/newsfirstlive-kannada/media/post_attachments/wp-content/uploads/2024/06/Chandan-Shetty-Nivedita-Gowda-2.jpg)
ಬೆಂಗಳೂರು: ಚಂದನವನದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ತಮ್ಮ ದಾಂಪತ್ಯ ಜೀವನಕ್ಕೆ ಫುಲ್​ಸ್ಟಾಪ್ ಇಟ್ಟಿದ್ದಾರೆ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಥರದ ಸುದ್ದಿಗಳನ್ನು ಪೋಸ್ಟ್​ ಮಾಡಲಾಗುತ್ತಿದೆ. ಹೀಗಾಗಿ ಈ ಸಂಬಂಧ ಚಂದನ್ ಶೆಟ್ಟಿ, ನಿವೇದಿತಾ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಎಂಎಂಬಿ ಲೆಗಸಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಚಂದನ್ ಶೆಟ್ಟಿ ಅವರು, ನಾನು ಬೆಳೆದ ರೀತಿನೇ ಬೇರೆ. ನಿವೇದಿತಾ ಅವರ ಜೀವನಶೈಲಿನೇ ಬೇರೆ. ಹೀಗಾಗಿ ಇಬ್ಬರು ಅರ್ಥ ಮಾಡಿಕೊಂಡಿರೋ ರೀತಿನೇ ಬೇರೆ ಇದೆ. ಇಬ್ಬರ ಜೀವನ ಶೈಲಿ ಬೇರೆ ಇದ್ದಿದ್ದರಿಂದ ವರ್ಷಗಳು ಕಳೆದರೂ ನಮ್ಮಲ್ಲಿ ಹೊಂದಾಣಿಕೆಯಾಗಲಿಲ್ಲ. ಈ ಕಾರಣಕ್ಕಾಗಿ ವಿಚ್ಛೇದನ ಪಡೆದುಕೊಂಡಿದ್ದೇವೆ. ನಮ್ಮ ಮಧ್ಯೆ ದ್ವೇಷ, ವೈಮನಸ್ಸು ಯಾವುದು ಇಲ್ಲ. ನಾವಿಬ್ಬರು ಖುಷಿಯಾಗಿ ಇರಬೇಕು ಅಂದ್ರೆ, ವಿಚ್ಚೇದನ ಬೇಕಿತ್ತು. ಅದನ್ನು ಕಾನೂನು ರೀತಿಯಲ್ಲಿ ಪಡೆದುಕೊಂಡಿದ್ದೇವೆ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/06/CHANDAN_SHETTY_VINEDITHA_5.jpg)
ಮಕ್ಕಳು ಮಾಡಿಕೊಳ್ಳುವ ವಿಷ್ಯಕ್ಕೆ ಜಗಳ ಮಾಡಿಕೊಂಡು ಬೇರೆ ಬೇರೆ ಆದರು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ನಾವು ಮಕ್ಕಳು ಮಾಡಿಕೊಳ್ಳುವ ವಿಚಾರಕ್ಕೆ ಜಗಳ ಮಾಡಿಕೊಂಡು ಬೇರೆ ಬೇರೆ ಆಗಿಲ್ಲ. ಈಗಲೇ ಮಕ್ಕಳು ಮಾಡಿಕೊಳ್ಳುವ ಐಡಿಯಾ ನಮ್ಮಿಬ್ಬರಲ್ಲೂ ಇರಲಿಲ್ಲ. ನಿವೇದಿತಾ ಅವರು ಇಂಡಿಪೆಂಡೆಂಟ್ ಮಹಿಳೆ. ಅವರ ಖರ್ಚು ಅವರೇ ಸರಿದೂಗಿಸಿಕೊಳ್ಳುತ್ತಾರೆ. ಆದರೆ ನಾವು ಸಹಮತದಿಂದ ಒಪ್ಪಿಕೊಂಡು ಬೇರೆಯಾಗಿದ್ದೇವೆ ವಿನಹ, ಮಕ್ಕಳ ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ ಮಾಡಿ ಡಿವೋರ್ಸ್​ ಪಡೆದಿಲ್ಲ ಎಂದು ಚಂದನ್ ಶೆಟ್ಟಿಯವರು ಸ್ಪಷ್ಟನೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us