newsfirstkannada.com

ಉತ್ತರ ಕರ್ನಾಟಕದ ಮಂದಿಗೆ ಗುಡ್​ನ್ಯೂಸ್​​; ಈ ಜಿಲ್ಲೆಗಳಲ್ಲಿ ಇಂದಿನಿಂದ ಭರ್ಜರಿ ಮಳೆ!

Share :

Published May 2, 2024 at 5:34pm

Update May 2, 2024 at 5:40pm

    ಕಳೆದ ಒಂದು ತಿಂಗಳಿನಿಂದ ರಣಬಿಸಿಲಿಗೆ ಕಂಗೆಟ್ಟ ರಾಜ್ಯದ ಜನ

    ಆದಷ್ಟು ಬೇಗ ಮಳೆಯಾಗಲಿ ಎಂದಿದ್ದ ಜನರಿಗೆ ಭರ್ಜರಿ ಗುಡ್​ನ್ಯೂಸ್​​

    ಮಳೆ ಬಗ್ಗೆ ರಾಜ್ಯ ಹವಾಮಾನ ಇಲಾಖೆ ಕೊಟ್ಟ ಮುನ್ಸೂಚನೆ ಏನು?

ವಿಜಯಪುರ: ಕಳೆದೊಂದು ತಿಂಗಳಿನಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿದಿನ 36-38 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗುತ್ತಿದೆ. ಕಡು ಬಿಸಿಲಿನಿಂದ ಬೇಸತ್ತ ಜನ ಮಳೆ ಬಂದರೆ ಸಾಕಪ್ಪ ಎಂದು ಹಾತೊರೆಯುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಕಥೆಯಂತೂ ಹೇಳತೀರದು.

ಇನ್ನು, ಈ ಮಧ್ಯೆ ಉತ್ತರ ಕರ್ನಾಟಕದ ಜನರಿಗೂ ರಾಜ್ಯ ಹವಾಮಾನ ಇಲಾಖೆ ಗುಡ್​ನ್ಯೂಸ್​ ನೀಡಿದೆ. ಮುಂದಿನ 15 ದಿನಗಳ ಕಾಲ ಅಂದರೆ ಮೇ 1-15 ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಇದರ ಕುರಿತು ಈ ಜಿಲ್ಲೆಗಳ ನಾಗರಿಕರು ಮಳೆಯ ಬಗ್ಗೆ ಕೊಂಚ ಎಚ್ಚರಿಕೆಯನ್ನು ವಹಿಸಬೇಕಿದೆ.

ಇದನ್ನೂ ಓದಿ: ಕೊನೆಗೂ ಬಂದ ಮಳೆರಾಯ.. ವರ್ಷಧಾರೆ ಕಂಡು ನಿಟ್ಟುಸಿರು ಬಿಟ್ಟ ಜನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರ ಕರ್ನಾಟಕದ ಮಂದಿಗೆ ಗುಡ್​ನ್ಯೂಸ್​​; ಈ ಜಿಲ್ಲೆಗಳಲ್ಲಿ ಇಂದಿನಿಂದ ಭರ್ಜರಿ ಮಳೆ!

https://newsfirstlive.com/wp-content/uploads/2024/04/RAIN_1-1-1.jpg

Load More