ಪ್ರವಾಸಕ್ಕೆ ಬಂದವರಿಂದ 69 ಸಾವಿರ ಹಣ ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು; ಗಳಗಳನೇ ಕಣ್ಣೀರಿಟ್ಟ ಮಹಿಳೆ..!

author-image
Ganesh
Updated On
ಪ್ರವಾಸಕ್ಕೆ ಬಂದವರಿಂದ 69 ಸಾವಿರ ಹಣ ವಶಕ್ಕೆ ಪಡೆದ ಚುನಾವಣಾ ಅಧಿಕಾರಿಗಳು; ಗಳಗಳನೇ ಕಣ್ಣೀರಿಟ್ಟ ಮಹಿಳೆ..!
Advertisment
  • ಚುನಾವಣಾ ಅಧಿಕಾರಿಗಳ ನಡೆಯಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬ
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಮಹಿಳೆ ಕಣ್ಣೀರಿಟ್ಟ ದೃಶ್ಯ
  • ಪಂಜಾಬ್​ನಿಂದ ತಮಿಳುನಾಡಿಗೆ ಬಂದಿದ್ದ ಕುಟುಂಬ ಕಂಗಾಲ್, ಮುಂದೆ?

ವೀಕ್​ ಎಂಡ್ ಹಿನ್ನೆಲೆಯಲ್ಲಿ ಪಂಜಾಬ್​ನಿಂದ ತಮಿಳುನಾಡಿಗೆ ಬಂದಿದ್ದ ಕುಟುಂಬವೊಂದು ಚುನಾವಣಾ ಅಧಿಕಾರಿಗಳ ಕೈಗೆ ಸಿಕ್ಕಿ ಆತಂಕಕ್ಕೆ ಒಳಗಾದ ಘಟನೆ ನಡೆದಿದೆ. ಪ್ರವಾಸದ ಖರ್ಚು ವೆಚ್ಚಗಳಿಗಾಗಿ ಈ ಕುಟುಂಬ ತಂದಿದ್ದ 69,400 ರೂಪಾಯಿಗಳನ್ನು ಅಧಿಕಾರಿಗಳು ಕಿತ್ತುಕೊಂಡು ತನಿಖೆಗೆ ಒಳಪಡಿಸಿದ್ದರು.

ಹಣವನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಮಹಿಳೆ ಗಳಗಳನೆ ಕಣ್ಣೀರು ಇಟ್ಟಿದ್ದಾಳೆ. ಇದು ಭಾರೀ ಟೀಕೆಗೆ ಗುರಿಯಾಗಿತ್ತು. ಅಲ್ಲದೇ, ಮಹಿಳೆ ಕಣ್ಣೀರು ಇಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಚುನಾವಣಾ ಅಧಿಕಾರಿಗಳು ಕಳೆದ ಭಾನುವಾರ ತಪಾಸಣೆ ವೇಳೆ, ಪಂಜಾಬ್ ಮೂಲದ ಕುಟುಂಬದ ಹಣವನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿಪಂಜಾಬ್ ವಿರುದ್ಧ RCBಗೆ ರೋಚಕ ಗೆಲುವು; ಬೆಂಗಳೂರು ತಂಡದ ಗೆಲುವಿನ ಹಿಂದಿದೆ 8 ಕಾರಣಗಳು..!

ದೇಶದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ದಾಖಲೆ ಇಲ್ಲದೇ ಭಾರೀ ಪ್ರಮಾಣದ ಹಣವನ್ನು ಇಟ್ಟುಕೊಂಡು ಓಡಾಡುವಂತಿಲ್ಲ. ಹೀಗಾಗಿ ನಿಮ್ಮ ಹಣವನ್ನು ವಶಕ್ಕೆ ಪಡೆಯುತ್ತಿದ್ದೇವೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಆಗ ನೀತಿ ಸಂಹಿತೆ ಜಾರಿ ಇರೋದು ನಮಗೆ ಗೊತ್ತಿಲ್ಲ. ನಾವು ಪ್ರವಾಸಕ್ಕೆಂದು ಬಂದಿದ್ದೇವೆ ಎಂದು ಇಬ್ಬರು ಮಕ್ಕಳ ಜೊತೆ ಬಂದ ದಂಪತಿ ಅಧಿಕಾರಿಗಳಿಗೆ ತಿಳಿ ಹೇಳಲು ಪ್ರಯತ್ನಿಸಿದ್ದಾರೆ. ನಂತರ ಹಣವನ್ನು ಅಧಿಕಾರಿಗಳು ವಾಪಸ್ ನೀಡಿದ್ದಾರೆ ಎಂದು ವರದಿಯಾಗಿದೆ. ನೀಲ್ಗಿರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

publive-image

ಚುನಾವಣಾ ಆಯೋಗ ಹೇಳೋದು ಏನು..?
ಕೇಂದ್ರ ಚುನಾವಣಾ ಆಯೋಗದ ಮುಂದೆ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ಗುರಿ ಇದೆ. ನೀತಿ ಸಂಹಿತೆ ಜಾರಿ ಇರುವಾಗ ಯಾವುದೇ ವ್ಯಕ್ತಿ 50 ಸಾವಿರಕ್ಕಿಂತ ಹೆಚ್ಚಿನ ನಗದು ಹಾಗೂ 10 ಸಾವಿರಕ್ಕೂ ಹೆಚ್ಚು ಮೌಲ್ಯದ ಬೆಲೆ ಬಾಳುವ ಉಡುಗೊರೆಗಳನ್ನು ದಾಖಲೆ ಇಲ್ಲದೇ ಇಟ್ಟುಕೊಂಡು ತಿರುಗುವಂತಿಲ್ಲ. ಚುನಾವಣೆ ಸಂದರ್ಭದಲ್ಲಿ ಅದು ನಿಯಮ ಬಾಹೀರ ಎಂದು ಚುನಾವಣಾ ಆಯೋಗ ಹೇಳುತ್ತದೆ. ಒಂದು ವೇಳೆ ಅವುಗಳನ್ನು ಇಟ್ಟುಕೊಂಡು ಓಡಾಡಿದ್ರೆ ಸರಿಯಾದ ದಾಖಲೆಗಳು ಇರಬೇಕು. ದಾಖಲೆಗಳನ್ನು ನೀಡಿದ್ರೆ ಚುನಾವಣಾ ಆಯೋಗ ಅದನ್ನು ಮರಳಿಸುತ್ತದೆ.

ಒಂದು ವೇಳೆ ವಶಕ್ಕೆ ಪಡೆದ ಹಣದ ಮೊತ್ತ 10 ಲಕ್ಷಕ್ಕಿಂತ ಹೆಚ್ಚಿದ್ದರೆ, ಪ್ರಕರಣವನ್ನು ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆ ಆಗಲಿದೆ. ದೇಶದಲ್ಲಿ ಲೋಕಸಭೆ ಚುನಾವಣೆಯು ಏಪ್ರಿಲ್ 19ರಿಂದ ಶುರುವಾಗಿ 7 ಹಂತದಲ್ಲಿ ಜೂನ್ ಒಂದರವರೆಗೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment