARASWAMY.jpg)
ಇನ್ನುಳಿದಂತೆ ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಕೂಡಾ ಕ್ಯಾಂಪೇನ್ ನಡೆಸಲಿದ್ದು, ಬಿಜೆಪಿ ನಾಯಕರು ಅವರಿಗೆ ಸಾಥ್ ನೀಡಲಿದ್ದಾರೆ. ಇತ್ತ ಲಾಡ್ ಹಾಗೂ ತುಕಾರಾಂ ಟೀಂಗೆ ರಾಜಕೀಯ ಚೆಕ್‌ಮೆಟ್ ಇಡುತ್ತಿರುವ ಗಾಲಿ ಜನಾರ್ದನ ರೆಡ್ಡಿ, ಸಂಡೂರು ಕ್ಷೇತ್ರದಲ್ಲೂ ಆಪರೇಷನ್ ಕಮಲದ ಸದ್ದು ಎಬ್ಬಿಸಿದ್ದಾರೆ. ಕಾಂಗ್ರೆಸ್ ಅತೃಪ್ತ ಮುಖಂಡ ಸಂಪರ್ಕ ಮಾಡುತ್ತಿರುವ ರೆಡ್ಡಿ, ಗೌಪ್ಯವಾಗಿ ಕಾಂಗ್ರೆಸ್ ಮುಖಂಡರ ಸಂಪರ್ಕ ಕ್ರಾಂತಿ ಮಾಡುತ್ತಿದ್ದಾರೆ. ತುಕಾರಾಂ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ಕೆಲ ಕೈ ಮುಖಂಡರಲ್ಲಿ ಅಸಮಾಧಾನ ಇದೆ. ಇದನ್ನೇ ರೆಡ್ಡಿ ಆ್ಯಂಡ್​​ ಟೀಂ ಲಾಭ ಪಡೆಯಲು ಆ್ಯಕ್ಟಿವ್ ಆಗಿದೆ.
ಮಿನಿಸಮರದ ಕಣದಲ್ಲಿ ಪ್ರತಿಷ್ಠೆಯ ಫೈಟ್ ಜೋರಾಗಿದೆ. ಗೆಲುವಿನ ನಗಾರಿ ಬಾರಿಸಲೇಬೇಕು ಅಂತ 3 ಪಕ್ಷಗಳು ಜಿದ್ದಿಗೆ ಬಿದ್ದಿವೆ. ಚನ್ನಪಟ್ಟಣದಲ್ಲಿ ಅಸಲಿಯುದ್ಧವೇ ನಡೀತಿದೆ. ಆದ್ರೆ, ಮತದಾರ ಯಾರಿಗೆ ಮಣೆ ಹಾಕುತ್ತಾನೆ. ಉಪಯುದ್ಧದ ಸಿಹಿಯನ್ನ ಯಾರಿಗೆ ಉಣಬಡಿಸಲಿದ್ದಾನೆ ಅನ್ನೋದು ನವೆಂಬರ್ 23ರ ಫಲಿತಾಂಶದ ದಿನ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us