Advertisment

ದುಬಾರಿ ರೋಲ್ಸ್​​ ರಾಯ್ಸ್​ ಕಾರ್​​ ಖರೀದಿಸಿದ ನೀತಾ ಅಂಬಾನಿ; ಅಬ್ಬಬ್ಬಾ! ಇದರ ಬೆಲೆ ಎಷ್ಟು ಗೊತ್ತಾ?

author-image
Bheemappa
Updated On
ದುಬಾರಿ ರೋಲ್ಸ್​​ ರಾಯ್ಸ್​ ಕಾರ್​​ ಖರೀದಿಸಿದ ನೀತಾ ಅಂಬಾನಿ; ಅಬ್ಬಬ್ಬಾ! ಇದರ ಬೆಲೆ ಎಷ್ಟು ಗೊತ್ತಾ?
Advertisment
  • ಸೀಟ್​ಗಳ ಮೇಲೆ ತನ್ನ ಮತ್ತು ಪತಿಯ ಹೆಸರು ಹಾಕಿಸಿದ ನೀತಾ
  • ಕಾರಿನ ಮುಂಭಾಗದ ಲಾಂಛನವನ್ನು ಚಿನ್ನದಿಂದ ಮಾಡಲಾಗಿದೆ
  • ಅಂಬಾನಿ ಫ್ಯಾಮಿಲಿಯಲ್ಲಿ ಯಾವ್ಯಾವ ಐಷಾರಾಮಿ ಕಾರುಗಳಿವೆ?

ಭಾರತದ ಅಗರ್ಭ ಶ್ರೀಮಂತ ಮುಖೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಅವರು 12 ಕೋಟಿ ಮೊತ್ತದ ಹೊಸ ರೋಲ್ಸ್ ರಾಯ್ಸ್ ಫ್ಯಾಂಟಮ್ VIII EWB ಕಾರನ್ನು ಖರೀದಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಸಾವಿರ ಕೋಟಿ ಮೊತ್ತದಲ್ಲಿ ಕಿರಿಯ ಪುತ್ರನ ಮದುವೆ ಮಾಡಿದ್ದ ಅಂಬಾನಿ ಫ್ಯಾಮಿಲಿಗೆ ಇದೀಗ ಹೊಸ ಅತಿಥಿ ಬಂದಂತೆ ಆಗಿದೆ.

Advertisment

ಲೈಟ್​ ಗುಲಾಬಿ ಸ್ಫಟಿಕ ಬಣ್ಣದ ರೋಲ್ಸ್ ರಾಯ್ಸ್ ಫ್ಯಾಂಟಮ್ VIII EWB ಕಾರು ಭಾರತದಲ್ಲೇ ಅತ್ಯಂತ ಐಷಾರಾಮಿ ಕಾರು ಆಗಿದೆ. ಇದರ ಬೆಲೆ 12 ಕೋಟಿ ರೂಪಾಯಿಗಳು ಆಗಿದೆ. ಇದರೊಗಿನ ಸೀಟ್​ಗೆ ಎನ್​ಎಂಎ ಅಂದು ಬರೆಯಾಲಾಗಿದ್ದು ಇದು ‘ನೀತಾ ಮುಖೇಶ್ ಅಂಬಾನಿ’ ಎಂದು ಸೂಚಿಸುತ್ತದೆ. ಕಾರಿನ ಮುಂಭಾಗದಲ್ಲಿ ಸಿಂಬಲ್​ ರೀತಿಯಲ್ಲಿರುವ 'ಸ್ಪಿರಿಟ್ ಆಫ್ ಎಕ್ಸ್‌ಟಸಿ' ಲಾಂಛನ ಚಿನ್ನದಲ್ಲಿದೆ ಎಂದು ಹೇಳಲಾಗಿದೆ. ಸದ್ಯ ಇದರ ವಿಡಿಯೋ, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್.. ಎಲೆಕ್ಷನ್​ ಕಮಿಷನ್ ನೋಟಿಸ್

publive-image

ಇದನ್ನೂ ಓದಿ: ಮಲೈಕಾ ಅರೋರಾ ಹಾಟ್‌ & ವರ್ಕೌಟ್​ ವಿಡಿಯೋ ವೈರಲ್; ಈ ಬ್ಯೂಟಿ ವಯಸ್ಸೆಷ್ಟು?

Advertisment

ಅಂಬಾನಿ ಕುಟುಂಬದಲ್ಲಿ ಐಷಾರಾಮಿ ಕಾರು ಇದೊಂದೆ ಅಲ್ಲ. ಈ ಹಿಂದೆಯು ಅವರು ಇಂತಹ ಹೈಕ್ಲಾಸ್ ಕಾರುಗಳನ್ನು ಖರೀದಿ ಮಾಡಿದ್ದಾರೆ. ಕಳೆದ ವರ್ಷ ದೀಪಾವಳಿ ಹಬ್ಬದಂದು ಮುಖೇಶ್ ಅಂಬಾನಿಯವರು ಪತ್ನಿಗೆ ಕಪ್ಪು ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದು ಅಲ್ಲದೇ ಫೆರಾರಿ ಪುರೋಸಾಂಗ್ಯೂ, ಮರ್ಸಿಡೆಸ್ ಬೆಂಜ್ ಎಸ್ ಕ್ಲಾಸ್, ಲೆಟೆಸ್ಟ್​ ಆಗಿ ಮಾರ್ಕೆಟ್​ಗೆ ಬಂದಿರುವ ರೇಂಜ್ ರೋವರ್ LWB ಸೇರಿ ಇನ್ನು ಹಲವಾರು ಕಾಸ್ಟಲಿ ಕಾರುಗಳನ್ನು ಹೊಂದಿದ್ದಾರೆ. ಈ ಎಲ್ಲದರಲ್ಲಿ ಸದ್ಯ ಇದೀಗ ಖರೀದಿ ಮಾಡಿರುವ ಕಾರು ಅತ್ಯಂತ ದುಬಾರಿ ಕಾರು ಎಂದು ಹೇಳಲಾಗುತ್ತಿದೆ. ಅಲ್ಲದೇ ಭಾರತದಲ್ಲಿ ಇದೇ ಫಸ್ಟ್ ಕಾರು ಎಂದು ಕೂಡ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment