newsfirstkannada.com

ಒನ್ ಟು ತ್ರಿಬಲ್ ಚಾರ್ಜ್; ಬಿಸಿಲಿನಂತೆ ಗ್ರಾಹಕರ ಜೇಬು ಸುಡ್ತಿದೆ ಓಲಾ ರೇಟ್​.. ಪ್ರಯಾಣಿಕರು ಕಂಗಾಲು!

Share :

Published March 31, 2024 at 6:24am

Update March 31, 2024 at 6:25am

    ಜಯನಗರದಿಂದ ಸೌತ್​ಎಂಡ್ ಸರ್ಕಲ್​ಗೆ 900 ಮೀಟರ್​ ಎಷ್ಟು?

    ಬೇಸಿಗೆ ಬಿಸಿಲಿನಂತೆ ಗ್ರಾಹಕರ ಜೇಬು ಸುಡುತ್ತಿದೆ ಓಲಾ ರೇಟ್

    ಅಗ್ರಿಗೆಟರ್ಸ್ ಮನಸೋ ಇಚ್ಛೆ ರೇಟ್​ ಫಿಕ್ಸ್​ ಮಾಡ್ತಿರೋ ಆರೋಪ

ಬೆಂಗಳೂರು: ಬೇಸಿಗೆ ಶುರುವಾಗ್ತಿದ್ದಂತೆ ನಗರದಲ್ಲಿ ಒಂದಲ್ಲ ಒಂದು ಸಮಸ್ಯೆ ಶುರುವಾಗ್ತಾನೆ ಇದೆ. ನೀರಿಲ್ಲ ಅಂತ ಜನ ಪರದಾಡ್ತಿದ್ದಾರೆ. ಮೊನ್ನೆಯಷ್ಟೇ ನಿಂಬೆಹಣ್ಣಿನ ರೇಟ್​ ಜಾಸ್ತಿ ಆಗಿ ಜನ ಸುಸ್ತಾಗಿದ್ರು. ಈಗ ಓಲಾ ಕೂಡ ದಿಢೀರ್ ದುಬಾರಿಯಾಗಿದ್ದು, ಬೆಂಗಳೂರಿಗರು ದಂಗಾಗಿದ್ದಾರೆ. ಬೇಸಿಗೆ ಬಿಸಿಲಿನಂತೆ ಓಲಾ ರೇಟ್ ಗ್ರಾಹಕರ ಜೇಬು ಸುಡ್ತಿದೆ. ಓಲಾ ರೇಟ್ ಕಂಡು ಗ್ರಾಹಕರು ದಂಗಾಗಿದ್ದಾರೆ. ಒನ್ ಟು ಡಬಲ್ ಅಲ್ಲ ಗುರೂ. ಒನ್ ಟು ತ್ರಿಬಲ್ ಚಾರ್ಜ್ ಮಾಡಲಾಗ್ತಿದೆ.

ಇದನ್ನೂ ಓದಿ: ಆಂಬ್ಯುಲೆನ್ಸ್ ಹಾಗೂ ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ.. ನರ್ಸ್​ಗೆ ಗಂಭೀರ ಗಾಯ, ಚಾಲಕನ ಪರಿಸ್ಥಿತಿ?

ಈ ಹಿಂದೆ 2 ಕಿಲೋ‌ ಮೀಟರ್​ಗೆ 24 ರೂಪಾಯಿದ್ದ ರೇಟ್​ ಈಗ 800 ಮೀಟರ್​ಗೆ 60-₹65 ಚಾರ್ಜ್ ಮಾಡಲಾಗ್ತಿದೆ. ಟೌನ್​ಹಾಲ್​ನಿಂದ ಕೆ.ಆರ್ ಮಾರ್ಕೆಟ್ 1.2 ಕಿಲೋ ಮೀಟರ್​ ಅಂತರ ಇದ್ದು, ಇಲ್ಲಿಂದ ಇಲ್ಲಿಗೆ ಆಟೋದಲ್ಲಿ 50 ರಿಂದ 53 ರೂಪಾಯಿ ಚಾರ್ಜ್​ ಮಾಡಲಾಗ್ತಿದೆ. ಇನ್ನು ಕಾರ್​ಗೆ 108 ರೂಪಾಯಿ ದರ ನಿಗದಿಯಾಗಿದೆ. ಇನ್ನು ಇದೇ ಟೌನ್​ಹಾಲ್​ನಿಂದ ಮೆಜೆಸ್ಟಿಕ್​​ಗೆ 2.1 ಕಿಲೋಮೀಟರ್​ ಅಂತರವಿದ್ದು ಆಟೋಗೆ 78ರಿಂದ 82 ರೂಪಾಯಿ ಚಾರ್ಜ್​ ಮಾಡಲಾಗ್ತಿದೆ. ಕಾರ್​ಗೆ 178 ರೂಪಾಯಿ ದರ ನಿಗದಿಯಾಗಿದೆ.

ಇತ್ತ ಜಯನಗರದಿಂದ ಸೌತ್​ಎಂಡ್ ಸರ್ಕಲ್​ಗೆ 900 ಮೀಟರ್​ ಅಂತರವಿದ್ದು, ಆಟೋಗೆ 50 ರಿಂದ 53 ರೂಪಾಯಿ ಚಾರ್ಜ್​ ಮಾಡಲಾಗಿದೆ. ಕಾರ್​ನಲ್ಲಿ ಕೇವಲ 900 ಮೀಟರ್​ಗೆ 108 ರೂಪಾಯಿ ಫಿಕ್ಸ್​ ಮಾಡಲಾಗಿದೆ. ಸಾರಿಗೆ ಇಲಾಖೆಯ ಯೂನಿಫಾರ್ಮ್ ದರದ ಪ್ರಕಾರ 10 ಲಕ್ಷಕ್ಕಿಂತ ಕಡಿಮೆ ವಾಹನಕ್ಕೆ ಪ್ರತೀ ಕಿಲೋ ಮೀಟರ್​ಗೆ 24 ರೂಪಾಯಿ ನಿಗದಿ ಮಾಡಲಾಗಿದೆ. ಆದ್ರೆ ಅಗ್ರಿಗೆಟರ್ಸ್ ಮನಸೋ ಇಚ್ಛೆ ರೇಟ್​ ಫಿಕ್ಸ್​ ಮಾಡ್ತಿರೋ ಆರೋಪ ಕೇಳಿಬಂದಿದ್ದು ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒನ್ ಟು ತ್ರಿಬಲ್ ಚಾರ್ಜ್; ಬಿಸಿಲಿನಂತೆ ಗ್ರಾಹಕರ ಜೇಬು ಸುಡ್ತಿದೆ ಓಲಾ ರೇಟ್​.. ಪ್ರಯಾಣಿಕರು ಕಂಗಾಲು!

https://newsfirstlive.com/wp-content/uploads/2024/02/uber-1.jpg

Load More