newsfirstkannada.com

ದುಬೈನಲ್ಲೂ ಯುಪಿಐ RuPay ಕಾರ್ಡ್​ ಸೇವೆ; ಮೋದಿ ಜತೆ ಐತಿಹಾಸಿಕ ಒಪ್ಪಂದ; ​ಭಾರತೀಯರಿಗೇನು ಲಾಭ?

Share :

Published February 13, 2024 at 8:43pm

Update February 13, 2024 at 8:36pm

    ಭಾರತದ UPI, ರುಪೇ ಕಾರ್ಡ್‌ ಬಳಕೆಗೆ ಅಬುಧಾಬಿಯಲ್ಲಿ ಚಾಲನೆ

    UAE ದೇಶದಾದ್ಯಂತ ರುಪೇ ಕಾರ್ಡ್‌ನ ವಹಿವಾಟು ಈಗ ಸುಲಭ

    ಇನ್ಮುಂದೆ ದುಬೈಗೆ ಹೋದರೂ ಕರೆನ್ಸಿ ವಿನಿಮಯ ಮಾಡುವಂತಿಲ್ಲ

ಅಬುಧಾಬಿ: ಯುನೈಟೆಡ್‌ ಅರಬ್ ಎಮಿರೇಟ್ಸ್ (UAE)ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಇನ್ಮುಂದೆ ಅರಬ್ ರಾಷ್ಟ್ರದಲ್ಲೂ ಭಾರತದ ಡಿಜಿಟಲ್ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ ಹಣಕಾಸಿನ ವಹಿವಾಟು ಮಾಡಬಹುದು. ಅಬುಧಾಬಿ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈ ಒಪ್ಪಂದಕ್ಕೆ ಸಾಕ್ಷಿಯಾಗಿದ್ದಾರೆ.

ಅಬುಧಾಬಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ UAE ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದೇ ವೇಳೆ ಇನ್‌ಸ್ಟಂಟ್ ಪೇಮೆಂಟ್ ಪ್ಲಾಟ್‌ಫಾರ್ಮ್‌ಗಳ ಇಂಟರ್‌ಲಿಂಕ್ ಮಾಡುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇನ್ಮುಂದೆ ಭಾರತದ UPI ಮತ್ತು ಯುಎಇಯ IINI ನಡುವೆ ಸುಲಭವಾದ ವಹಿವಾಟು ನಡೆಸಬಹುದು.

ದ್ವಿಪಕ್ಷೀಯ ಮಾತುಕತೆಯ ಬಳಿಕ ಪ್ರಧಾನಿ ಮೋದಿ ಹಾಗೂ UAE ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಅವರು ಡಿಜಿಟಲ್ ರುಪೇ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸ್ಟಾಕ್ ಆಧರಿಸಿದ ಜಯವಾನ್ ಕಾರ್ಡ್‌ಗೆ ಚಾಲನೆ ನೀಡಿದರು. ಈ UPI ರುಪೇ ಸೇವೆ ಆರಂಭಿಸಿದ್ದಕ್ಕೆ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದ್ದಾರೆ.

ದುಬೈನಲ್ಲಿ ಭಾರತೀಯರಿಗೆ ಲಾಭವೇನು?
ಭಾರತದ UPI, ರುಪೇ ಕಾರ್ಡ್‌ ಬಳಕೆಗೆ ಅನುಮತಿ
UAE ದೇಶದಾದ್ಯಂತ ರುಪೇ ಕಾರ್ಡ್‌ನ ವಹಿವಾಟು
ಭಾರತದ ರೂಪಾಯಿಗಳಲ್ಲೇ ಹಣಕಾಸಿನ ವ್ಯವಹಾರ
ದೇಶಿಯ ಡೆಬಿಟ್‌/ಕ್ರೆಡಿಟ್ ಕಾರ್ಡ್‌ಗಳ ಬಳಕೆ ಸಾಧ್ಯ
ದುಬೈ ದುಡ್ಡು (ದಿರ್ಹಮ್) ತೆಗೆದುಕೊಂಡು ಹೋಗುವಂತಿಲ್ಲ
ಭಾರತದ ಕರೆನ್ಸಿಯನ್ನು ವಿನಿಮಯ ಮಾಡುವ ಅಗತ್ಯವಿಲ್ಲ
ಡಾಲರ್‌ಗಳ ಮೇಲೆ ಅವಲಂಬಿಸುವುದು ಕಡಿಮೆ ಆಗುತ್ತದೆ

ಇದನ್ನೂ ಓದಿ: VIDEO: ಅರಬ್ ರಾಷ್ಟ್ರದಲ್ಲಿ ‘ನಮೋ’ ಮೇನಿಯಾ; UAE ಅಧ್ಯಕ್ಷರ ಸ್ವಾಗತಕ್ಕೆ ಮನಸೋತ ಪ್ರಧಾನಿ ಮೋದಿ

ಇತ್ತೀಚೆಗೆ ಶ್ರೀಲಂಕಾ ಹಾಗೂ ಮಾರಿಷಸ್‌ನಲ್ಲೂ ಭಾರತದ UPI, ರುಪೇ ಕಾರ್ಡ್‌ ಬಳಕೆಗೆ ಚಾಲನೆ ನೀಡಲಾಗಿತ್ತು. ಇದೀಗ ಅರಬ್ ದೇಶದಲ್ಲೂ ರುಪೇ ಕಾರ್ಡ್‌ಗೆ ಅನುಮತಿ ಸಿಕ್ಕಿರುವುದು ಬಹಳ ಮುಖ್ಯವಾಗಿದೆ. ದುಬೈಗೆ ಪ್ರವಾಸ ಕೈಗೊಳ್ಳುವ ಭಾರತೀಯರಿಗೂ ಇದರಿಂದ ಹಣಕಾಸಿನ ವಹಿವಾಟು ಇನ್ಮುಂದೆ ಸುಲಭವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುಬೈನಲ್ಲೂ ಯುಪಿಐ RuPay ಕಾರ್ಡ್​ ಸೇವೆ; ಮೋದಿ ಜತೆ ಐತಿಹಾಸಿಕ ಒಪ್ಪಂದ; ​ಭಾರತೀಯರಿಗೇನು ಲಾಭ?

https://newsfirstlive.com/wp-content/uploads/2024/02/UAE-Rupai-Card.jpg

Load More