/newsfirstlive-kannada/media/post_attachments/wp-content/uploads/2024/03/BUTTER_NON.jpg)
ನೀವೇನಾದರೂ ಉತ್ತರ ಭಾರತದ ತಿಂಡಿ ಪ್ರಿಯರಾಗಿದ್ದೀರಾ. ಹಾಗಿದ್ರೆ ನೀವು ಖಂಡಿತ ಈ ಸ್ಟೋರಿಯನ್ನ ಸಂಪೂರ್ಣವಾಗಿ ಓದಿ. ನಾನ್ ಬಟರ್, ದಾಲ್ ಮಖ್ನಿ, ಕೆಲವು ಚಿಕನ್ ಡು ಪಾಯಾಜಾ ತಿಂದರೆ ಆಪತ್ತು ಕಟ್ಟಿಟ್ಟ ಬುತ್ತಿ. ಏಕೆಂದರೆ, ನಾರ್ತ್ ಇಂಡಿಯನ್ ತಿಂಡಿಗಳಲ್ಲಿ ಉಪ್ಪು ಮತ್ತು ರಂಜಕ ಹೆಚ್ಚು ಬಳಿಸಿ ಪ್ರೋಟೀನ್, ಪೊಟ್ಯಾಸಿಯಮ್ ಕಡಿಮೆ ಬಳಸುತ್ತಾರೆ. ಇದರಿಂದ ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಸಮಸ್ಯೆ, ಹೃದಯಾಘಾತ ಮತ್ತು ಪಾರ್ಶ್ವವಾಯುನಂತ ಗಂಭೀರ ಸಮಸ್ಯೆಗಳು ಕಾಣಿಕೊಳ್ಳುತ್ತವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಚಂಡೀಗಢದ PGIMERನ ದಿ ಜಾರ್ಜ್ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್, ಇಂಡಿಯಾ ನಡೆಸಿದ ಅಧ್ಯಯನದಿಂದ ಈ ಅಂಶ ಬೆಳಕಿಗೆ ಬಂದಿದೆ. ಉತ್ತರ ಭಾರತದ ಆಹಾರದಲ್ಲಿ ಪ್ರೋಟೀನ್ ಮತ್ತು ಪೊಟ್ಯಾಸಿಯಮ್ ಬಳಕೆ ಕಡಿಮೆ ಮಟ್ಟದಲ್ಲಿದ್ದರಿಂದ ಮೂತ್ರಪಿಂಡದ ಸಮಸ್ಯೆ ಸೇರಿದಂತೆ ದೇಹದಲ್ಲಿ ಬೇರೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಇವರ ಆಹಾರದಲ್ಲಿ ಉಪ್ಪು ಮತ್ತು ರಂಜಕ ಹೆಚ್ಚಾಗಿ ಕಂಡು ಬರುತ್ತಿರುವುದೇ ಇದಕ್ಕೆ ಕಾರಣ ಎಂದು ಆಧ್ಯಯನ ಫ್ರೂ ಮಾಡಿದೆ.
/newsfirstlive-kannada/media/post_attachments/wp-content/uploads/2024/03/BUTTER_NON_2.jpg)
ಇದನ್ನೂ ಓದಿ:‘ಎಲೆಕ್ಷನ್​ನಲ್ಲಿ ಅವರೂ ದುಡ್ಡು ಕೊಡ್ತಾರೆ, ನಾವೂ ಕೊಡುತ್ತೇವೆ, ಆದರೆ..’ -ಸಂತೋಷ್ ಲಾಡ್
ಚಂಡೀಗಢದ PGIMERನ ಎಕ್ಸ್‌ಪೆರಿಮೆಂಟಲ್ ಮೆಡಿಸಿನ್ ಮತ್ತು ಬಯೋಟೆಕ್ನಾಲಜಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ಅಶೋಕ್ ಯಾದವ್ ಅವರು ಅಧ್ಯಯನ ಕೈಗೊಂಡಿದ್ದರು. ಇವರು ವಿವಿಧ ಗಾತ್ರದ ದೇಹ ಹೊಂದಿರುವ, ರಕ್ತದೊತ್ತಡ ಹಾಗೂ ಹೊಟ್ಟೆಯ ಬೊಜ್ಜು ಹೊಂದಿರುವ ಪುರುಷರು ಮತ್ತು ಮಹಿಳೆಯರನ್ನು ತಮ್ಮ ಅಧ್ಯಯನಕ್ಕೆ ತೆಗೆದುಕೊಂಡಿದ್ದರು. ಇವರ ಮೂತ್ರದ ಮಾದರಿಗಳನ್ನು ಪರೀಕ್ಷಿಸಿದಾಗ ಸೋಡಿಯಂ, ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ರಂಜಕದ ಸೇವನೆ ಬಗ್ಗೆ ಕಂಡುಕೊಂಡಿದ್ದಾರೆ.
