ಅಮೆರಿಕಾದ ಆಧ್ಯಾತ್ಮಿಕ ಗುರುವನ್ನೇ ವರಿಸಿದ ನಾರ್ವೆಯ ರಾಜಕುಮಾರಿ; ಇಬ್ಬರ ವಯಸ್ಸು ಕೇಳಿದ್ರೆ ಶಾಕ್​ ಆಗ್ತೀರಾ

author-image
Gopal Kulkarni
Updated On
ಅಮೆರಿಕಾದ ಆಧ್ಯಾತ್ಮಿಕ ಗುರುವನ್ನೇ ವರಿಸಿದ ನಾರ್ವೆಯ ರಾಜಕುಮಾರಿ; ಇಬ್ಬರ ವಯಸ್ಸು ಕೇಳಿದ್ರೆ ಶಾಕ್​ ಆಗ್ತೀರಾ
Advertisment
  • ನಾರ್ವೆಯ ರಾಜಕುಮಾರಿ ಮತ್ತು ಅಮೆರಿಕಾದ ಆಧ್ಯಾತ್ಮ ಗುರುವಿನ ಕಲ್ಯಾಣ
  • ಉಂಗುರ ಬದಲಿಸಿಕೊಂಡು ಚುಂಬಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
  • ಮಾರ್ತಾ ಲೂಯಿಸ್ ಮತ್ತು ಡ್ಯುರೆಕ್​ಗೆ ಆಗಿರುವ ವಯಸ್ಸು ಎಷ್ಟು ಗೊತ್ತಾ.|?

ಓಸ್ಲೋ: ನಾರ್ವೆಯ ರಾಜಕುಮಾರಿ ಮಾರ್ತಾ ಲೂಯಿಸ್ ಮತ್ತು ಅಮೆರಿಕದ ಖ್ಯಾತ ಆಧ್ಯಾತ್ಮ ಗುರು ಡ್ಯುರೆಕ್ ವೆರಟ್ಟಾ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶನಿವಾರದಂದು ಅಂದ್ರೆ ಆಗಸ್ಟ್ 31 ರಂದು ದಾಪಂತ್ಯ ಜೀವನಕ್ಕೆ ಕಾಲಿಟ್ಟ 52 ವರ್ಷದ ವೆರೆಟ್ಟಾ 49 ವರ್ಷದ ಮಾರ್ತಾ ಲೂಯಿಸ್ ಬಹುಕಾಲದ ಸ್ನೇಹಿತರು. 2019ರಲ್ಲಿಯೇ ತಮ್ಮ ನಡುವೆ ಬಾಂಧವ್ಯದ ಬಗ್ಗೆ ಜಗತ್ತಿನೆದರು ಸ್ಪಷ್ಟವಾಗಿ ಹೇಳಿದ್ದರು. ಈಗ ಐದು ವರ್ಷಗಳ ಬಳಿಕ ಇಬ್ಬರೂ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಈ ಅದ್ದೂರಿ ಮದುವೆಗೆ ನಾರ್ವೆದ ರಾಜನ ಸಮ್ಮುಖದಲ್ಲಿಯೇ ಈ ಒಂದು ಮದುವೆ ನಡೆದಿದ್ದು ಇನ್ನೂ ವಿಶೇಷ ಇನ್ನೂ ಈ ಮದುವೆ ಹಲವು ಕಾರಣಗಳಿಂದ ಟೀಕೆಗೂ ಕೂಡ ಗುರಿಯಾಗಿದೆ.

publive-image

ಇದನ್ನೂ ಓದಿ:ರಷ್ಯಾದ ಬೇಹುಗಾರಿಕಾ ತಿಮಿಂಗಲ ಇನ್ನಿಲ್ಲ.. ಹ್ವಾಲ್ಡಮೀರ್ ಸಾವಿನ ಸುತ್ತಾ ಅನುಮಾನ; ಏನಿದರ ರಹಸ್ಯ?

ಮಾರ್ತಾ ಲೂಯಿಸ್ ಹಾಗೂ ಡ್ಯುರೆಕ್ ವೆರೆಟ್ಟಾ ಅವರ ಮದುವೆ ಬರೋಬ್ಬರಿ ಮೂರು ದಿನಗಳ ಕಾಲ ಹಬ್ಬದ ಸಡಗರದಂತೆ ನಡೆದಿದೆ. ಜೈರೆಂಜರ್​ನ ಪಿಕ್ವರ್​ಸ್ಕ್ಯೂ ನಲ್ಲಿ ನಡೆದ ಈ ಜೋಡಿಗಳ ಮದುವೆಗೆ ಸ್ವಿಡನ್ ಹಾಗೂ ನಾರ್ವೆದಿಂದ ರಾಯಲ್ ಕುಟುಂಬಗಳ ಜೊತೆ ಜೊತೆಗೆ ವಧು ವರರ ಗೆಳೆಯರು ಸಂಬಂಧಿಕರು ಸೇರಿದಂತೆ ಅನೇಕ ಸೆಲೆಬ್ರೆಟಿಸ್ ಕೂಡ ಆಗಮಿಸಿದ್ದರು.

publive-image

ಇದನ್ನೂ ಓದಿ:ಅಮೆರಿಕಾದಲ್ಲಿ ಕನ್ನಡದ ಕಂಪು.. ಅಕ್ಕ ವಿಶ್ವ ಕನ್ನಡ ಸಮ್ಮೇಳನದ ನಿರೂಪಕಿ ಪ್ರತಿಭಾ ಗೌಡ ಯಾರು? ಸಾಧನೆಗಳೇನು?

ಮಾರ್ತಾ ಲೂಯಿಸ್ ನಾರ್ವೆಯ ರಾಜ ಹರಾಲ್ಡ್ ಮತ್ತು ರಾಣಿ ಸೋಂಜಾಳ ಪುತ್ರಿ, ಅವರು ರಾಜಮನೆತನದ ಕೊಂಡಿಯಿಂದ ಕಳಚಿಕೊಂಡು ತಮ್ಮದೇ ಆದ ಉದ್ಯಮ ಸ್ಥಾಪಿಸಿಕೊಂಡು ಇದ್ದಾರೆ. 2022ರಲ್ಲಿಯೇ ರಾಜ ಹಾಗೂ ರಾಣಿ ಎನ್ನುವ ಕೊಂಡಿಯಿಂದ ಬಿಡುಗಡೆ ಹೊಂದಿ ಯಶಸ್ವಿ ಉದ್ಯಮಿಗಳಾಗಿದ್ದಾರೆ. ಇಂದು ಪುತ್ರಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿದ ಅವರು, ಭವಿಷ್ಯದಲ್ಲಿ ತಮ್ಮ ಮಗಳು ಕೂಡ ರಾಜ ರಾಜವಂಶದ ಕೊಂಡಿಯಿಂದ ಕಳಚಿಕೊಂಡ ಸಾಗಲಿದ್ದಾಳೆ ಎಂದು ಹೇಳಿದ್ದಾರೆ. ಈ ಒಂದು ಹೇಳಿಕೆಗೆ ಅರಮನೆಯಿಂದ ಹಾಗೂ ಪಾರ್ಲಿಮೆಂಟ್​ನಿಂದ ಅನೇಕ ಟೀಕೆಗಗಳು ಗುರಿಯಾಗಿವೆ ಮಾರ್ತಾಳ ಮದುವೆಯನ್ನು ರಾಜಮನೆತನದೊಂದಿಗೆ ಗುರುತಿಸುವ ಅವಶ್ಯಕತೆಯಿರಲಿಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment