/newsfirstlive-kannada/media/post_attachments/wp-content/uploads/2024/06/Niveditha-Gowda.jpg)
ಮೈಸೂರು: ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್​ ಪ್ರಕರಣ ಬೆನ್ನಲ್ಲೇ ನಿವೇದಿತಾ ಗೌಡರವರ ಮನೆ ಖಾಲಿಯಾಗಿದೆ. ಘಟನೆ ಬಳಿಕ ಕುಟುಂಬಸ್ಥರು ಮನೆಯಿಂದ ಹೊರ ಹೋಗಿದ್ದಾರೆ ಎನ್ನಲಾಗುತ್ತಿದೆ.
ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿ ನಿವೇದಿತಾ ಗೌಡ ಫ್ಯಾಮಿಲಿ ವಾಸವಿದ್ದು, ಇದೀಗ ಮನೆಗೆ ವಾಪಸ್ ಬರಲು ನಿವೇದಿತಾ ಪೋಷಕರ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಮಾಹಿತಿ ಪ್ರಕಾರ ಮನೆಯವರು ನಿನ್ನೆಯಿಂದ ಬೀಗ ಹಾಕಿದ್ದಾರೆ ಎನ್ನಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/06/Chandan-Shetty-1-1.jpg)
ನಿವೇದಿತಾ ತಂದೆ ರಮೇಶ್, ತಾಯಿ ಹೇಮ ನಿನ್ನೆ ಮಧ್ಯಾಹ್ನದವರಗೆ ಮನೆಯಲ್ಲಿದ್ದರು. ಆದರೆ ಮಧ್ಯಾಹ್ನದ ಬಳಿಕ ಮನೆಗೆ ಬೀಗಹಾಕಿದ್ದಾರೆ.
ಇದನ್ನೂ ಓದಿ: VIDEO: ‘ಚಂದನ್, ನಿವೇದಿತಾ ಬಗ್ಗೆ ಹರಿದಾಡ್ತಿರೋ ಸುದ್ದಿಯೆಲ್ಲಾ ಸುಳ್ಳು’- ಹೊಸ ಟ್ವಿಸ್ಟ್ ಕೊಟ್ಟ ಆಪ್ತರು
ಡಿವೋರ್ಸ್​ಗೂ ಮುನ್ನ ಅಂದರೆ ವಾರದ ಹಿಂದಷ್ಟೆ ಚಂದನ್ ಜೊತೆ ನಿವೇದಿತಾ ಗೌಡ ಮನೆಗೆ ಬಂದಿದ್ದರು. ಆದರೆ ನಿನ್ನೆ ಈ ಕ್ಯೂಟ್​ ಕಪಲ್​ ವಿಚ್ಛೇದನ ಪಡೆಯುವ ಮೂಲಕ ದೂರ ದೂರವಾಗಿದ್ದಾರೆ. ಹೀಗಾಗಿ ನಿವೇದಿತಾ ಕುಟುಂಬ ಮಾಧ್ಯಮದವರಿಂದ ಅಂತರ ಕಾಯ್ದುಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/06/niveditha2.jpg)
ಇದನ್ನೂ ಓದಿ: ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್.. ಕೋರ್ಟ್​ನಲ್ಲಿ ಸ್ಟಾರ್ ಜೋಡಿ ಕೊಟ್ಟ ಹೇಳಿಕೆ ಏನು..?
ಅತ್ತ ನಿವೇದಿತಾ ಪೋಷಕರು ಆಪ್ತರ ಕರೆಗೂ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಮೊಬೈಲ್ ಫೋನ್ ಗಳನ್ನ ಸ್ವಿಚ್ ಆಫ್ ಮಾಡಿಕೊಂಡಿದ್ದು, ಮೌನಕ್ಕೆ ಜಾರಿದ್ದಾರೆ. ನಮ್ಮ ಪಾಡಿಗೆ ನಾವಿರಲು ಬಿಡಿ ಅಂತ ಅತ್ಯಾಪ್ತರ ಜೊತೆ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us