ಸೋಡಿಯಂ ಮಟ್ಟ ಹೆಚ್ಚಾದಂತೆ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ
WHO ಪ್ರಕಾರ ನಿತ್ಯ 2 ರಿಂದ 5 ಗ್ರಾಂ ಉಪ್ಪು ಸೇವನೆ ಮಾಡಿದರೆ ಸಾಕು. ಆದರೆ ಇದು ಒಂದು ದಿನಕ್ಕೆ 8 ಗ್ರಾಂನಷ್ಟು ಶೇಕಡ 65 ರಷ್ಟು ಜನರು ಸೇವನೆ ಮಾಡುತ್ತಿದ್ದಾರೆ. ಈ ಮಟ್ಟದಲ್ಲಿ ಉಪ್ಪು ಸೇವನೆ ಅಧಿಕ ರಕ್ತದೊತ್ತಡಕ್ಕೆ ಪ್ರಚೋದಿಸುತ್ತದೆ. ಇದರಿಂದ ದೇಹದ ಸೋಡಿಯಂ ಮಟ್ಟ ಹೆಚ್ಚಾದಂತೆ ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದು ಜೀವಕೋಶಗಳ ಸುತ್ತಲಿನ ದ್ರವದ ಪ್ರಮಾಣ ಮತ್ತು ರಕ್ತದ ಪ್ರಮಾಣ ಎರಡನ್ನೂ ಹೆಚ್ಚಿಸಿ ಹಾನಿಗೆ ಕಾರಣವಾಗುತ್ತದೆ. ಹೀಗಾಗಿಯೇ ಹೃದ್ರೋಗ ತಜ್ಞರು ರೋಗಿಗಳಿಗೆ ಉಪ್ಪು, ಉಪ್ಪಿನಕಾಯಿ, ಉಪ್ಪುನ್ನು ಹೆಚ್ಚಿಗೆ ಹಾಕಿರುವ ಆಹಾರ, ಸಾಸ್ ಹಾಗೂ ಟೇಬಲ್​ ಸಾಲ್ಟ್ ಅನ್ನ ಹೆಚ್ಚಿಗೆ ಸೇವನೆ ಮಾಡದಂತೆ ಸೂಚಿಸುತ್ತಾರೆ ಎಂದು ಡಾ.ಅಶೋಕ್ ಯಾದವ್ ಹೇಳುತ್ತಾರೆ.
ಇದನ್ನೂ ಓದಿ: ಕಿಂಗ್ ಕೊಹ್ಲಿಗೆ ಚಿನ್ನಸ್ವಾಮಿ ಪಿಚ್ ಮಹಿಮೆ.. ಅಳಿಸಲಾಗದ ಭಾವನಾತ್ಮಕ ಸಂಬಂಧ ಅಂದರೆ ಇದೆ..!
/newsfirstlive-kannada/media/post_attachments/wp-content/uploads/2024/03/BUTTER_NON_1.jpg)
ಜೀವಕ್ಕೆ ಕುತ್ತು ತರುವ ತೊಂದರೆ ಹೆಚ್ಚಿಸುತ್ತೆ
ಫಾಸ್ಫರಸ್ ಅನ್ನು ದಿನಕ್ಕೆ 7,000 ಮೈಕ್ರೋಗ್ರಾಂನಷ್ಟು ತಿನ್ನಬೇಕು ಆದರೆ ಇದು ಕೂಡ ಸರಾಸರಿಗಿಂತ ತೀರ ಹೆಚ್ಚಳವಾಗಿದೆ. ದೇಹದಲ್ಲಿ ಹೆಚ್ಚು ರಂಜಕ ಇದ್ದರೇ ಅದು ಮೂಳೆಗಳಿಂದ ಕ್ಯಾಲ್ಸಿಯಂ ಅನ್ನು ತೆಗೆದು ಹಾಕಿ ದುರ್ಬಲಗೊಳಿಸುತ್ತೆ. ರಂಜಕವು ರಕ್ತನಾಳಗಳು, ಶ್ವಾಸಕೋಶಗಳು, ಕಣ್ಣುಗಳು ಮತ್ತು ಹೃದಯದಲ್ಲಿ ಅಪಾಯಕಾರಿ ಕ್ಯಾಲ್ಸಿಯಂ ನಿಕ್ಷೇಪಗಳಿಗೆ ಕಾರಣವಾಗುತ್ತದೆ. ದಿನ ಕಳೆದಂತೆ ಇದು ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಜೀವಕ್ಕೆ ಕುಂದು ತರುವ ತೊಂದರೆಗಳನ್ನ ಹೆಚ್ಚಿಸುತ್ತದೆ. ಉತ್ತರ ಭಾರತದ ಆಹಾರದಲ್ಲಿ ಇವುಗಳು ಹೆಚ್ಚಿನ ಮಟ್ಟದಲ್ಲಿರುತ್ತಾವೆ. ರಂಜಕ ಹಾಗೂ ಉಪ್ಪಿನ ಅಂಶ ಹೆಚ್ಚಿರುವ ಆಹಾರ ತ್ಯಜಿಸಿಬೇಕು ಎಂದು ಹೇಳುತ್ತಾರೆ.
ಇಂತಹ ಆಹಾರದ ಬದಲಿಗೆ ಮೀನು, ಬೇಳೆಕಾಳುಗಳು, ಮೊಟ್ಟೆಗಳು, ಎಣ್ಣೆ ಬೀಜಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನ ಹೆಚ್ಚಾಗಿ ಸೇವಿಸುವುದರಿಂದ ದೇಹದಲ್ಲಿ ಪ್ರೋಟಿನ್ ಹೆಚ್ಚುತ್ತದೆ. ಧಾನ್ಯಗಳು, ಹಸಿರು ತರಕಾರಿಗಳು, ಕಿವಿ ಮತ್ತು ಬಾಳೆಹಣ್ಣುಗಳಂತ ಹಣ್ಣುಗಳನ್ನು ತಿನ್ನುವುದರಿಂದ ಆಹಾರದಲ್ಲಿ ಪೊಟ್ಯಾಸಿಯಮ್ ಮಟ್ಟ ಕಾಪಾಡಿಕೊಳ್ಳಬಹುದು ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ವಿಶೇಷ ವರದಿ;ಭೀಪಪ್ಪ,ಡಿಜಿಟಲ್ ಡೆಸ್ಕ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us