newsfirstkannada.com

ಬೆಂಗಳೂರಿಗರೇ ಎಚ್ಚರ! ಇಂದು ರಾತ್ರಿ ಭರ್ಜರಿ ಮಳೆ.. ಈ ಏರಿಯಾಗಳಲ್ಲಿ ಕರೆಂಟ್​ ಡೌಟ್​​!

Share :

Published May 13, 2024 at 10:42pm

Update May 13, 2024 at 10:43pm

    ಕಳೆದ ಒಂದು ತಿಂಗಳಿನಿಂದ ರಣಬಿಸಿಲಿಗೆ ಕಂಗೆಟ್ಟ ರಾಜ್ಯದ ಜನ

    ಆದಷ್ಟು ಬೇಗ ಮಳೆಯಾಗಲಿ ಎಂದಿದ್ದ ಜನರಿಗೆ ಭರ್ಜರಿ ಗುಡ್​ನ್ಯೂಸ್​​

    ಮಳೆ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

ಬೆಂಗಳೂರು: ಕಳೆದೊಂದು ತಿಂಗಳಿನಿಂದ ಭಾರೀ ಬಿಸಿಲಿಗೆ ಸಿಲಿಕಾನ್​ ಸಿಟಿ ಮಂದಿ ಬೆಂದು ಹೋಗಿದ್ದರು. ಈ ಮಧ್ಯೆ ರಾಜಧಾನಿ ಜನರಿಗೆ ರಾಜ್ಯ ಹವಾಮಾನ ಇಲಾಖೆ ಗುಡ್​ನ್ಯೂಸ್​ ನೀಡಿತ್ತು. ಕಳೆದ ಮೂರು ದಿನಗಳಿಂದಲೂ ಬೆಂಗಳೂರಲ್ಲಿ ಭರ್ಜರಿ ಮಳೆಯಾಗಿದ್ದು, ಇಂದು ಕೂಡ ರಾತ್ರಿ ವರುಣನ ಆರ್ಭಟ ಜೋರಾಗಿ ಇರಲಿದೆ ಎಂದು ತಿಳಿಸಿದೆ.

ರಾಜಧಾನಿ ಬೆಂಗಳೂರಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಲೇ ಇದೆ. ಯಾವಾಗಲೂ ಮಳೆಯಿಂದ ದಾಖಲೆ ಬರೆಯುತ್ತಿದ್ದ ಬೆಂಗಳೂರು ಈಗ ಬಿಸಿಲಿನ ವಿಚಾರದಲ್ಲೂ ರೆಕಾರ್ಡ್​​​ ಕ್ರಿಯೇಟ್​ ಮಾಡುತ್ತಿದೆ. ಮಳೆಗಾಗಿ ಕಾಯುತ್ತಿರೋ ಬೆಂಗಳೂರು ಮಂದಿಗೆ ಮೂರು ದಿನಗಳಿಂದ ವರುಣನ ದರ್ಶನವಾಗಿದೆ.

ಈ ವಾರ ಪೂರ್ತಿ ಬೆಂಗಳೂರಲ್ಲಿ ಭಾರೀ ಮಳೆಯಾಗಲಿದೆ. ಮೇ 15 ರವರೆಗೆ ಬೆಂಗಳೂರಲ್ಲಿ ಮಳೆ ಮುನ್ಸೂಚನೆ ಇದೆ. ನಾಳೆಯಿಂದ ಕೆಲವು ಜಿಲ್ಲೆಗಳಲ್ಲಿ ಮಳೆಯಾದರೆ, ಬೆಂಗಳೂರಲ್ಲೂ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಷ್ಟೇ ಬೆಂಗಳೂರಿನ ಎಲ್ಲೆಡೆ ರಾತ್ರಿ 10 ಗಂಟೆ ಮೇಲೆ ವಿದ್ಯುತ್​ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಕೆಆರ್​ ಮಾರುಕಟ್ಟೆ, ಜೆಸಿ ರಸ್ತೆ, ಮೆಜೆಸ್ಟಿಕ್, ಗಿರಿನಗರ, ಶ್ರೀನಿವಾಸನಗರ, ಹೊಸಕೆರೆಹಳ್ಳಿ, ರಾಜರಾಜೇಶ್ವರಿ ನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕರೆಂಟ್​ ಇರಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಆರ್​​​ಸಿಬಿಗೆ ಮತ್ತೊಂದು ಆಘಾತ​.. ವಿಲ್​​ ಜಾಕ್ಸ್​ ಬೆನ್ನಲ್ಲೇ ಕೈಕೊಟ್ಟ ಮತ್ತೋರ್ವ ಸ್ಟಾರ್​ ಪ್ಲೇಯರ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿಗರೇ ಎಚ್ಚರ! ಇಂದು ರಾತ್ರಿ ಭರ್ಜರಿ ಮಳೆ.. ಈ ಏರಿಯಾಗಳಲ್ಲಿ ಕರೆಂಟ್​ ಡೌಟ್​​!

https://newsfirstlive.com/wp-content/uploads/2024/05/Heavy-Rains-1.jpg

Load More