Advertisment

ಮೂರನೇ ವ್ಯಕ್ತಿ ವಿಚಾರ ಕೇಳಿ ಬಂದ ಕೂಡಲೇ ನಾನೇ ಅವರಿಗೆ ಕಾಲ್ ಮಾಡಿದೆ’ -ನಿವೇದಿತಾ ಹೇಳಿದ್ದೇನು?

author-image
Bheemappa
Updated On
ಕೊನೆಗೂ ಡಿವೋರ್ಸ್​ ಬಗ್ಗೆ ಮೌನಮುರಿದ ಚಂದನ್​ ಶೆಟ್ಟಿ.. ನಿವೇದಿತಾ ಬಗ್ಗೆ ಏನಂದ್ರು?
Advertisment
  • ಆ 3ನೇ ವ್ಯಕ್ತಿ ಯಾರು ಎಂಬುದರ ಬಗ್ಗೆ ನಿವೇದಿತಾ ಗೌಡ ಏನಂದ್ರು?
  • ಬೆಂಗಳೂರಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಮಾಧ್ಯಮಗೋಷ್ಠಿ
  • ಮದುವೆ ಆಗಿ 4 ವರ್ಷಗಳ ನಂತರ ವಿಚ್ಛೇದನ ಪಡೆದ​ ಬ್ಯೂಟಿ ಕಪಲ್ಸ್

ಬೆಂಗಳೂರು: ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ತಮ್ಮ ದಾಂಪತ್ಯ ಜೀವನಕ್ಕೆ ಕಾನೂನು ರೀತಿಯಲ್ಲಿ ಅಂತ್ಯವಾಡಿದ್ದಾರೆ. ಆದ್ರೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಸದ್ಯ ಈ ಸಂಬಂಧ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಎಂಎಂಬಿ ಲೆಗಸಿಯಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

Advertisment

ಇದನ್ನೂ ಓದಿ:ಮಾಜಿ ಪತ್ನಿ ನಿವೇದಿತಾ ಬಗ್ಗೆ ಹೇಳಿದ್ದೇನು.. ಡಿವೋರ್ಸ್​​ ಕುರಿತು ಅಸಲಿ‌ ಕಾರಣ ಬಿಚ್ಚಿಟ್ಟ ಚಂದನ್ ಶೆಟ್ಟಿ

ಚಂದನ್ ಶೆಟ್ಟಿ ಬಳಿಕ ಮಾತನಾಡಿದ ನಿವೇದಿತಾ ಗೌಡ ಅವರು, ನಮ್ಮಿಬ್ಬರ ಮಧ್ಯೆ ಸರಿಯಾದ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ನಮ್ಮಿಬ್ಬರ ಕಾನ್​ಫ್ಲಿಕ್ಟ್ ಆಗುತ್ತಿತ್ತು. ಈಗ ಸೋಶಿಯಲ್ ಮೀಡಯಾದಲ್ಲಿ ಹರಿದಾಡುತ್ತಿರೋ ವದಂತಿಗಳೆಲ್ಲ ಫೇಕ್. ನಮ್ಮಿಬ್ಬರ ಮಧ್ಯೆ 3ನೇ ವ್ಯಕ್ತಿ ಬಂದಿರೋ ವಿಚಾರವೆಲ್ಲ ಸುಳ್ಳು. ಯಾರು ಇವುಗಳನ್ನು ನಂಬಲೇಬಾರದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡಿವೋರ್ಸ್​ ಬಗ್ಗೆ ಸ್ಪಷ್ಟನೆ ಕೊಡ್ತಾರಾ ಚಂದನ್ ಶೆಟ್ಟಿ- ನಿವೇದಿತಾ.. ಇಂದು ಸಂಜೆ ಬಿಗ್ ಅಪ್​ಡೇಟ್​

Advertisment

publive-image

ಆ 3ನೇ ವ್ಯಕ್ತಿ ಮನೆಗೆ ನಾನು ಹೋಗಿದ್ದೀನಿ. ಅವರು ನಮಗೆ ಫ್ಯಾಮಿಲಿ ಥರಾ.‌ ಅವರದ್ದು ದೊಡ್ಡ ಮನೆ. ನಾವಿಬ್ಬರು ಅವರ ಮನೆಗೆ ಸಾಕಷ್ಟು ಬಾರಿ ಹೋಗಿದ್ದೀವಿ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರೋದು ವಿಕೃತಿ ಅನ್ನಿಸುತ್ತಿದೆ. ಅವರ ಮನೇಲಿ ಯಾವುದೇ ಕಾರ್ಯಕ್ರಮ ಆದರೂ ನಾವು ಒಟ್ಟಿಗೆ ಹೋಗುತ್ತಿದ್ದೇವು. ಅವ್ರಿಗೂ ಫ್ಯಾಮಿಲಿ ಇದೆ ಅನ್ನೋದನ್ನು ಮರಿಬೇಡಿ. ಯಾವುದೋ ಫೋಸ್ಟ್ ನೋಡಿ ಈ ಥರಾ ಮಾಡಬೇಡಿ. ಇಂಪ್ಯಾಕ್ಟ್ ನಾನು ಅವ್ರಿಗೆ ಕಾಲ್ ಮಾಡಿ ಕೇಳಿದ್ದೆ. ಅವ್ರಿಬ್ಬರು ನಮಗೆ ಧೈರ್ಯ ತುಂಬಿದರು ಎಂದು ನಿವೇದಿತಾ ಗೌಡ ಅವರು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment