ಗುಡ್‌ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ, ನಿವೇದಿತಾ ಜೋಡಿ.. ವಿಚ್ಛೇದನದ ಬಳಿಕ ಹೊಸ ಜೀವನ ಆರಂಭ

author-image
admin
Updated On
ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್​ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?
Advertisment
  • ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದ ಇಬ್ಬರೂ
  • ಚಂದನ್ ಶೆಟ್ಟಿ, ನಿವೇದಿತಾ ಗೌಡ ಸ್ಟಾರ್ ಜೋಡಿಯಿಂದ ಹೊಸ ಹೆಜ್ಜೆ
  • ವಿಚ್ಛೇದನದ ಬಳಿಕ ಚಂದನ್‌ಗೆ ಮುದ್ದು ರಾಕ್ಷಸಿಯಾದ ನಿವೇದಿತಾ ಗೌಡ!

ಕನ್ನಡದ ಱಪ್ ಸಿಂಗರ್ ಚಂದನ್ ಶೆಟ್ಟಿ ಹಾಗೂ ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಡಿವೋರ್ಸ್‌ ಹಾಕಿ ಸಖತ್ ಸುದ್ದಿಯಾಗಿದ್ದರು. ಇದಾದ ಮೇಲೆ ಒಂದಲ್ಲಾ ಒಂದು ವಿಚಾರಕ್ಕೆ ಗಾಸಿಪ್ ಆಗೋ ಈ ಜೋಡಿ ಹೊಸ ಅವತಾರದಲ್ಲಿ ಹೊಸ ಜೀವನ ಆರಂಭಿಸಿದ್ದಾರೆ.

ಇದನ್ನೂ ಓದಿ: ದರ್ಶನ್‌ ಫ್ಯಾನ್ಸ್‌ಗೆ ಬಿಸಿ, ಬಿಸಿ ಕಜ್ಜಾಯ.. ಪೊಲೀಸರ ಲಾಠಿ ಚಾರ್ಜ್‌ಗೆ ಕರಿಯನ ಹುಡುಗರು ಚೆಲ್ಲಾಪಿಲ್ಲಿ!  

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಬದುಕು ಅಂತ್ಯ ಕಂಡಿದೆ. ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಈ ಸ್ಟಾರ್ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಡಿವೋರ್ಸ್‌ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಖುದ್ದು ಚಂದನ್, ನಿವೇದಿತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದೂರ ದೂರ ಆಗಿದ್ದಾರೆ. ದಾಂಪತ್ಯ ಕಲಹ, ವಿಚ್ಛೇದನದ ಜಂಜಾಟದಿಂದ ಹೊರ ಬಂದಿರುವ ಇಬ್ಬರು ತಮ್ಮ ಕೆರಿಯರ್‌ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.

publive-image

ಇಬ್ಬರು ಬೇರೆ, ಬೇರೆ ಆದರೂ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಬ್ಬರನ್ನೊಬ್ಬರು ಬಿಟ್ಟು ಕೊಡಲ್ಲ. ಇದಕ್ಕೆ ಸಾಕ್ಷಿಯಾಗಿರೋದು ಹೊಸ ಸಿನಿಮಾ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಒಟ್ಟಿಗೆ ಒಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್‌ನಲ್ಲಿ ಈ ಚಿತ್ರ ಮೂಡಿ ಬರುತ್ತಾ ಇದ್ದು, ಪುನೀತ್ ಶ್ರೀನಿವಾಸ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮತ್ತೆ ಒಂದಾದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಕ್ಯೂಟ್‌ ಜೋಡಿ; ಏನಿದು ಹೊಸ ಸುದ್ದಿ? 

ಚಂದನ್ ಶೆಟ್ಟಿ, ನಿವೇದಿತಾ ಗೌಡ ಅಭಿನಯದ ಹೊಸ ಸಿನಿಮಾದ ಪೋಸ್ಟರ್ ಇಂದು ರಿಲೀಸ್ ಆಗಿದೆ. ವಿಚ್ಛೇದನದ ಬಳಿಕ ಚಂದನ್ ಶೆಟ್ಟಿಗೆ ಈಗ ನಿವೇದಿತಾ ಮುದ್ದು ರಾಕ್ಷಸಿ ಆಗಿದ್ದಾರೆ. ಚಂದನ್ ಶೆಟ್ಟಿ - ನಿವೇದಿತಾ ಗೌಡ ನಟನೆಯ ಸಿನಿಮಾ ಪೋಸ್ಟರ್ ರಿಲೀಸ್ ಆಗಿದೆ.

publive-image

ಮುದ್ದು ರಾಕ್ಷಸಿ ಸಿನಿಮಾಗೆ ಈ ಹಿಂದೆ ಕ್ಯಾಂಡಿಕ್ರಶ್ ಅಂತ ಹೆಸರಿಡಲಾಗಿತ್ತು. ಇದೀಗ ಮುದ್ದುರಾಕ್ಷಸಿ ಟೈಟಲ್ ಫೈನಲ್ ಮಾಡಲಾಗಿದೆ. ವಿಚ್ಛೇದನಕ್ಕೂ ಮುನ್ನವೇ ಈ ಸಿನಿಮಾದ ಶೂಟಿಂಗ್‌ನಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಬ್ಯುಸಿಯಾಗಿದ್ದರು. ಡಿವೋರ್ಸ್ ಬಳಿಕವೂ ಒಟ್ಟಿಗೆ ಅಭಿನಯಿಸಿರುವ ಈ ಜೋಡಿ ಇದೀಗ ಮುದ್ದು ರಾಕ್ಷಸಿ ಸಿನಿಮಾದ ಪ್ರಮೋಷನ್ ಆರಂಭಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment