newsfirstkannada.com

‘ಬೆಂಗಳೂರು ನಡಿಯುತ್ತಿರೋದೇ ನಮ್ಮಿಂದ..’ ಕನ್ನಡಿಗರ ಕೆಣಕಿದ ಹೊರ ರಾಜ್ಯದ ಯುವತಿ, ಭುಗಿಲೆದ್ದ ಆಕ್ರೋಶ

Share :

Published September 7, 2024 at 8:28am

    ಮತ್ತೆ ಕನ್ನಡಿಗರ ಕೆರಳುವಂತೆ ಮಾಡಿದ ಯುವತಿಯ ಹೇಳಿಕೆ

    ಬೆಂಗಳೂರಿಗರ ವಿರುದ್ಧ ಅವಾಚ್ಯ ಶಬ್ದ ಬಳಸಿರೋ ಯುವತಿ

    ಯುವತಿ ನಿಂದನೆ ವಿಡಿಯೋ ವೈರಲ್​ ಆಗ್ತಿದ್ದಂತೆ ಆಕ್ರೋಶ

ಬೆಂಗಳೂರು: ಮೊನ್ನೆಯಷ್ಟೇ ಓಲಾ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿಯ ನಡುವೆ ವಾಗ್ವಾದ ಆಗಿತ್ತು. ನಂತರ ಆಟೋ ಚಾಲಕನ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಕೇಳಿಬಂದಿತ್ತು. ಅದರಂತೆ ಚಾಲಕನ ವಿರುದ್ಧ ಪೊಲೀಸರ ಕ್ರಮ ತೆಗೆದುಕೊಂಡಿದ್ದರು. ಈ ಘಟನೆಯನ್ನ ಖಂಡಿಸುವ ಆವೇಶದಲ್ಲಿ ಬೆಂಗಳೂರಿನ ಸ್ಥಳೀಯರ ವಿರುದ್ಧ ಉತ್ತರ ಭಾರತದ ಯುವತಿಯೊಬ್ಬಳು ನಾಲಿಗೆ ಹರಿಬಿಟ್ಟಿದ್ದು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ.

ಇದನ್ನೂ ಓದಿ: ಯುವತಿ ಮೇಲೆ ಆಟೋ ಡ್ರೈವರ್‌ ಪೌರುಷ.. ವಿಡಿಯೋ ನೋಡಿ ಬೆಂಗಳೂರಿಗರೇ ಶಾಕ್‌! ಅಸಲಿಗೆ ಆಗಿದ್ದೇನು?

ಬೇರೆ ಕಡೆಯಿಂದ ಬಂದು ಇಲ್ಲಿ ಕೆಲಸ ಮಾಡುತ್ತಿರುವ ನಮ್ಮಂತವರಿಂದಲೇ ಇಡೀ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ. ನಾವೆಲ್ಲಾ ತೆರಿಗೆ ಕಟ್ಟುತ್ತಿದ್ದೇವೆ. ಇವರಿಗೆ ನಾವು ಬಾಡಿಗೆ ಕಟ್ಟುತ್ತಿದ್ದೇವೆ. ಇಡೀ ಬೆಂಗಳೂರಿನ ಆರ್ಥಿಕತೆ ನಡೆಯುತ್ತಿರುವುದೇ ನಮ್ಮಿಂದ. ಕರ್ಮ ಇವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕನ್ನಡಿಗರನ್ನು ನಿಂದಿಸಿದ್ದಳು.

ಸದ್ಯ ಉತ್ತರ ಭಾರತೀಯ ಮೂಲದ ಯುವತಿ ಬೆಂಗಳೂರಿನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಯುವತಿ ಮೇಲೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲೇ ಇದ್ದುಕೊಂಡು ನಮ್ಮ ರಾಜ್ಯದ ಬಗ್ಗೆ ಮಾತಾಡಿದ್ದ ಯುವತಿ ಸದ್ಯ ವಿಡಿಯೋ ಡಿಲೀಟ್ ಮಾಡಿ ಯುವತಿ ಕ್ಷಮೆ ಕೇಳಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬೆಂಗಳೂರು ನಡಿಯುತ್ತಿರೋದೇ ನಮ್ಮಿಂದ..’ ಕನ್ನಡಿಗರ ಕೆಣಕಿದ ಹೊರ ರಾಜ್ಯದ ಯುವತಿ, ಭುಗಿಲೆದ್ದ ಆಕ್ರೋಶ

https://newsfirstlive.com/wp-content/uploads/2024/09/angry-women.jpg

Load More