ಆಗಸ್ಟ್ 30 ರಂದು ಮೃತಪಟ್ಟ ವ್ಯಕ್ತಿಗೆ ನಿಫಾ ವೈರಸ್ ಖಚಿತ..!
ಮೃತ ವ್ಯಕ್ತಿ ಸಂಪರ್ಕದಲ್ಲಿದ್ದವರ ಸಂಖ್ಯೆಗೆ 130 ಜನ ಸೇರ್ಪಡೆ
ನಿಫಾ ವೈರಸ್ ಬಗ್ಗೆ ಸಚಿವೆ ವೀಣಾ ಜಾರ್ಜ್ ಹೇಳುವುದೇನು?
ತಿರುವನಂತಪುರಂ: ಕೇರಳದಲ್ಲಿ ನಿಫಾ ವೈರಸ್ ಕ್ಷಣ, ಕ್ಷಣಕ್ಕೂ ಆತಂಕ ಹೆಚ್ಚಿಸುತ್ತಿದೆ. ವೈರಸ್ ಅಟ್ಟಹಾಸ ಮೆರೆಯುತ್ತಿರುವ ಕಾರಣ ಕೋಝಿಕ್ಕೋಡ್ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಒಂದು ವಾರ ರಜೆ ಘೋಷಣೆ ಮಾಡಲಾಗಿದೆ. ಮುಂದಿನ ಭಾನುವಾರ (ಸೆ.24) ದವರೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲಾಗಿದೆ.
ಸೆಪ್ಟೆಂಬರ್ 24ರವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ತರಗತಿಗಳನ್ನು ನಡೆಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಆಗಸ್ಟ್ 30 ರಂದು ಸಾವನ್ನಪ್ಪಿರುವ ವ್ಯಕ್ತಿಗೆ ನಿಫಾ ವೈರಸ್ ಇರುವುದು ಖಚಿತ ಪಡಿಸಲಾಗಿದೆ. ಮೃತನ ಸಂಪರ್ಕದಲ್ಲಿರುವವರ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ಈಗಾಗಲೇ ಜಿಲ್ಲೆಯಲ್ಲಿ 1080 ಜನರು ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು ಇಂದು 130 ಜನ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಅಲ್ಲದೇ ಪಟ್ಟಿಯಲ್ಲಿ 327 ನರ್ಸ್ ಸೇರಿ ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ ನಿಫಾ, ಮಹಾರಾಷ್ಟ್ರದಲ್ಲಿ ಝಿಕಾ.. ಮತ್ತೆ ಆತಂಕ ಹೆಚ್ಚಿಸಿದ ವೈರಸ್; ದೇಶಾದ್ಯಂತ ವ್ಯಾಪಕ ಕಟ್ಟೆಚ್ಚರ
ಆಸ್ಟ್ರೇಲಿಯಾದ ಸಹಾಯ ಕೇಳಿದ ಭಾರತ
ಸದ್ಯ ಜಗತ್ತಿನಲ್ಲಿ ನಿಫಾ ವೈರಸ್‌ಗೆ ಯಾವುದೇ ಔಷಧ, ಚಿಕಿತ್ಸೆಗಳಿಲ್ಲ. ಸದ್ಯಕ್ಕೆ ಈ ಮೋನೋಕ್ಲೋನಲ್ ಆ್ಯಂಟಿಬಾಡಿಯನ್ನು ಬಳಸಲಾಗುತ್ತಿದ್ದು ವಿಶ್ವದ 14 ಜನರಿಗೆ ಮಾತ್ರ ಇದನ್ನು ನೀಡಲಾಗಿದೆ. ಅವರೆಲ್ಲ ಆರೋಗ್ಯವಾಗಿರುವ ಕಾರಣ ಭಾರತವು ಆಸ್ಟ್ರೇಲಿಯಾದ ಮೊರೆ ಹೋಗಿದೆ. ಈ ಆ್ಯಂಟಿಬಾಡಿ ಮೊದಲ ಹಂತದ ಪ್ರಯೋಗಾಲಯದಲ್ಲಿದೆ. ಭಾರತಕ್ಕೆ ರವಾನೆ ಮಾಡಿಕೊಂಡ ಬಳಿದ ನಿಫಾ ಸೋಂಕಿತ ರೋಗಿಗಳಿಗೆ ನೀಡುವುದು, ಬಿಡುವುದು ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ್ದಾಗಿದೆ. ಪ್ರತಿ ವ್ಯಕ್ತಿಗೆ 2 ಡೋಸ್ ನೀಡಬೇಕು ಎಂದು ಐಸಿಎಂಆರ್ ನಿರ್ದೇಶಕ ಡಾಕ್ಟರ್ ರಾಜೀವ್ ಬಹಲ್ ಹೇಳಿದ್ದಾರೆ. ನಿಫಾ ವೈರಸ್ ದೇಶದಲ್ಲಿ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ 20 ಡೋಸ್ ಮೋನೋಕ್ಲೋನಲ್ ಆ್ಯಂಟಿಬಾಡಿ ನೀಡುವಂತೆ ಆಸ್ಟ್ರೇಲಿಯಾಕ್ಕೆ, ಭಾರತ ಮನವಿ ಮಾಡಿದೆ.
ನಿಫಾ ವೈರಸ್ನಿಂದ ಮೃತಪಟ್ಟವರ ಸಂಖ್ಯೆ ಶೇ.40 ರಿಂದ ಶೇ.70 ರಷ್ಟಿದೆ. ಇದು ಕೊರೊನಾ ವೈರಸ್ಗಿಂತ ಶೇ.2 ರಿಂದ 3 ರಷ್ಟು ಹೆಚ್ಚಿದ್ದು ಕೊರೊನಾಗಿಂತ ಹೆಚ್ಚು ಡೇಂಜರ್ ಆಗಿದೆ. ಸದ್ಯ ಮೋನೋಕ್ಲೋನಲ್ ಆ್ಯಂಟಿಬಾಡಿ ಭಾರತದಲ್ಲಿ ಕೇವಲ 10 ಡೋಸ್ ಮಾತ್ರವಿದೆ. ಇದು ಮನುಷ್ಯರಿಗೆ ಸುರಕ್ಷಿತ ಎಂದು ಹೇಳಲಾಗಿದ್ದು ಪರಿಣಾಮಕಾರಿಯೇ ಎಂಬುದು ಖಚಿತವಾಗಿಲ್ಲ. ಇದನ್ನು ಆಸ್ಟ್ರೇಲಿಯಾದಲ್ಲಿ ಬಾವಲಿಗಳಿಂದ ಬರುವ ಹೆಂಡ್ರಾ ಎನ್ನುವ ವೈರಸ್‌ಗೆ ನೀಡುತ್ತಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