newsfirstkannada.com

VIDEO: ಮೊನ್ನೆ ಕೈ ಬೆರಳು.. ಇಂದು ಜರಿ ಹುಳು; ಐಸ್​ಕ್ರೀಮ್​ ಪ್ರಿಯರು ಓದಲೇಬೇಕಾದ ಸ್ಟೋರಿ ಇದು!

Share :

Published June 16, 2024 at 3:58pm

Update June 16, 2024 at 3:59pm

    ಹೆಸರಾಂತ ಬ್ರಾಂಡ್‌ನ ಐಸ್​ಕ್ರೀಮ್​ನಲ್ಲಿ ಜರಿ ಹುಳು ಕಂಡು ಮಹಿಳೆ ಶಾಕ್!

    ಮೊನ್ನೆಯಷ್ಟೇ ಆರ್ಡರ್ ಮಾಡಿದ್ದ ಐಸ್​ಕ್ರೀಮ್​ನಲ್ಲಿ ಮನುಷ್ಯನ ಕೈಬೆರಳು ಪತ್ತೆ

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಯ್ತು ಐಸ್​ಕ್ರೀಮ್ ವಿಡಿಯೋ

ಐಸ್​ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಚಿಕ್ಕ ಮಕ್ಕಳಿಗೆ ಐಸ್​ಕ್ರೀಮ್ ಎಂದರೆ ಪಂಚಪ್ರಾಣ. ಆದರೆ ಮೊನ್ನೆ ಮೊನ್ನೆಯಷ್ಟೆ ಮಹಿಳೆಯೊಬ್ಬರು ಆನ್​​ಲೈನ್​ ಮೂಲಕ ಆರ್ಡರ್ ಮಾಡಿ ಐಸ್​ಕ್ರೀಮ್​ ತರಿಸಿಕೊಂಡು ತಿನ್ನುವಾಗ ಅದರಲ್ಲಿ ಮನುಷ್ಯನ ಬೆರಳು ಬಾಯಿಗೆ ಬಂದಿತ್ತು. ಆ ಘಟನೆ ನಡೆದಿದ್ದು ಮಹಾರಾಷ್ಟ್ರದ ಮುಂಬೈ ಸಿಟಿಯ ಮಲಾಡ್ ಪ್ರದೇಶದಲ್ಲಿ.

ಇದನ್ನೂ ಓದಿ: ಐಸ್​ಕ್ರೀಮ್​ ತಿನ್ನುವಾಗ ಬಾಯಿಗೆ ಬಂದ ಮನುಷ್ಯನ ಕೈಬೆರಳು.. ಫುಲ್ ಶಾಕ್ ಆದ ಮಹಿಳೆ

ಆ ಘಟನೆ ಮಾಸುವ ಮುನ್ನವೇ ಇದೀಗ ಉತ್ತರ ಪ್ರದೇಶದ ನೋಯ್ಡಾದಲ್ಲಿ ಐಸ್​ಕ್ರೀಮ್ ಕಂಟೈನರ್​ನಲ್ಲಿ ಜರಿ ಹುಳ ಪತ್ತೆಯಾದೆ. ಹೌದು, ಮಹಿಳೆಯೊಬ್ಬರು ಬ್ಲಿಂಕಿಟ್‌ನಿಂದ ಅಮುಲ್‌ ಹೆಸರಾಂತ ಬ್ರಾಂಡ್‌ನ ಐಸ್​ಕ್ರೀಮ್ ಅನ್ನು ಆರ್ಡರ್ ಮಾಡಿದ್ದಾರೆ. ಡೆಲಿವರಿ ಆದಮೇಲೆ ಆ ಮಹಿಳೆ ಐಸ್​ಕ್ರೀಮ್ ಬಾಕ್ಸ್ ತೆರೆದು ನೋಡಿದಾಗ ಆಕೆಗೆ ಶಾಕ್ ಆಗಿದ್ದು, ಐಸ್​ಕ್ರೀಮ್​ನಲ್ಲಿ ಸತ್ತ ಜರಿ ಹುಳವನ್ನು ಕಂಡು ಮಹಿಳೆ ಬೆಚ್ಚಿ ಬಿದ್ದಿದ್ದಾಳೆ.

ದೀಪಾ ಎಂಬ ಮಹಿಳೆ ನೋಯ್ಡಾದ ಸೆಕ್ಟರ್-12ರಲ್ಲಿ ವಾಸಿಸುತ್ತಿದ್ದಾರೆ. ಹೀಗೆ ಶನಿವಾರ ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಬ್ಲಿಂಕಿಟ್‌ನಿಂದ ಐಸ್​ಕ್ರೀಮ್ ಅನ್ನು ಆರ್ಡರ್ ಮಾಡಿದ್ದರು. ಐಸ್​ಕ್ರೀಮ್ ಕಂಟೈನರ್​ ತೆರೆದಾಗ ಅದರ ಒಳಗೆ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಸತ್ತ ಜರಿ ಹುಳು ಪತ್ತೆಯಾಗಿದೆ. ಬಳಿಕ ಮಹಿಳೆ ದೀಪಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಐಸ್​ಕ್ರೀಮ್​ನಲ್ಲಿ ಪತ್ತೆಯಾದ ಜರಿ ಹುಳುವಿನ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಕುಟುಂಬಸ್ಥರು ಅಮುಲ್‌ನಂತಹ ಹೆಸರಾಂತ ಬ್ರಾಂಡ್‌ನ ಉತ್ಪನ್ನದಲ್ಲಿ ಇಂತಹ ನಿರ್ಲಕ್ಷ್ಯ ಹೇಗೆ ಸಂಭವಿಸುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇನ್ನು, ಇದೇ ವೀಡಿಯೊ ಸಾಮಾಜಿ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ವೈರಲ್​ ಆದ ನಂತರ ಬ್ಲಿಂಕಿಟ್ ಮಹಿಳೆ ದೀಪಾ ಅವರಿಗೆ ಕ್ಷಮೆಯಾಚಿಸಿ ಅವರ ಹಣವನ್ನು ಹಿಂದಿರುಗಿಸಿದೆ. ಈ ಬಗ್ಗೆ ವಿಷಯವನ್ನು ಪರಿಶೀಲಿಸುವುದಾಗಿ ಸಂಸ್ಥೆಯು ಭರವಸೆ ನೀಡಿದೆ ಎನ್ನಲಾಗಿದೆ. ಈ ವಿಡಿಯೋ ನೋಡಿದ ಆಹಾರ ಇಲಾಖೆಯ ತಂಡವು ಮಹಿಳೆ ಮನೆಗೆ ತೆರಳಿ ಮಾಹಿತಿ ಪಡೆದುಕೊಂಡಿದೆ. ನಂತರ ಆಹಾರ ಇಲಾಖೆ ಅಧಿಕಾರಿಗಳು ಸೆಕ್ಟರ್-22ರ ಬ್ಲಿಂಕಿಟ್ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಐಸ್​ಕ್ರೀಮ್​ಗಳನ್ನು ಇಟ್ಟಿರುವ ಸ್ಥಳವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮೊನ್ನೆ ಕೈ ಬೆರಳು.. ಇಂದು ಜರಿ ಹುಳು; ಐಸ್​ಕ್ರೀಮ್​ ಪ್ರಿಯರು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2024/06/ICE_CREAM.jpg

Load More