/newsfirstlive-kannada/media/post_attachments/wp-content/uploads/2024/07/niveditha7.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್, ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ಮೂಲಕ ನಿವೇದಿತಾ ಗೌಡ ಅವರು ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಆಗಾಗ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿ ಇರುತ್ತಿದ್ದರು.
/newsfirstlive-kannada/media/post_attachments/wp-content/uploads/2024/06/nivedita2.jpg)
ಇದನ್ನೂ ಓದಿ: ಚಂದನ್ ಶೆಟ್ಟಿ-ನಿವೇದಿತಾ ಗೌಡ ಕುರಿತ ಮತ್ತೊಂದು ಅಪ್​ಡೇಟ್ಸ್.. ಮತ್ತೆ ಪ್ರೂವ್ ಮಾಡಿದ ಜೋಡಿ..!
ಕೆಲವು ದಿನಗಳ ಹಿಂದೆ ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದಾಂಪತ್ಯ ಬದುಕು ಅಂತ್ಯ ಹಾಡಿದ್ದರು. ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಸ್ಟಾರ್ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದರು. ಡಿವೋರ್ಸ್ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಖುದ್ದು ಚಂದನ್, ನಿವೇದಿತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದೂರ ದೂರ ಆಗಿದ್ದಾರೆ.
View this post on Instagram
ಚಂದನ್​ ಶೆಟ್ಟಿಯಿಂದ ಡಿವೋರ್ಸ್ ಪಡೆದ ಬಳಿಕ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟಿವ್ ಆಗಿದ್ದಾರೆ. ಈಗ ಇನ್​ಸ್ಟಾಗ್ರಾಮ್​​​ ಖಾತೆಯಲ್ಲಿ ಹೊಸ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ಕೆಲ ಅಭಿಮಾನಿಗಳು ಖುಷ್ ಆಗಿದ್ದಾರೆ. ಜೊತೆಗೆ ಇನ್ನೂ ಕೆಲವರು ಚಂದನ್​ ಶೆಟ್ಟಿ ನೆನೆಪು ಕಾಡುತ್ತಿದ್ದೇಯಾ, ಹೇಗೆ ನೀವು ಅದನ್ನೇಲ್ಲಾ ಮರೆತು ಹೋಗಿದ್ದೀರಾ ಅಂತೆಲ್ಲಾ ನೆಟ್ಟಿಗರು ಕಾಮೆಂಟ್ಸ್​ ಹಾಕಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us